ಐಪಿಎಲ್ 2020: ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸವಿದೆ- ಕೆವಿನ್ ಪೀಟರ್ಸನ್ 

ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.
ಕೆವಿನ್ ಪೀಟರ್ಸನ್
ಕೆವಿನ್ ಪೀಟರ್ಸನ್
Updated on: 

ನವದೆಹಲಿ: ಯುಎಇನಲ್ಲಿ ನಡೆಯಲಿರುವ ಈ ಬಾರಿಯ ಐಪಿಎಲ್ 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆಲ್ಲುವ ವಿಶ್ವಾಸ ಹೊಂದಿರುವುದಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಹೇಳಿದ್ದಾರೆ.

ಇತ್ತೀಚಿಗೆ ಮುಕ್ತಾಯವಾದ ಇಂಗ್ಲೆಂಡ್-ಆಸೀಸ್ ನಡುವಣ ಟಿ-20 ಸರಣಿಯಲ್ಲಿ ವೀಕ್ಷಣ ವಿವರಣೆಗಾರರಾಗಿದ್ದ ಪೀಟರ್ಸನ್ , ಇದೀಗ ಸೌಥಾಂಪ್ಟನ್ ನಿಂದ ದುಬೈಗೆ ತೆರಳಿದ್ದಾರೆ.

ಈ ಕುರಿತು ಇನ್ಸಾಟಾಗ್ರಾಮ್ ನಲ್ಲಿ ಮಾಹಿತಿ ನೀಡಿರುವ ಕೆವಿನ್ ಪೀಟರ್ಸನ್, ನಾವು ಮತ್ತೆ ಕ್ರಿಕೆಟ್ ಗೆ ಮರಳಿರುವುದಕ್ಕೆ ಸಂತೋಷವಾಗುತ್ತಿದೆ. ಐಪಿಎಲ್ 2020ಯಲ್ಲಿ ಕೆಲಸ ಮಾಡುವುದಕ್ಕೆ ಯಾವಾಗಲೂ ಅತ್ಯಂತ ಖುಷಿಪಡುತ್ತೇನೆ ಎಂದು ಹೇಳಿರುವ ಅವರು, ಈ ಬಾರಿ ಯಾರು ಗೆಲ್ಲುತ್ತಾರೆ ? ಎಂದು ಪ್ರಶ್ನಿಸಿದ್ದು, ಡೆಲ್ಲಿ ಕ್ಯಾಪಿಟಲ್ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ.

ಪೀಟರ್ಸನ್ ಆಡುವ ಸಮಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್ ಮತ್ತು ರೈಸಿಂಗ್ ಪುಣೆ ತಂಡವನ್ನು ಪ್ರತಿನಿಧಿಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಈ ಬಾರಿ ಶ್ರೇಯಸ್ಸು ಮುನ್ನಡೆಸುತ್ತಿದ್ದಾರೆ. ಶಿಖರ್ ಧವನ್, ರವಿ ಅಶ್ವಿನ್ ಮತ್ತು ಅಜಿಂಕ್ಯಾ ರಹಾನೆ ಮತ್ತಿತರರು ಆ ತಂಡದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com