ಭಾರತದ ಪರ ಹತ್ತು ವರ್ಷ ಆಡಿದ್ದು, ದೊಡ್ಡ ಗೌರವ: ಧವನ್

ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಗಬ್ಬರ್ ಖ್ಯಾತಿಯ ಶಿಖರ್ ಧವನ್, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಮಂಗಳವಾರಕ್ಕೆ ಹತ್ತು ವರ್ಷ.
ಶಿಖರ್ ಧವನ್
ಶಿಖರ್ ಧವನ್
Updated on: 

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಗಬ್ಬರ್ ಖ್ಯಾತಿಯ ಶಿಖರ್ ಧವನ್, ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಮಂಗಳವಾರಕ್ಕೆ ಹತ್ತು ವರ್ಷ.

ಈ ಸುದಂರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಧವನ್ “ ಹತ್ತು ವರ್ಷ ದೇಶವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ಸಂಗತಿ. ಜೀವನಕ್ಕಾಗುವಷ್ಟು ನೆನಪುಗಳನ್ನು ನೀಡಿದ್ದು, ಇವುಗಳಿಗೆಲ್ಲಾ ಧನ್ಯವಾದ” ಎಂದು ಟ್ವೀಟರ್ ನಲ್ಲಿ ಬರೆದಿದ್ದಾರೆ.

ಧವನ್ ಅವರು ಅಕ್ಟೋಬರ್ ,20, 2010ರಂದು ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು. ಇವರು ಈ ವರೆಗೆ 136 ಏಕದಿನ ಪಂದ್ಯಗಳನ್ನು ಆಡಿದ್ದು, 5,688 ರನ್ ಸಿಡಿಸಿದ್ದಾರೆ. ಇವರ ಗರಿಷ್ಠ ರನ್ 143 ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com