ತವರಿನಲ್ಲಿ ಕೊನೆಯ ಪಂದ್ಯ, ಅಭಿಮಾನಿಗಳಿಗೆ ಧೋನಿ ವಿಶೇಷ ಗಿಫ್ಟ್.. ಬ್ಯಾಟ್ ಬಿಟ್ಟು ಟೆನ್ನಿಸ್ ರ್ಯಾಕೆಟ್ ಹಿಡಿದ 'ತಲಾ'

ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ತವರು ನೆಲದಲ್ಲಿ ಕೊನೆಯ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತವರಿನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಬ್ಯಾಟ್ ಬಿಟ್ಟು ಟೆನ್ನಿಸ್ ರ್ಯಾಕೆಟ್ ಹಿಡಿದ 'ತಲಾ' ಧೋನಿ
ಬ್ಯಾಟ್ ಬಿಟ್ಟು ಟೆನ್ನಿಸ್ ರ್ಯಾಕೆಟ್ ಹಿಡಿದ 'ತಲಾ' ಧೋನಿ
Updated on: 
ಚೆನ್ನೈ: ಹಾಲಿ ವರ್ಷದ ಐಪಿಎಲ್ ಟೂರ್ನಿಯಲ್ಲಿ ತವರು ನೆಲದಲ್ಲಿ ಕೊನೆಯ ಪಂದ್ಯವನ್ನಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ತವರಿನ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಹಾಲಿ ಐಪಿಎಲ್ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದ್ದು, ಎಲ್ಲ ತಂಡಗಳು ಪ್ಲೇ ಆಫ್ ಸುತ್ತಿಗಾಗಿ ಅಂತಿಮ ಕಸರತ್ತು ನಡೆಸುತ್ತಿವೆ. ಆದರೆ ಯಶಸ್ಸಿನ ಹಾದಿಯಲ್ಲಿ ಸಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇಆಫ್ ನಲ್ಲಿ ಈಗಾಗಲೇ ತನ್ನ ಸ್ಥಾನ ಭದ್ರ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಇದೀಗ ಐಪಿಎಲ್ ಟೂರ್ನಿ ಮತ್ತಷ್ಟು ರೋಚಕತೆ ಸೃಷ್ಟಿ ಮಾಡಿದ್ದು, ಬುಧವಾರ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಚೆನ್ನೈ ತಂಡದ ಪಾಲಿಗೆ ತವರು ಕ್ರೀಡಾಂಗಣದ ಕೊನೆಯ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 80 ರನ್ ಗಳಿಂದ ಮಣಿಸಿದ ಧೋನಿ ಪಡೆ ತವರಿನ ಅಭಿಮಾನಿಗಳಿಗೆ ಗೆಲುವಿನ ವಿದಾಯ ಹೇಳಿತು.
ಅಲ್ಲದೆ ಪಂದ್ಯ ಮುಕ್ತಾಯದ ಬಳಿಕ ಧೋನಿ ಹಾಗೂ ತಂಡ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಕೂಡ ನೀಡಿದರು.  ಟೆನ್ನಿಸ್ ಬಾಲ್ ಗಳನ್ನು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ಬೀಸುವ ಮೂಲಕ ಧೋನಿ ಅಷ್ಟು ಅಭಿಮಾನಿಗಳ ಮನಗೆಲ್ಲುವ ಪ್ರಯತ್ನ ನಡೆಸಿದರು. ಈ ಕುರಿತು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಿಎಸ್ ಕೆ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಕೊಂಡಿದೆ. ಈ ವಿಡಿಯೋವನ್ನು ಸುಮಾರು 17 ಸಾವಿರ ಮಂದಿ ಲೈಕ್ ಮಾಡಿದ್ದಾರೆ.
ಪಂದ್ಯದ ವೇಳೆ ಧೋನಿ ಮೈದಾನ ಪ್ರವೇಶ ಮಾಡುತ್ತಿದಂತೆ ನೆರೆದಿದ್ದ ಅಭಿಮಾನಿಗಳ ಅವರ ಘೋಷಣೆ ಕೂಗಿ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಸ್ಟೇಡಿಯಂ ಮೇಲೆ ಕುಳಿತ್ತಿದ್ದ ಅಭಿಮಾನಿಗಳಿಗೂ ಟೆನ್ನಿಸ್ ರಾಕೆಟ್ ನಿಂದ ಚೆಂಡನ್ನು ಹೊಡೆದಿದ್ದರು.  ಆಡಿರುವ 13 ಪಂದ್ಯಗಳಲ್ಲಿ ಸಿಎಸ್‍ಕೆ 9ರಲ್ಲಿ ಜಯ ಪಡೆದು 18 ಅಂಕಗಳಿಸಿದೆ. 8 ಪಂದ್ಯಗಳಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ 16 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com