ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನಿಂದ ಭಾರತಕ್ಕೆ 216 ರನ್ ಗಳ ಬೃಹತ್ ಗುರಿ 

ನಾಟಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ತಂಡ 216 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. 
ಭಾರತ-ಇಂಗ್ಲೆಂಡ್ 3ನೇ ಟಿ20 ಪಂದ್ಯ
ಭಾರತ-ಇಂಗ್ಲೆಂಡ್ 3ನೇ ಟಿ20 ಪಂದ್ಯ
Updated on

ನಾಟಿಂಗ್ಹ್ಯಾಮ್: ನಾಟಿಂಗ್ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ 3 ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ತಂಡ 216 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಸನ್ ರಾಯ್, ಜೋಸ್ ಬಟ್ಲರ್ ಅವರ ರನ್ ಗಳ ನೆರವಿನಿಂದ ಸಾಧಾರಣ ಆರಂಭ ಕಂಡ ಇಂಗ್ಲೆಂಡ್ ತಂಡಕ್ಕೆ ಬೃಹತ್ ರನ್ ಗಳಿಸಲು ನೆರವಾಗಿದ್ದು ಡೇವಿಡ್ ಮಲನ್ ಅವರ ಸ್ಫೋಟಕ ಬ್ಯಾಟಿಂಗ್, ಜೊತೆಗೆ ಲಿಯಾಮ್ ಲಿವಿಂಗ್ಸ್ಟೋನ್ ಅಜೇಯರಾಗಿ 29 ಎಸೆತಗಳಲ್ಲಿ 42 ರನ್ ಗಳಿಸಿದ್ದೂ ಸಹ ಇಂಗ್ಲೆಂಡ್ ತಂಡಕ್ಕೆ ನೆರವಾಯಿತು. 

6 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ ತಂಡ 20 ಓವರ್ ಗಳಲ್ಲಿ 215 ರನ್ ಗಳಿಸಿತು. ಭಾರತದ ಪರ ಉಮ್ರಾನ್ ಮಲೀಕ್ 56 ರನ್ ನೀಡಿ ಒಂದು ವಿಕೆಟ್ ಪಡೆಯುವ ಮೂಲಕ ದುಬಾರಿ ಬೌಲರ್ ಆದರು. ರವಿ ಬಿಷ್ಣೋಯ್ 30 ರನ್ ನೀಡಿ 2 ವಿಕೆಟ್, ಹರ್ಷಲ್ ಪಟೇಲ್ 35 ರನ್ ನೀಡಿ 2 ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com