ಸೆಂಚುರಿ ಸಿಡಿಸಿ ದಾಖಲೆ ಬರೆದ ರೋಹಿತ್ ಶರ್ಮಾ, ದಾದಾ ದಾಖಲೆ ಧೂಳಿಪಟ!

ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯವೇನು ಎಂದು ಸಾಬಿತು ಪಡಿಸಿದ್ದು, ಸ್ಫೋಟಕ ಶತಕದ ಮೂಲಕ ಹಿಟ್ ಮ್ಯಾನ್ ಹಲವು ದಾಖಲೆಗಳನ್ನು ಬರೆದಿದ್ದಾರೆ.
ರೋಹಿತ್ ದಾಖಲೆ ಶತಕ
ರೋಹಿತ್ ದಾಖಲೆ ಶತಕ
ಲಂಡನ್: ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯದಲ್ಲೇ ರೋಹಿತ್ ಶರ್ಮಾ ತಮ್ಮ ಸಾಮರ್ಥ್ಯವೇನು ಎಂದು ಸಾಬಿತು ಪಡಿಸಿದ್ದು, ಸ್ಫೋಟಕ ಶತಕದ ಮೂಲಕ ಹಿಟ್ ಮ್ಯಾನ್ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಹೌದು.. ನಿನ್ನೆ ಸೌಥ್ಯಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಶತಕ ಸಿಡಿಸಿ ಅಬ್ಬರಿಸಿದರು. ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ರೋಹಿತ್ 144 ಎಸೆತಗಳನ್ನು ಎದುರಿಸಿ ಅಜೇಯ 122 ರನ್ ಗಳನ್ನು ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರ ನಿರ್ವಹಣೆ ಮಾಡಿದರು. 
ಅಂತೆಯೇ ಈ ಅದ್ಬುತ ಇನ್ನಿಂಗ್ಸ್ ಮೂಲಕ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ 23ನೇ ಶತಕ ಸಿಡಿಸಿ ದಾಖಲೆ ಬರೆದರು. ರೋಹಿತ್ ಶತಕದಲ್ಲಿ 10 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಿತ್ತು.  ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾಗಿದು 2ನೇ ಶತಕವಾಗಿರುವುದು ವಿಶೇಷ. ಇನ್ನು ಈ ಶತಕದ ಮೂಲಕ ರೋಹಿತ್ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು ಭಾರತದ ಪರ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ. 
ಭಾರತದ ಪರ 49 ಶತಕಗಳನ್ನು ಸಿಡಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 41 ಶತಕಗಳನ್ನು ಸಿಡಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.
ದಾದಾ ದಾಖಲೆ ಧೂಳಿಪಟ
ಅಂತೆಯೇ 23ನೇ ಶತಕದ ಮೂಲಕ ರೋಹಿತ್ ಶರ್ಮಾ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನೂ ಕೂಡ ಧೂಳಿಪಟ ಮಾಡಿದ್ದು, 22 ಶತಕಗಳನ್ನು ಸಿಡಿಸಿದ್ದ ದಾದಾರನ್ನು 4ನೇ ಸ್ಥಾನಕ್ಕೆ ತಳ್ಳಿ 23 ಶತಕಗಳೊಂದಿಗೆ ರೋಹಿತ್ ಶರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ.
ಇನ್ನು ವಿಶ್ವ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕಗಳನ್ನು ಸಿಡಿಸಿರುವ ಆಟಗಾರರ ಪಟ್ಟಿಯಲ್ಲಿ ಭಾರತದ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದು, 41 ಶತಕಗಳನ್ನು ಸಿಡಿಸಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. 30 ಶತಕಗಳನ್ನು ಸಿಡಿಸಿರುವ ಆಸಿಸ್ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಮೂರು ಮತ್ತು 28 ಶತಕಗಳನ್ನು ಸಿಡಿಸಿರುವ ಶ್ರೀಲಂಕಾದ ದಂತಕಥೆ ಸನತ್ ಜಯಸೂರ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟ್ಸಮನ್ ಹಶೀಂ ಆಮ್ಲಾ ಐದನೇ ಸ್ಥಾನದಲ್ಲಿದ್ದು, ಭಾರತದ ರೋಹಿತ್ ಶರ್ಮಾ 9ನೇ ಸ್ಥಾನದಲ್ಲಿದ್ದಾರೆ.
ಸೌತ್ಆಫ್ರಿಕಾ ನೀಡಿದ 228 ರನ್ ಟಾರ್ಗೆಟ್ ಬೆನ್ನಟ್ಟುತ್ತಿದ್ದ ಟೀಂ ಇಂಡಿಯಾಗೆ ರೋಹಿತ್ ಶರ್ಮಾ ಉತ್ತಮ ಹೋರಾಟ ನೀಡಿದರು. ಹರಿಣಗಳ ದಾಳಿಗೆ ದಿಟ್ಟ ಹೋರಾಟ ನೀಡಿದ ರೋಹಿತ್ ಸೆಂಚುರಿ ಸಿಡಿಸಿ ಮಿಂಚಿದರು. 128 ಎಸೆತದಲ್ಲಿ ರೋಹಿತ್ ಶರ್ಮಾ ಸೆಂಚುರಿ ಪೂರೈಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com