ಎಂಎಸ್ ಧೋನಿ ರನೌಟ್‌ - ಪಂದ್ಯದ ಟರ್ನಿಂಗ್‌ ಪಾಯಿಂಟ್‌: ರಾಸ್ ಟೇಲರ್‌

ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎಂಎಸ್ ಧೋನಿ ರನೌಟ್ ಆಗಿದ್ದೇ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹೇಳಿದ್ದಾರೆ.

Published: 11th July 2019 12:00 PM  |   Last Updated: 11th July 2019 01:25 AM   |  A+A-


ICC WorldCup 2019: Dhoni's run out was crucial, believes Ross Taylor

ಸಂಗ್ರಹ ಚಿತ್ರ

Posted By : SVN SVN
Source : Online Desk
ಲಂಡನ್: ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎಂಎಸ್ ಧೋನಿ ರನೌಟ್ ಆಗಿದ್ದೇ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹೇಳಿದ್ದಾರೆ.

ಬುಧವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್‌ 18 ರನ್‌ಗಳಿಂದ ಗೆದ್ದು ಫೈನಲ್ ತಲುಪಿತು. ಈ ಪಂದ್ಯದಲ್ಲಿ ರಾಸ್‌ ಟೇಲರ್‌ ಅವರು ಗಳಿಸಿದ ಅತ್ಯಮೂಲ್ಯ 74 ರನ್‌ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಮಳೆಯಿಂದಾಗಿ ಓಲ್ಡ್‌ ಟ್ರಾಫರ್ಡ್‌ ವಿಕೆಟ್‌ ನಿಧಾನಗತಿಯಿಂದ ಕೂಡಿತ್ತು. ಆದರೂ ಟೇಲರ್‌ ಹಾಗೂ ಕೇನ್‌ ವಿಲಿಯಮ್ಸನ್‌ ಅರ್ಧ ಶತಕ ಸಿಡಿಸಿದ್ದರು.
Stay up to date on all the latest ಕ್ರಿಕೆಟ್ news with The Kannadaprabha App. Download now
facebook twitter whatsapp