ಐಪಿಎಲ್ 2023: ಪಂಜಾಬ್ ಕಿಂಗ್ಸ್ ನ್ನು 6 ವಿಕೆಟ್ ಗಳಿಂದ ಮಣಿಸಿದ ಗುಜರಾತ್ ಟೈಟನ್ಸ್

ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್- ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡ ಪಂಜಾಬ್ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದೆ.
ಪಂಜಾಬ್ ವಿರುದ್ಧ ಗುಜರಾತ್ ತಂಡದ ಪಂದ್ಯ
ಪಂಜಾಬ್ ವಿರುದ್ಧ ಗುಜರಾತ್ ತಂಡದ ಪಂದ್ಯ
Updated on

ಮೊಹಾಲಿ: ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್- ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಗುಜರಾತ್ ತಂಡ ಪಂಜಾಬ್ ವಿರುದ್ಧ 6 ವಿಕೆಟ್ ಗಳ ಜಯ ಸಾಧಿಸಿದೆ. 

ಶುಭ್ಮನ್ ಗಿಲ್ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ನೆರವಿನಿಂದ ಗುಜರಾತ್ ತಂಡ ಗೆದ್ದಿದೆ. 

ಪಂಜಾಬ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಎದುರಾಳಿ ತಂಡಕ್ಕೆ 154 ರನ್ ಗಳ ಗುರಿ ನೀಡಿತ್ತು.  ರನ್ ಚೇಸಿಂಗ್ ನಲ್ಲಿ ಶುಭ್ಮನ್ ಗಿಲ್ (49 ಎಸೆತಗಳಲ್ಲಿ 67 ರನ್) ಹಾಗೂ ವೃದ್ಧಿಮಾನ್ ಸಾಹ ( 19 ಎಸೆತಗಳಲ್ಲಿ 30 ರನ್) ಗಳ 48 ರನ್ ಗಳ ಜೊತೆಯಾಟದ ಅಬ್ಬರದ ಬ್ಯಾಟಿಂಗ್ ಮೂಲಕ ಉತ್ತಮ ಆರಂಭ ಕಂಡುಕೊಂಡಿತು.

ಆದರೆ ಪಂಜಾಬ್ ತಂಡದ ಬೌಲರ್ ಗಳು ಈ ವೇಗಕ್ಕೆ ಕಡಿವಾಣ ಹಾಕುವ ಮೂಲಕ ಗುಜರಾತ್ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. ಇನ್ನಿಂಗ್ಸ್ ಮಧ್ಯದಲ್ಲಿ ಸತತವಾಗಿ ವಿಕೆಟ್ ಕಳೆದುಕೊಂಡ ಗುಜರಾತ್ ತಂಡ ಒತ್ತಡಕ್ಕೆ ಸಿಲುಕಿತ್ತು.  ಕೊನೆಯದಾಗಿ ಡೇವಿಡ್ ಮಿಲ್ಲರ್ (18 ಎಸೆತಗಳಲ್ಲಿ 17 ರನ್) ರಾಹುಲ್ ತೆವಾಟಿಯಾ (2 ಎಸೆತಗಳಲ್ಲಿ 5  ರನ್) ತಂಡ ಗೆಲುವು ಸಾಧಿಸಲು ನೆರವಾದರು. 

6 ನೇ ಸ್ಥಾನದಲ್ಲಿ ಗುಜರಾತ್ ತಂಡ
ಪಂಜಾಬ್ ವಿರುದ್ಧದ ಈ ಗೆಲುವಿನಿಂದ ಗುಜರಾತ್ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com