ಎಂಎಸ್ ಧೋನಿ ಸ್ಥಾನದಲ್ಲಿ ವಿಕೆಟ್ ಕೀಪಿಂಗ್ ಮಾಡುವುದು ಕಷ್ಟ: ಕೆಎಲ್ ರಾಹುಲ್

ವಿಕೆಟ್ ಕೀಪಿಂಗ್ ಮಾಡುವಾಗ ನಾನು ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತು. ಇದಕ್ಕೆ ಕಾರಣ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನ ತುಂಬವುದು ನಿಜಕ್ಕೂ ಒತ್ತಡ ಇರುತ್ತದೆ ಎಂದು ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ತಿಳಿಸಿದ್ದಾರೆ. 
ಧೋನಿ-ಕೆಎಲ್ ರಾಹುಲ್
ಧೋನಿ-ಕೆಎಲ್ ರಾಹುಲ್
Updated on: 

ನವದೆಹಲಿ: ವಿಕೆಟ್ ಕೀಪಿಂಗ್ ಮಾಡುವಾಗ ನಾನು ಒತ್ತಡಕ್ಕೆ ಒಳಗಾದಂತೆ ಕಂಡು ಬಂದಿತು. ಇದಕ್ಕೆ ಕಾರಣ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನ ತುಂಬವುದು ನಿಜಕ್ಕೂ ಒತ್ತಡ ಇರುತ್ತದೆ ಎಂದು ಭಾರತ ತಂಡದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ತಿಳಿಸಿದ್ದಾರೆ. 

ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ರಾಹುಲ್ ವಿಕೆಟ್ ಕೀಪರ್ ಆಗಿ ಕೆಲವು ಸರಣಿ ಆಡಿದ್ದಾರೆ. ಕಳೆದ ವರ್ಷ ಐಸಿಸಿ ವಿಶ್ವಕಪ್ ನಂತರ ರಾಹುಲ್ ಟೀಂ ಇಂಡಿಯಾಕ್ಕೆ ಸೇರ್ಪಡೆಗೊಂಡರು ಮತ್ತು ಅವರು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ರೂಪಗೊಳ್ಳುತ್ತಿದ್ದಾರೆ. ಈ ವರ್ಷ ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ 20 ಪಂದ್ಯಗಳಲ್ಲಿ ರಾಹುಲ್ ಸಾಕಷ್ಟು ಉತ್ತಮ ಪ್ರದರ್ಶನ ನೀಡಿದ್ದರು.

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ರಿಷಬ್ ಪಂತ್ ಗಾಯಗೊಂಡಿದ್ದರಿಂದ ಕೆಎಲ್ ರಾಹುಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ಈ ವೇಳೆ ಅದ್ಭುತ ಕೀಪಿಂಗ್ ಮಾಡಿದ್ದು ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com