ಬೆಂಗಳೂರು: ಧೋನಿಯ ವಿಶ್ವದಾಖಲೆ ಮುರಿಯಲು ಕೊಹ್ಲಿ ಸಜ್ಜು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಎಂಎಸ್ ಧೋನಿಯ ವಿಶ್ವದಾಖಲೆಯನ್ನು ಮುರಿಯಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದಾರೆ.
ವಿರಾಟ್ ಕೊಹ್ಲಿ, ಧೋನಿಯ ಚಿತ್ರ
ವಿರಾಟ್ ಕೊಹ್ಲಿ, ಧೋನಿಯ ಚಿತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಎಂಎಸ್ ಧೋನಿಯ ವಿಶ್ವದಾಖಲೆಯನ್ನು ಮುರಿಯಲು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎದುರು ನೋಡುತ್ತಿದ್ದಾರೆ.

ರಾಜ್ ಕೋಟ್ ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 76 ಎಸೆತಗಳಲ್ಲಿ 78 ರನ್ ಪಡೆದಿದ್ದ ಕೊಹ್ಲಿ, ಇಂದು ಕೇವಲ 17 ರನ್ ಗಳನ್ನು ಪಡೆದರೆ ಧೋನಿಯ ವಿಶ್ವದಾಖಲೆಯನ್ನು ಸರಿಗಟ್ಟಲಿದ್ದಾರೆ.

ಒಂದು ವೇಳೆ 17 ರನ್ ಪಡೆದರೂ ಏಕದಿನ ಪಂದ್ಯಗಳಲ್ಲಿ ವೇಗವಾಗಿ 5 ಸಾವಿರ ರನ್ ಪೂರೈಸಿದ ಕ್ಯಾಪ್ಟನ್ ಆಗಿ ಹೊರಹೊಮ್ಮಲಿದ್ದಾರೆ. ಧೋನಿ ಪ್ರಸ್ತುತ 127 ಇನ್ನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿರುವ ದಾಖಲೆ ಹೊಂದಿದ್ದಾರೆ. ಕೊಹ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ಕೊಹ್ಲಿ ಪ್ರಸ್ತುತ  81 ಇನ್ನಿಂಗ್ಸ್ ಗಳಲ್ಲಿ  4983 ರನ್ ಗಳಿಸಿದ್ದಾರೆ.

ಈ ಸಾಧನೆ ಮಾಡಿದರೆ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 5 ಸಾವಿರ ರನ್ ಪೂರೈಸಿದ ಭಾರತದ ಕ್ಯಾಪ್ಟನ್ ಗಳಲ್ಲಿ ನಾಲ್ಕನೇಯವರಾಗಲಿದ್ದಾರೆ. ಈ ಹಿಂದಿನ ಕ್ಯಾಪ್ಟನ್ ಗಳಾದ  ಧೋನಿ 6641, ಮೊಹಮ್ಮದ್ ಅಜರುದ್ದೀನ್  5239  ಸೌರವ್ ಗಂಗೂಲಿ 5104 ರನ್ ಗಳಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ 5 ಸಾವಿರ ಪೂರೈಸಿದ ವಿಶ್ವದ  8ನೇ ಕ್ಯಾಪ್ಟನ್ ಆಗಲಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಟಿಂಗ್ ಕ್ಯಾಪ್ಟನ್ ಆಗಿ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು 8497 ರನ್ ಗಳನ್ನು ಹೊಂದಿರುವ ರೆಕಾರ್ಡ್ ನಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com