ಪುಣೆ: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಪಿಚ್ ಮಧ್ಯೆ ವಿಚಿತ್ರವಾಗಿ ಆಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜಡೇಜಾ ಹೀಗೆ ಮಾಡಲು ಕಾರಣ ಕೇಳಿದ್ರೆ ನಕ್ತೀರಾ.
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದರು. ಕೇಶವ್ ಮಹಾರಾಜ ಬೌಲಿಂಗ್ ನಲ್ಲಿ ಜಡೇಜಾ ಸಿಂಗಲ್ ರನ್ ತೆಗೆದುಕೊಳ್ಳಲು ಮುಂದಾದರು. ಆದರೆ ನಾನ್ ಸ್ಟ್ರೈಕ್ ನಲ್ಲಿದ್ದ ಕೊಹ್ಲಿ ರನ್ ಬೇಡ ಎಂದು ಹೇಳಿದ್ದರು.
ಈ ವೇಳೆ ಜಡೇಜಾ ಪಿಚ್ ಮಧ್ಯೆ ಇದ್ದಿದ್ದರಿಂದ ಅಂಪೈರ್ ವಾರ್ನ್ ಮಾಡಬಹುದು ಎಂಬ ಹೆದರಿಕೆಯಿಂದ ಪಿಚ್ ಮಧ್ಯದಿಂದ ಪಕ್ಕಕ್ಕೆ ಹೆಗರಿದರು. ಇದು ನೋಡುಗರನ್ನು ರಂಜಿಸಿತ್ತು. ಸ್ವತಃ ವಿರಾಟ್ ಕೊಹ್ಲಿಯೇ ನಕ್ಕು ಸುಮ್ಮನಾದರು.
ಕೊನೆಗೆ ಅಂಪೈರ್ ಕ್ರಿಸ್ ಗಫೇನಿ ಒಂದು ವಾರ್ನಿಂಗ್ ಕೊಟ್ಟು ಸುಮ್ಮನಾದರು. ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದ ಜಡೇಜಾ 91 ರನ್ ಗೆ ಔಟಾಗಿ ಶತಕ ವಂಚಿತರಾದರು.
Advertisement