ವಿಂಡೀಸ್ ಪ್ರವಾಸ: ಮಿಥಾಲಿ ಹಾಗೂ ಹರ್ಮನ್ ಪ್ರೀತ್ ಗೆ ಪಟ್ಟ

ಅನುಭವಿ ಬ್ಯಾಟ್ಸ್ ಮನ್ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನವೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಹಾಗೂ ಟಿ-20 ತಂಡವನ್ನು ಮುನ್ನಡೆಸಲಿದ್ದಾರೆ.
ಮಿಥಾಲಿ ರಾಜ್
ಮಿಥಾಲಿ ರಾಜ್
Updated on

ನವದೆಹಲಿ: ಅನುಭವಿ ಬ್ಯಾಟ್ಸ್ ಮನ್ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನವೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಹಾಗೂ ಟಿ-20 ತಂಡವನ್ನು ಮುನ್ನಡೆಸಲಿದ್ದಾರೆ. 

ಪ್ರವಾಸದ ವೇಳೆ ಭಾರತ ಆರಂಭದಲ್ಲಿ ಮೂರು ಏಕದಿನ ಹಾಗೂ ಟಿ-20 ಪಂದ್ಯವನ್ನು ಸೆಂಟ್ ಲೂಯಿಸ್ ಹಾಗೂ ಗಯಾನ ಮೈದಾನದಲ್ಲಿ ಆಡಲಿದೆ. ಪ್ರವಾಸದ ಮೊದಲ ಪಂದ್ಯ ನವೆಂಬರ್ ಒಂದರಂದು ನಡೆಯಲಿದ್ದು, ಕೊನೆಯ ಪಂದ್ಯ ನ.20ರಂದು ನಡೆಯಲಿದೆ. 

ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧನಾ, ಜೇಮಿನಿ ರೊಡಿಗಸ್, ದೀಪ್ತಿ ಶರ್ಮಾ, ಪೂನಮ್ ರಾವತ್, ಡಿ. ಹೇಮಲತಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂನಮ್ ಯಾದವ್, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್, ತನ್ಯಾ ಭಾಟಿಯಾ, ಪ್ರಿಯಾ ಪೂನಿಯಾ, ಸುಷಮಾ ವರ್ಮಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com