ಕ್ರಿಕೆಟ್

ಐಪಿಎಲ್ 2020: ರಶೀದ್ ಖಾನ್ ಸ್ಪಿನ್ ಮೋಡಿ, ಡೆಲ್ಲಿ ವಿರುದ್ಧ ಹೈದರಾಬಾದ್ ಗೆ 15 ರನ್ ಅಮೋಘ ಜಯ 

ಅಬುದಾಬಿಯಲ್ಲಿ ನಡೆಯುತ್ತಿರುವ ಐಪಿಎಲ್​ 13 ನೇ ಆವೃತ್ತಿಯ 11 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 15 ರನ್ ಗಳ ಅಮೋಘ ಜಯ ಸಾಧಿಸಿದೆ.

ಐಪಿಎಲ್ 2020: ರಶೀದ್ ಖಾನ್ ಸ್ಪಿನ್ ಮೋಡಿ, ಡೆಲ್ಲಿ ವಿರುದ್ಧ ಹೈದರಾಬಾದ್ ಗೆ 15 ರನ್ ಅಮೋಘ ಜಯ 
Published On :

ಅಬುದಾಬಿ: ಅಬುದಾಬಿಯಲ್ಲಿ ನಡೆಯುತ್ತಿರುವ  ಐಪಿಎಲ್​ 13 ನೇ ಆವೃತ್ತಿಯ 11 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ 15 ರನ್ ಗಳ ಅಮೋಘ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್  4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು. 

ಹೈದರಾಬಾದ್ ಪರ ಜೋನಿ ಬೇರ್​​ಸ್ಟ್(53), ಡೇವಿಡ್ ವಾರ್ನರ್(45), ಕೇನ್ ವಿಲ್ಲಿಯಮ್ಸನ್ (41) ಉತ್ತಮ ಪ್ರದರ್ಶನ ನೀಡಿದ್ದರು. 

ಗೆಲುವಿಗಾಗಿ 163 ರನ್ ಕಲೆಹಾಕಬೇಕಿದ್ದ ಡೆಲ್ಲಿ ಪರ ಶಿಖರ್ ಧವನ್ (34), ರಿಷಬ್ ಪಂತ್ (28), ಹೆಟ್ಮೈರ್ (21) ರನ್ ಗಳಿಸಿದ್ದೂ ನಿಗದಿತ ಇಪ್ಪತ್ತು ಓವರ್ ಗಳಲ್ಲಿ7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ಹೈದರಾಬಾದ್ ಪರ ರಶೀದ್ ಕಾನ್ 3, ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದು ಮಿಂಚಿದರು. ಡೆಲ್ಲಿ ಪರ ಕಗಿಸೊ ರಬಾಡಾ ಹಾಗೂ ಮಿತ್ ಮಿಶ್ರಾ ತಲಾ 2 ವಿಕೆಟ್ ಪಡೆದರು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.