ಕಮ್ ಬ್ಯಾಕ್ ಮಾಡುವ ನಿರ್ಧಾರ ಸ್ವತಃ ಧೋನಿಯೇ ತಿಳಿಸಬೇಕು: ರವಿಶಾಸ್ತ್ರಿ

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಲಭ್ಯತೆಯು ಅವರು ತಂಡಕ್ಕೆ ಮರಳಲು ಬಯಸುತ್ತಾರೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಎಂಎಸ್ ಧೋನಿ
ಎಂಎಸ್ ಧೋನಿ
Updated on: 

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಲಭ್ಯತೆಯು ಅವರು ತಂಡಕ್ಕೆ ಮರಳಲು ಬಯಸುತ್ತಾರೋ ಇಲ್ಲವೋ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 

ಕ್ರಿಕೆಟ್ ವಿಶ್ವಕಪ್ ಬಳಿಕ ಧೋನಿ ವಿಶ್ರಾಂತಿ ಪಡೆದಿದ್ದಾರೆ. ಅಲ್ಲದೆ ವಿರಾಮ ದಿನಾಂಕವನ್ನು ವಿಸ್ತರಿಸಿದ್ದು ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಯಲ್ಲಿ ಆಯ್ಕೆ ಮಾಡಲು ಸ್ವತಃ ಲಭ್ಯವಿಲ್ಲ ಎಂದರು. 

ಮತ್ತೆ ಕ್ರಿಕೆಟ್ ಆಡಲು ಯಾವಾಗ ಪ್ರಾರಂಭಿಸಬೇಕು ಮತ್ತು ಅವರ ಮುಂದಿನ ನಿರ್ಧಾರಗಳ ಬಗ್ಗೆ ಆಯ್ಕೆದಾರರಿಗೆ ತಿಳಿಸಲು ಧೋನಿ ಸ್ವತಃ ನಿರ್ಧರಿಸಬೇಕು ಎಂದು ರವಿಶಾಸ್ತ್ರಿ ಸ್ಪಷ್ಟಪಡಿಸಿದ್ದಾರೆ. 

ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಟೂರ್ನಿ ಬಳಿಕ ಎಂಎಸ್ ಧೋನಿ ಕ್ರಿಕೆಟ್ ಬ್ಯಾಟ್ ಮುಟ್ಟಿಲ್ಲ. ಸದ್ಯ ವಿಶ್ರಾಂತಿಯಲ್ಲಿರುವ ಧೋನಿ ಅವರು ಡಿಸೆಂಬರ್ ನಲ್ಲಿ ಭಾರತ ಪರ ಆಡಲು ಲಭ್ಯವಿರುತ್ತಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com