ಐಪಿಎಲ್ 2021: ಕೊಹ್ಲಿ, ಪಡಿಕ್ಕಲ್ ಅರ್ಧ ಶತಕ, ಚೆನ್ನೈಗೆ 157 ರನ್ ಗುರಿ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿದೆ. 
ಕೊಹ್ಲಿ
ಕೊಹ್ಲಿ
Updated on: 

ಶಾರ್ಜಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿದೆ. 

ಶಾರ್ಜಾದಲ್ಲಿ ನಡೆಯುತ್ತಿರುವ 35ನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಫೀಲ್ಡಿಂಗ್ ಆಯ್ಕೆಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ವಿರಾಟ್ ಕೊಹ್ಲಿ 53, ದೇವದತ್ ಪಡಿಕ್ಕಲ್ 70 ರನ್ ಬಾರಿಸಿದ್ದು ಸ್ಪರ್ಧಾತ್ಮಕ ಮೊತ್ತ ಪೇರಿಸಲು ಸಾಧ್ಯವಾಯಿತು. 

ಇನ್ನುಳಿದಂತೆ ಎಬಿ ಡಿವಿಲಿಯರ್ಸ್ 12, ಗ್ಲೇನ್ ಮ್ಯಾಕ್ಸ್ ವೆಲ್ 11, ಟಿಮ್ ಡೇವಿಡ್ 1, ಹರ್ಶಲ್ ಪಟೇಲ್ 3 ರನ್ ಬಾರಿಸಿದ್ದಾರೆ. 

ಚೆನ್ನೈ ಪರ ಬೌಲಿಂಗ್ ನಲ್ಲಿ ಬ್ರಾವೋ 3, ಶಾರ್ದೂಲ್ ಠಾಕೂರ್ 2 ಮತ್ತು ದೀಪಕ್ ಚಹರ 1 ವಿಕೆಟ್ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com