ಭವಿಷ್ಯದಲ್ಲಿ ಎಲ್ಲಾ ಸ್ವರೂಪಗಳಿಗೂ ಶಫಾಲಿ ವರ್ಮಾ ತಂಡಕ್ಕೆ ಬಹಳ ಮುಖ್ಯರಾಗಲಿದ್ದಾರೆ: ಮಿಥಾಲಿ ರಾಜ್

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ.
ಶಫಾಲಿ ವರ್ಮಾ
ಶಫಾಲಿ ವರ್ಮಾ

ಬ್ರಿಸ್ಟಲ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿರುವ ಶಫಾಲಿ ವರ್ಮಾ ಚೊಚ್ಚಲ ಪಂದ್ಯದಲ್ಲೇ ಅದ್ಭುತ ಬ್ಯಾಟಿಂಗ್ ಮಾಡಿ ಗಮನ ಸೆಳೆದಿದ್ದಾರೆ. 

ಭವಿಷ್ಯದಲ್ಲಿ ಕ್ರಿಕೆಟ್ ನ ಎಲ್ಲಾ ಸ್ವರೂಪದಲ್ಲೂ ತಂಡದ ಪ್ರಮುಖ ಸದಸ್ಯರಾಗುತ್ತಾರೆ ಎಂದು ಭಾರತೀಯ ಮಹಿಳಾ ತಂಡದ ಟೆಸ್ಟ್ ನಾಯಕಿ ಮಿಥಾಲಿ ರಾಜ್ ಅಭಿಪ್ರಾಯಪಟ್ಟಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶಫಾಲಿ ಸಂವೇದನಾಶೀಲಳಾಗಿ ಆಡಿದ್ದು ಅದ್ಭುತ ಹೊಡೆತಗಳನ್ನು ಬಾರಿಸಿದ್ದರು. ಇದೇ ರೀತಿ ಆಡಿದರೆ ಮೂರು ಆವೃತ್ತಿಗೂ ಅವರ ಅಗತ್ಯತೆ ಮುಖ್ಯವಾಗುತ್ತದೆ ಎಂದು ಮಿಥಾಲಿ ರಾಜ್ ಹೇಳಿದ್ದಾರೆ. 

17ರ ಹರೆಯದ ಶಫಾಲಿ ಮೊದಲ ಇನ್ನಿಂಗ್ಸ್‌ನಲ್ಲಿ 96 ರನ್ ಬಾರಿಸಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ 63 ರನ್ ಬಾರಿಸಿದ್ದರು. ಇನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಎರಡು ಅರ್ಧ ಶತಕ ಸಿಡಿಸಿದ್ದು ಒಂದು ಪಂದ್ಯದಲ್ಲಿ ಎರಡು ಅರ್ಧ ಶತಕ ಸಿಡಿಸಿದ ನಾಲ್ಕನೇ ಆಟಗಾರ್ತಿ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಏಕದಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಇನ್ನು ಮೊದಲು ಇನ್ನಿಂಗ್ಸ್ ಆರಂಭಿದ ಇಂಗ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ 396 ರನ್ ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. 

ನಂತರ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾದ 231 ರನ್ ಗಳಿಗೆ ಆಲೌಟ್ ಆಗಿ ಫಾಲೋ ಆನ್ ಗೆ ಸಿಲುಕಿತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 8 ವಿಕೆಟ್ ನಷ್ಟಕ್ಕೆ 344 ರನ್ ಬಾರಿಸಿತು. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com