ಇಂಗ್ಲೆಂಡ್- ಭಾರತ ಮೊದಲ ಟೆಸ್ಟ್: ಚಹಾ ವಿರಾಮದ ವೇಳೆಗೆ ಮಳೆಯಿಂದಾಗಿ ಪಂದ್ಯ ಸ್ಥಗಿತ

ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟವಾದ ಇಂದು ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದಾಗ ಮಳೆ ಕಾರಣ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು.
ವಿರಾಟ್ ಕೊಹ್ಲಿ ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ಇಂಗ್ಲೆಂಡ್ ತಂಡದ ಆಟಗಾರರು
ವಿರಾಟ್ ಕೊಹ್ಲಿ ವಿಕೆಟ್ ಪಡೆದು ಸಂಭ್ರಮಿಸುತ್ತಿರುವ ಇಂಗ್ಲೆಂಡ್ ತಂಡದ ಆಟಗಾರರು
Updated on

ನಾಟ್ಟಿಂಗ್ ಹ್ಯಾಮ್:  ಇಲ್ಲಿನ ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟವಾದ ಇಂದು ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿದಾಗ ಮಳೆ ಕಾರಣ ಪಂದ್ಯವನ್ನು ಸ್ಥಗಿತ ಗೊಳಿಸಲಾಯಿತು.

ಭೋಜನ ವಿರಾಮದ ವೇಳೆಗೆ 97 ರನ್ ಗಳಿಗೆ 1 ವಿಕೆಟ್  ಕಳೆದುಕೊಂಡಿದ್ದ ಭಾರತ ತದನಂತರ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ರಾಹುಲ್ 57 ಮತ್ತು ಪಂತ್ 07 ರನ್ ಗಳಿಸಿದಾಗ ಮಳೆಯ ಕಾರಣದಿಂದಾಗಿ ಟೀ ವಿರಾಮದ ವೇಳೆಗೆ ಅಂಪೈರ್ ಗಳು ಪಂದ್ಯ ಸ್ಥಗಿತಗೊಳಿಸಲು ನಿರ್ಧರಿಸಿದರು.

ಇದಕ್ಕೂ ಮುನ್ನ ಭಾರತ 8.4 ಓವರ್ ಗಳಲ್ಲಿ 28 ರನ್ ಗಳಿಗೆ ಮೂರು ವಿಕೆಟ್ ಗಳನ್ನು ಕಳೆದುಕೊಂಡಿತ್ತು.  ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 183 ರನ್ ಗಳಿಗೆ ಆಲೌಟ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com