41 ನೇ ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ, ಅಂತಾರಾಷ್ಟ್ರೀಯ ಏಕದಿನ ಸರಾಸರಿಯನ್ನು 60.08 ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ. 217 ಇನ್ನಿಂಗ್ಸ್ ಗಳಲ್ಲಿ ಕೊಹ್ಲಿಯ ಅಂತಾರಾಷ್ಟ್ರೀಯ ಏಕದಿನ ಸರಾಸರಿ 60.08 ರಷ್ಟಿದ್ದು, ಕಡಿಮೆ ಇನ್ನಿಂಗ್ಸ್ ಗಳಲ್ಲಿ 60 ಕ್ಕಿಂತಲೂ ಹೆಚ್ಚು ಸರಾಸರಿಯನ್ನು ತಲುಪಿರುವ ಎರಡನೇ ಕ್ರಿಕೆಟಿಗರಾಗಿದ್ದಾರೆ. ಆಸ್ಟ್ರೇಲಿಯಾದ ಲೆಜೆಂಡ್ 102 ಇನ್ನಿಂಗ್ಸ್ ಗಳಲ್ಲಿ 62.13 ಸರಾಸರಿ ತಲುಪಿದ್ದ ಬ್ಯಾಟ್ಸ್ಮನ್ ಮೈಕೆಲ್ ಬೆವನ್ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗನಾಗಿದ್ದಾರೆ.