ಒಪ್ಪಂದದ ಉಲ್ಲಂಘನೆ: ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಗೆ ಬಿಸಿಸಿಐ ನೋಟೀಸ್

ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ರಿಕೆಟರ್ ದಿನೇಶ್ ಕಾರ್ತಿಕ್ ಗೆ  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೋಟಿಸ್ ನೀಡಿದೆ.
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್
Updated on

ಲಂಡನ್: ಪ್ರಮುಖ ಒಪ್ಪಂದಗಳ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟೀಂ ಇಂಡಿಯಾ ಕ್ರಿಕೆಟರ್ ದಿನೇಶ್ ಕಾರ್ತಿಕ್ ಗೆ  ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೋಟಿಸ್ ನೀಡಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಯ ಆರಂಭಿಕ ಪಂದ್ಯದಲ್ಲಿ ಸೇಂಟ್ ಕಿಟ್ಸ್ ಮತ್ತು ನೆವಿಸ್ ನಡುವಣ ಸಿಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಕಾರ್ತಿಕ್ ಟ್ರಿನ್‌ಬಾಗೊ ನೈಟ್ ರೈಡರ್ಸ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಅವರಿಗೆ ನೋಟೀಸ್ ನೀಡಲಾಗಿದೆ.

ಬಿಸಿಸಿಐ ಒಪ್ಪಂದದಂತೆ ಯಾವುದೇ ಆಟಗಾರನು ಮಂಡಳಿಯ ಅನುಮತಿ ಪಡೆಯದೆ ಯಾವುದೇ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಲು ಅಥವಾ ಹಾಜರಾಗಲು ಅನುಮತಿ ಇಲ್ಲ. 

ಸಿಪಿಎಲ್ ಪಂದ್ಯದ ಸಮಯದಲ್ಲಿ, ಕಾರ್ತಿಕ್ ಮಾಜಿ ಕಿವೀಸ್ ನಾಯಕ ಕ ಬ್ರೆಂಡನ್ ಮೆಕಲಮ್ ಅವರ ಪಕ್ಕದಲ್ಲಿ ಕುಳಿತಿದ್ದರು. ಕಾರ್ತಿಕ್ ಅವರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರ್ಯಾಂಚೈಸ್ ಮಾಲೀಕರು, ಕೋಲ್ಕತಾ ನೈಟ್ ರೈಡರ್ಸ್ ಸಿಪಿಎಲ್ನಲ್ಲಿ ಟ್ರಿನ್ಬಾಗೊ ನೈಟ್ ರೈಡರ್ಸ್ಮ`ಾಲಿಕತ್ವ ಹೊಂದಿದ್ದಾರೆ ಎನ್ನುವುದು ಇಲ್ಲಿ ಗಮನಾರ್ಹ.

ಸಧ್ಯ ಬಿಸಿಸಿಐ ಕಾರ್ತಿಕ್ ಅವರಿಗೆ ನೋಟೀಸ್ ನಿಡಿ ಉತ್ತರಿಸಲು ಒಂದು ವಾರದ ಕಾಲಾವಕಾಶ ನೀಡಿದೆ.

 ಇತ್ತೀಚೆಗೆ ಮುಕ್ತಾಯಗೊಂಡ ವಿಶ್ವಕಪ್‌ನಲ್ಲಿ ಕಾರ್ತಿಕ್ ಕೊನೆಯ ಬಾರಿಗೆ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅವರು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯವನ್ನಾಡಿದ್ದರು. ಆದರೆ ಟೀಂ ಇಂಡಿಯಾ ಸೋಲನುಭವಿಸಿ ಸರಣಿಯಿಂದ ಹೊರಬಿದ್ದಿತ್ತು. ದರ ನಂತರ, ಅವರನ್ನು ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ ಸರಣಿಯಿಂದ ಕಾರ್ತಿಕ್ ಅವರನ್ನು ಹೊರಗಿಡಲಾಗಿತ್ತು. ಅಲ್ಲದೆ ಮುಂಬರುವ  ವಿಜಯ್ ಹಜಾರೆ ಟ್ರೋಫಗಾಗಿ ತಮಿಳುನಾಡು ತಂಡದ ನಾಯಕನನ್ನಾಗಿ ಅವರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com