ಕೂದಲೆಳೆ ಅಂತರದಲ್ಲಿ ಗೆದ್ದ ಪಾಕ್; ಆಫ್ಘನ್ ಹೋರಾಟಕ್ಕೆ ಎಲ್ಲೆಡೆ ಶ್ಲಾಘನೆ

ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಗೆದ್ದ ಪಾಕಿಸ್ತಾನ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡಿದೆಯಾದರೂ, ಅನನುಭವಿ ಆಫ್ಘಾನಿಸ್ತಾನ ತಂಡದ ಆಟಗಾರರು ಅಕ್ಷರಶಃ ಪಾಕಿಸ್ತಾನಕ್ಕೆ ಸೋಲಿನ ದರ್ಶನ ಮಾಡಿಸಿದ್ದರು.
ಆಫ್ಗಾನಿಸ್ತಾನ ಹೋರಾಟ
ಆಫ್ಗಾನಿಸ್ತಾನ ಹೋರಾಟ
Updated on: 
ಲೀಡ್ಸ್: ಕ್ರಿಕೆಟ್ ಶಿಶು ಆಫ್ಘಾನಿಸ್ತಾನದ ವಿರುದ್ಧ ಗೆದ್ದ ಪಾಕಿಸ್ತಾನ ಸೆಮೀಸ್ ಆಸೆ ಜೀವಂತವಾಗಿರಿಸಿಕೊಂಡಿದೆಯಾದರೂ, ಅನನುಭವಿ ಆಫ್ಘಾನಿಸ್ತಾನ ತಂಡದ ಆಟಗಾರರು ಅಕ್ಷರಶಃ ಪಾಕಿಸ್ತಾನಕ್ಕೆ ಸೋಲಿನ ದರ್ಶನ ಮಾಡಿಸಿದ್ದರು.
ಹೌದು... ಲೀಡ್ಸ್ ನ ಹೆಡಿಂಗ್ಲೇಯಲ್ಲಿ ಇಂದು ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆಫ್ಘಾನಿಸ್ತಾನ ವಿರುದ್ಧ 3 ವಿಕೆಟ್ ಗಳ ಪ್ರಯಾಸದ ಜಯ ದಾಖಲಿಸಿದೆ. ಆದರೆ ಪಾಕಿಸ್ತಾನಕ್ಕೆ ಈ ಜಯ ಅಷ್ಟು ಸುಲಭವಾಗಿರಲಿಲ್ಲ. ಆಫ್ಘಾನಿಸ್ತಾನ ತಂಡದ ಆಟಗಾರರು ತಮ್ಮ ಶಿಸ್ತಿನ ಆಟದ ಮೂಲಕ ಅಕ್ಷರಶಃ ಪಾಕಿಸ್ತಾನವನ್ನು ಸೋಲಿನ ದವಡೆಗೆ ನೂಕಿದ್ದರು. 
ಆಫ್ಧಾನಿಸ್ತಾನ ತಂಡ ಸಾಧಾರಣ ಗುರಿಯನ್ನೇ ನೀಡಿತ್ತಾದರೂ, ಈ ಅಲ್ಪ ಗುರಿಯನ್ನೇ ಬೆನ್ನು ಹತ್ತಲು ಪಾಕಿಸ್ತಾನ ತಂಡದ ಬ್ಯಾಟ್ಸ್ ಮನ್ ಗಳು ತಿಣುಕಾಡಿದ್ದರು. ಗೆಲುವಿಗಾಗಿ ಪಾಕಿಸ್ತಾನ ಕೊನೆಯ ಓವರ್ ವರೆಗೂ ಹೋರಾಟ ನಡೆಸಬೇಕಾಯಿತು. ಮೊದಲ ಓವರ್ ನಲ್ಲೇ ಪಾಕಿಸ್ತಾನಕ್ಕೆ ಶಾಕ್ ನೀಡಿದ ಆಪ್ಘನ್ ಬೌಲರ್ ಮುಜೀಬ್ ಪಾಕಿಸ್ತಾನದ ಫಕರ್ ಜಮಾನ್ ರನ್ನು ಶೂನ್ಯಕ್ಕೆ ಔಟ್ ಮಾಡಿದರು. ಆ ಹೊತ್ತಿಗೆ ಪಾಕಿಸ್ತಾನ ಕೂಡ ರನ್ ಖಾತೆಯನ್ನೇ ತೆರೆದಿರಲಿಲ್ಲ. ಮೊದಲ ಆಘಾತದ ಬಳಿಕ ಪಾಕ್ ಬ್ಯಾಟ್ಸ್ ಮನ್ ಗಳು  ರಕ್ಷಣಾತ್ಮಕ ಆಟದ ಮೊರೆ ಹೋದರು. 
ಆಪ್ಘಾನಿಸ್ತಾನದ ಫೀಲ್ಡಿಂಗ್ ಕೂಡ ಅಷ್ಟೇ ಶಿಸ್ತಿನಿಂದ ಕೂಡಿತ್ತು. ಪಾಕಿಸ್ತಾನದ ಇಬ್ಬರು ಆಟಗಾರರು ರನೌಟ್ ಗೆ ಬಲಿಯಾಗಿದ್ದು, ಇದಕ್ಕೆ ಸ್ಪಷ್ಟ ಉದಾಹರಣೆ ಎನ್ನಬಹುದು. ಆದರೆ ಪಾಕಿಸ್ತಾನದ ಮಧ್ಯಮ ಕ್ರಮಾಂದ ಆಟಗಾರ ಇಮಾದ್ ವಸೀಮ್ ಗಟ್ಟಿಯಾಗಿ ಕ್ರೀಸ್ ನಲ್ಲಿ ನಿಂತು ಕೊನೆಯವರೆಗೂ ಆಡಿ ಪಾಕಿಸ್ತಾನಕ್ಕೆ ಗೆಲುವು ತಂದುಕೊಟ್ಟರು. ಆದರೆ ಈ ಪಂದ್ಯದಲ್ಲಿ ಪಾಕಿಸ್ತಾನ ವಿಜಯಿಯಾದರೂ, ಕ್ರಿಕೆಟ್ ಶಿಶು ಆಫ್ಗಾನಿಸ್ತಾನ ವಿರೋಚಿತ ಹೋರಾಟ ನೀಡಿ ಕ್ರಿಕೆಟ್ ಪ್ರೇಮಿಗಳ ಶ್ಲಾಘನೆಗೆ ಪಾತ್ರವಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com