ಬೆಂಗಳೂರಿನಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ: ಶ್ರೀಸಾಗರ್ ಹೋಟೆಲ್​​ನಲ್ಲಿ ದೋಸೆ ಸವಿದ ವಿರುಷ್ಕಾ

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರು ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುತ್ತಾಡಿದ್ದು, ಮಲ್ಲೇಶ್ವರಂ ನಲ್ಲಿರುವ ಶ್ರೀ ಸಾಗರ್ ಹೋಟೆಲ್ ನಲ್ಲಿ ದೋಸೆ ಸವಿದಿದ್ದಾರೆ.
ಶ್ರೀಸಾಗರ್ ಹೋಟೆಲ್ ನಿಂದ ಹೊರಬರುತ್ತಿರುವ ನಟಿ ಅನುಷ್ಕಾ.
ಶ್ರೀಸಾಗರ್ ಹೋಟೆಲ್ ನಿಂದ ಹೊರಬರುತ್ತಿರುವ ನಟಿ ಅನುಷ್ಕಾ.

ಬೆಂಗಳೂರು: ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಅವರು ಶನಿವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸುತ್ತಾಡಿದ್ದು, ಮಲ್ಲೇಶ್ವರಂ ನಲ್ಲಿರುವ ಶ್ರೀ ಸಾಗರ್ ಹೋಟೆಲ್ ನಲ್ಲಿ ದೋಸೆ ಸವಿದಿದ್ದಾರೆ.

ವಿರೂಷ್ಕಾ ಮಲ್ಲೇಶ್ವರಂನ 7ನೇ ಕ್ರಾಸ್​​​ನಲ್ಲಿರುವ ಸೆಂಟ್ರಲ್​ ಟಿಫನ್​ ಸೆಂಟರ್ ಮತ್ತು ಕಾರ್ನರ್​ ಹೌಸ್​ಗೆ ಭೇಟಿ ನೀಡಿ ಮಸಾಲೆದೋಸೆ, ಐಸ್​ ಕ್ರೀಂ, ಮಂಗಳೂರು ಬೊಂಡಾ ಮತ್ತು ಕೇಸರಿಬಾತ್​ ರುಚಿ ಸವಿದಿದ್ದಾರೆ.

ಕೊಹ್ಲಿ-ಅನುಷ್ಕಾ ಹೋಟೆಲ್​ನಿಂದ ಹೊರಬರುವವರೆಗೂ ಕಾಯುತ್ತಿದ್ದ ಅಭಿಮಾನಿಗಳು ವಿಡಿಯೋ, ಫೋಟೋ ತೆಗೆದುಕೊಂಡರು. ಹಾಗೆಯೇ ಇದೇ ವೇಳೆ ​ಆರ್​ಸಿಬಿ, ಆರ್​ಸಿಬಿ ಎಂದು ಕೂಗಿದರು. ಹಾಗೆಯೇ ಸ್ಟಾರ್​ ದಂಪತಿಗೆ ಜೈಕಾರ ಹಾಕಿದರು.

ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವಿರಾಟ್ ಕೊಹ್ಲಿಯವರು ಬ್ಯುಸಿ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಆಡುವ ಕೊಹ್ಲಿ ಭರ್ಜರಿ ಫಾರ್ಮ್​ನಲ್ಲಿ ಕೂಡ ಇದ್ದಾರೆ. ಇಂದು ಐಪಿಎಲ್​ನಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ (RCB vs RR) ಅನ್ನು ಎದುರಿಸಲಿದೆ.

ಈ ಪಂದ್ಯ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ವಿರಾಟ್, ಡುಪ್ಲೆಸಿಸ್, ಮ್ಯಾಕ್ಸ್​ವೆಲ್ ಸೇರಿದಂತೆ ಎಲ್ಲ ಆಟಗಾರರು ಬೆಂಗಳೂರಿಗೆ ಬಂದಿದ್ದು ಅಭ್ಯಾಸ ನಡೆಸುತ್ತಿದ್ದಾರೆ.

ಪ್ರ್ಯಾಕ್ಟೀಸ್ ಸೆಷನ್ ನಡುವೆ ಬಿಡುವು ಮಾಡಿಕೊಂಡು ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಜೊತೆ ಬೆಂಗಳೂರಿನಲ್ಲಿ ಸುತ್ತಾಟ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com