ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಜಯ; ದಾಖಲೆ ಬರೆದ ಟೀಂ ಇಂಡಿಯಾ

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಜಯಭೇರಿ ಭಾರಿಸುವ ಮೂಲಕ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.
ಸರಣಿ ಗೆದ್ದ ಕೊಹ್ಲಿ ಪಡೆ
ಸರಣಿ ಗೆದ್ದ ಕೊಹ್ಲಿ ಪಡೆ

ಕಟಕ್: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಜಯಭೇರಿ ಭಾರಿಸುವ ಮೂಲಕ ಟೀಂ ಇಂಡಿಯಾ ಏಕದಿನ ಸರಣಿಯನ್ನು ಕೈವಶ ಮಾಡಿಕೊಳ್ಳುವ ಮೂಲಕ ಅಪೂರ್ವ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಏಕದಿನ ಸರಣಿ ಗೆಲುವಿನ ದೃಷ್ಟಿಯಿಂದ ನಿನ್ನೆಯ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿತ್ತು. ಆದರೂ ವಿಂಡೀಸ್ ಗಿಂತ ಈ ಪಂದ್ಯದ ಗೆಲವು ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿತ್ತು. ಕಾರಣ ಈ ಪಂದ್ಯವನ್ನು ಗೆಲ್ಲುವ ಮೂಲಕ ವಿರಾಟ್ ಕೊಹ್ಲಿ ಪಡೆ ಪ್ರವಾಸಿ ಕೆರಿಬಿಯನ್ನರ ವಿರುದ್ಧ ಸತತ 10ನೇ ದ್ವಿಪಕ್ಷೀಯ ಸರಣಿ ಗೆಲುವು ಸಾಧಿಸುವ ಹಂಬಲ ಹೊಂದಿತ್ತು. ಆ ಮೂಲಕ ಮತ್ತೊಂದು ದಾಖಲೆಗೆ ಕೊಹ್ಲಿ ಪಡೆ ತುದಿಗಾಲಲ್ಲಿ ನಿಂತಿತ್ತು.

ನಿರೀಕ್ಷೆಯಂತೆಯೇ ಮೂರನೇ ಏಕದಿನ ಪಂದ್ಯವನ್ನೂ ರೋಚಕ 4 ವಿಕೆಟ್ ಗಳ ಅಂತರದಲ್ಲಿ ಜಯಿಸುವ ಮೂಲಕ ಟೀಂ ಇಂಡಿಯಾ ದಾಖಲೆ ನಿರ್ಮಾಣ ಮಾಡಿದೆ. ಈ ಗೆಲುವಿನ ಮೂಲಕ ಕೊಹ್ಲಿ ಪಡೆ ವಿಂಡೀಸ್ ವಿರುದ್ಧ ಸತತ 10ನೇ ಸರಣಿ ಜಯಿಸಿದ ದಾಖಲೆ ನಿರ್ಮಾಣ ಮಾಡಿದೆ. 

2006ರಲ್ಲಿ ಕೊನೆಯದಾಗಿ ವಿಂಡೀಸ್ ನೆಲದಲ್ಲಿ ಭಾರತ ಏಕದಿನ ಸರಣಿ ಸೋತಿದೆ. ಬಳಿಕ 2007, 2011-12, 2013-14, 2014-15, 2018-19ರಲ್ಲಿ ತವರಿನಲ್ಲಿ ಮತ್ತು 2009, 2011, 2017, 2019ರಲ್ಲಿ ವಿಂಡೀಸ್​ನಲ್ಲಿ ಭಾರತ ಸರಣಿ ಜಯಿಸಿದೆ. ಭಾರತ 2005ರಲ್ಲಿ ಕೊನೆಯದಾಗಿ ತವರಿನಲ್ಲಿ ಸತತ 2ನೇ ಏಕದಿನ ಸರಣಿ ಸೋತಿತ್ತು. ವಿಂಡೀಸ್ ವಿರುದ್ಧ 2002ರ ನವೆಂಬರ್​ನಲ್ಲಿ 3-4ರಿಂದ ಸರಣಿ ಸೋತಿದ್ದರೆ, ಬಳಿಕ 2005ರ ಏಪ್ರಿಲ್​ನಲ್ಲೇ ತವರಿನಲ್ಲಿ ದ್ವಿಪಕ್ಷೀಯ ಸರಣಿ ಆಡಿದ್ದ ಭಾರತ, 2-4ರಿಂದ ಪಾಕ್​ಗೆ ಮಣಿದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com