ಕ್ರಿಕೆಟ್ ಅಭಿಮಾನಿಗಳ ಚಿತ್ತ ಐಪಿಎಲ್ ಮೇಲಿದ್ದರೆ, ಅತ್ತ ನ್ಯೂಜಿಲೆಂಡ್ ನಲ್ಲಿ ನಡೆಯಿತು ಕ್ರಿಕೆಟ್ ಲೋಕದ ಅಚ್ಚರಿಯ ಸನ್ನಿವೇಶ!

ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಇತ್ತ ಐಪಿಎಲ್ ನಲ್ಲಿ ಬಿಸಿಯಾಗಿದ್ದರೆ ಅತ್ತ ನ್ಯೂಜಿಲೆಂಡ್ ದೇಸೀ ಕ್ರಿಕೆಟ್ ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ವಿಲಕ್ಷಣ ಔಟ್ ವೊಂದು ವರದಿಯಾಗಿದೆ.
ಚೆಂಡು ತಡೆದು ಔಟಾದ ಬ್ಲಂಡೆಲ್
ಚೆಂಡು ತಡೆದು ಔಟಾದ ಬ್ಲಂಡೆಲ್
Updated on: 

ವೆಲ್ಲಿಂಗ್ಟನ್: ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಇತ್ತ ಐಪಿಎಲ್ ನಲ್ಲಿ ಬಿಸಿಯಾಗಿದ್ದರೆ ಅತ್ತ ನ್ಯೂಜಿಲೆಂಡ್ ದೇಸೀ ಕ್ರಿಕೆಟ್ ನಲ್ಲಿ ಕ್ರಿಕೆಟ್ ಲೋಕದ ಅತ್ಯಂತ ವಿಲಕ್ಷಣ ಔಟ್ ವೊಂದು ವರದಿಯಾಗಿದೆ.

ಹೌದು.. ನ್ಯೂಜಿಲೆಂಡ್​ನಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯವೊಂದರಲ್ಲಿ ಯಾರೂ ಊಹಿಸಲಾಗದ ಘಟನೆಯೊಂದು ನಡೆದಿದೆ. ಓಟೆಜ್ ವಿರುದ್ಧ ನಡೆದ ಪಂದ್ಯದಲ್ಲಿ ವೆಲ್ಲಿಂಗ್ಟನ್ ತಂಡದ ಬ್ಯಾಟ್ಸ್​ಮನ್​ ಬ್ಲಂಡೆಲ್ ಶತಕ ಸಿಡಿಸಿ ಬ್ಯಾಟಿಂಗ್ ನಡೆಸುತ್ತಿದ್ದರು. ಈ ಸಂದರ್ಭ ಬೌಲರ್ ಜೇಕಬ್ ಡಫ್ಫಿ ಎಸೆತದಲ್ಲಿ ಬ್ಲಂಡೆಲ್  ಅವರು ಚೆಂಡನ್ನು ಜಸ್ಟ್​ ಬ್ಯಾಟ್​ಗೆ ಟಚ್ ಮಾಡಿದರು. ಚೆಂಡು ನಿಧಾನವಾಗಿ ವಿಕೆಟ್​ ಕಡೆ ತೆರಳಿತು. ಈವೇಳೆ ಬ್ಯಾಟ್ಸ್​ಮನ್ ಚೆಂಡು ವಿಕೆಟ್​ಗೆ ತಾಗುವುದನ್ನು ತಡೆಯಲು ಮೊದಲು ಕಾಲಿನಿಂದ ಇತ್ತಕಡೆ ತಳ್ಳಿದರು. ಆದರೆ, ಚೆಂಡು ಮೇಲೆ ಹೋಗಿ ಮತ್ತೆ ವಿಕೆಟ್​ಗೆ ಬೀಳುವುದರಲ್ಲಿತ್ತು. ಈ ಸಂದರ್ಭ ಮೈಮರೆತ  ಬ್ಯಾಟ್ಸ್​ಮನ್​ ಚೆಂಡನ್ನು ಕೈಯಲ್ಲಿ ಹಿಡಿದು ಕ್ರಿಕೆಟ್ ನಿಯಮದ ವಿರುದ್ಧ ನಡೆದರು.

ಪರಿಣಾಮ ಬ್ಲಂಡೆಲ್ ಔಟ್ ಎಂದು ತೀರ್ಮಾನಿಸಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಬೇಕಾಯಿತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 60 ವರ್ಷದ ಹಿಂದೆ ನ್ಯೂಜಿಲೆಂಡ್​ನ ಜಾನ್ ಹಯೆಸ್ ಇದೇ ರೀತಿ ಔಟ್ ಆಗಿದ್ದರು. ಆ ಬಳಿಕ ಕಿವೀಸ್ ಆಟಗಾರ ಒಬ್ಬ ಹೀಗೆ ಔಟ್ ಆಗಿದ್ದು ಇದೇ  ಮೊದಲ ಬಾರಿಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com