

ಕೋಲ್ಕತ್ತಾ: ಭರ್ಜರಿ ಹಾಗೂ ಕ್ಲಾಸಿಕ್ ಸಿಕ್ಸ್ ಹೊಡೆಯುವುದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಖ್ಯಾತರು. ಆದರೆ ಪ್ರವಾಸಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್ ಸಿಡಿಸಿದ ಸಿಕ್ಸ್ ಕಂಡು ಕೊಹ್ಲಿಯೇ ಶಾಕ್ ಆಗಿದ್ದಾರೆ.
ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು ಮೊಹಮ್ಮದ್ ಶಮಿ ಬೌಲಿಂಗ್ ನಲ್ಲಿ ಬಾಂಗ್ಲಾದ ಬ್ಯಾಟ್ಸ್ ಮನ್ ಮೆಹಿದಿ ಲೇಗ್ ಸೈಡ್ ನಲ್ಲಿ ಬ್ಯಾಟ್ ಬೀಸಿದರು. ಚೆಂಡು ಕೀಪರ್ ತಲೆ ಮೇಲೆ ಹೋಗಿ ಬೌಂಡರಿ ಸೇರಿತು.
ಇನ್ನು ಮೆಹಿದಿ ಸಿಡಿಸಿದ ಸಿಕ್ಸರ್ ಕಂಡು ವಿರಾಟ್ ಕೊಹ್ಲಿ ತಲೆ ಕೈಯಿಟ್ಟು ಅಬ್ಬಾ ಎನ್ನುವಂತೆ ಲುಕ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.