

ನವದೆಹಲಿ: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 148 ರನ್ ಪೇರಿಸಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 148 ರನ್ ಪೇರಿಸಿದ್ದು ಬಾಂಗ್ಲಾಗೆ 149 ರನ್ ಗಳ ಗುರಿ ನೀಡಿದೆ.
ಟೀಂ ಇಂಡಿಯಾ ಪರ ರೋಹಿತ್ ಶರ್ಮಾ 9, ಶಿಖರ್ ಧವನ್ 41, ಕೆಎಲ್ ರಾಹುಲ್ 15, ಶ್ರೇಯಸ್ ಅಯ್ಯರ್ 22, ರಿಷಬ್ ಪಂತ್ 27, ಕೃನಾಲ್ ಪಾಂಡ್ಯ ಅಜೇಯ 15 ಮತ್ತು ವಾಷ್ಟಿಂಗನ್ ಸುಂದರ್ ಅಜೇಯ 14 ರನ್ ಬಾರಿಸಿದ್ದಾರೆ.
ಬಾಂಗ್ಲಾ ಪರ ಬೌಲಿಂಗ್ ನಲ್ಲಿ ಶಫಿಯುಲ್ ಇಸ್ಲಾಂ ಮತ್ತು ಅನಿನುಲ್ ಇಸ್ಲಾಂ ತಲಾ 2 ವಿಕೆಟ್ ಮತ್ತು ಅಫಿಫ್ ಹುಸೈನ್ 1 ವಿಕೆಟ್ ಪಡೆದಿದ್ದಾರೆ.