ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನ ತುಂಬಲು ರಿಷಭ್ ಪಂತ್ ಸೂಕ್ತ ಆಟಗಾರ: ಆಶಿಶ್ ನೆಹ್ರಾ

 ಟೀಂ ಇಂಡಿಯಾದಲ್ಲಿ ಎಂಎಸ್ ಧೋನಿ ಅವರ ಸ್ಥಾನ ತುಂಬಲು ರಿಷಭ್ ಪಂತ್ ಸೂಕ್ತ ಆಟಗಾರ ಎಂದು ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ.
ರಿಷಭ್ ಪಂತ್
ರಿಷಭ್ ಪಂತ್

ಮುಂಬೈ: ಟೀಂ ಇಂಡಿಯಾದಲ್ಲಿ ಎಂಎಸ್ ಧೋನಿ ಅವರ ಸ್ಥಾನ ತುಂಬಲು ರಿಷಭ್ ಪಂತ್ ಸೂಕ್ತ ಆಟಗಾರ ಎಂದು ಮಾಜಿ ವೇಗಿ ಆಶಿಶ್ ನೆಹ್ರಾ

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಬಂದಾಗ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಭ್ ಪಂತ್ ಗೆ ಬೆಂಬಲ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.

ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿದ್ದಾರೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ರಿಷಭ್‌ ಪಂತ್ ವಿಕೆಟ್‌ ಕೀಪರ್‌ ಸ್ಥಾನವನ್ನು ಸದ್ಯ ಪಂತ್‌ ಕಳೆದುಕೊಂಡಿದ್ದಾರೆ. 

ಈ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಪಂತ್‌ ಸ್ಥಾನದಲ್ಲಿ ಕೆ.ಎಲ್‌ ರಾಹುಲ್‌, ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್‌ಮನ್‌ ಆಗಿ ಉತ್ತಮ ಪ್ರದರ್ಶನ ತೋರಿದ್ದರು. 

ಸ್ಟಾರ್‌ ಸ್ಪೋರ್ಟ್ಸ್‌ 'ಕ್ರಿಕೆಟ್‌ ಕನೆಕ್ಟಡ್‌' ಶೋನಲ್ಲಿ ಮಾತನಾಡಿದ ಆಶಿಶ್‌ ನೆಹ್ರಾ, ರಿಷಭ್ ಪಂತ್ ಅವರೊಂದಿಗೆ ಮುಂದುವರಿಯಬೇಕು ಎಂದು ನಾನು ಭಾವಿಸುತ್ತೇನೆ. ಪಂತ್ ಬೆಂಬಲಿಸಬೇಕು! ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾಗ ಪ್ರತಿಯೊಬ್ಬ ಆಟಗಾರನ ಬೆಂಬಲ ಬೇಕು," ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com