2ನೇ ಟೆಸ್ಟ್ ಪಂದ್ಯ: ಕೆಎಲ್ ರಾಹುಲ್ ಭರ್ಜರಿ ಶತಕ; ಮೊದಲ ದಿನದಾಟಕ್ಕೆ ಭಾರತ 276/3

ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿದ್ದಾರೆ. 
ಕೆಎಲ್ ರಾಹುಲ್-ರೋಹಿತ್
ಕೆಎಲ್ ರಾಹುಲ್-ರೋಹಿತ್
Updated on: 

ಲಾರ್ಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನದಾಟಕ್ಕೆ 3 ವಿಕೆಟ್ ನಷ್ಟಕ್ಕೆ 276 ರನ್ ಬಾರಿಸಿದ್ದಾರೆ. 

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಪಡೆದಿದೆ. 

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕೀಳಿದ ರೋಹಿತ್ ಶರ್ಮಾ(83) ಮತ್ತು ಕೆಎಲ್ ರಾಹುಲ್ ಶತಕದ ಜೊತೆಯಾಟ ನೀಡಿದರು. ಕೆಎಲ್ ರಾಹುಲ್ ಅಜೇಯ 127 ರನ್ ಬಾರಿಸಿ ಕಣದಲ್ಲಿದ್ದಾರೆ. 

ಇನ್ನು ಚೇತೇಶ್ವರ ಪೂಜಾರ 9 ರನ್ ಬಾರಿಸಿ ಔಟಾದರು. ನಂತರ ಕಣಕ್ಕಿಳಿದ ವಿರಾಟ್ ಕೊಹ್ಲಿ 42 ರನ್ ಬಾರಿಸಿ ರಾಬಿನ್ಸನ್ ಗೆ ವಿಕೆಟ್ ಒಪ್ಪಿಸಿದರು. ಪ್ರಸ್ತುತ ಅಜೇಯ 1 ರನ್ ಗಳಿಸಿರುವ ಅಜಿಂಕ್ಯ ರಹಾನೆ ಮತ್ತು ಕೆಎಲ್ ರಾಹುಲ್ ಎರಡನೇ ದಿನದಾಟವನ್ನು ಪ್ರಾರಂಭಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com