ಕಟ್ಟಾ ಅಭಿಮಾನಿ ಎದೆ ಮೇಲೆ ವಿರಾಟ್ ಟ್ಯಾಟೂ: ತಬ್ಬಿಕೊಂಡು ಸಂತೋಷಪಟ್ಟ ಕೊಹ್ಲಿ!

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬ ತಮ್ಮ ದೇಹದ ಮೇಲೆ ಕೊಹ್ಲಿಯ ಟ್ಯೂಟುಗಳನ್ನು ಹಾಕಿಸಿಕೊಂಡಿದ್ದು ಇದನ್ನು ನೋಡಿದ ವಿರಾಟ್ ಅಭಿಮಾನಿಯನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on: 

ಹೈದರಾಬಾದ್: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಕಟ್ಟಾ ಅಭಿಮಾನಿಯೊಬ್ಬ ತಮ್ಮ ದೇಹದ ಮೇಲೆ ಕೊಹ್ಲಿಯ ಟ್ಯೂಟುಗಳನ್ನು ಹಾಕಿಸಿಕೊಂಡಿದ್ದು ಇದನ್ನು ನೋಡಿದ ವಿರಾಟ್ ಅಭಿಮಾನಿಯನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಒಡಿಶಾ ಮೂಲದ ಪಿಂಟು ಬೆಹೆರಾರನ್ನು ಭೇಟಿ ಮಾಡಿದರು. ಪಿಂಟು ತಮ್ಮ ಎದೆ ಮೇಲೆ ಕೊಹ್ಲಿಯ ಮುಖದ ಹಾಗೂ ಬೆನ್ನಿನ ಮೇಲೆ ಅವರ ಜೆರ್ಸಿ ನಂಬರ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 

ಇದರ ಜೊತೆಗೆ ಬೆನ್ನ ಮೇಲೆ ವಿರಾಟ್ ಕೊಹ್ಲಿ 2009ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಿರುವುದು, 2013 ಅರ್ಜುನ ಅವಾರ್ಡ್ ಹಾಗೂ 2017ರಲ್ಲಿ ಪದ್ಮಶ್ರೀ ಪಡೆದಿದ್ದರು. ಹಾಗಾಗಿ ಪಿಂಟು ತಮ್ಮ ಬೆನ್ನಿನ ಮೇಲೆ ಇದನ್ನೆಲ್ಲಾ ಸೇರಿಸಿ ಒಟ್ಟು 15 ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com