ಏಷ್ಯಾ ಕಪ್ 2023: ಭಾರತ-ಲಂಕಾ ಪಂದ್ಯಕ್ಕೆ ಮಳೆ ಅಡ್ಡಿ, 47 ಓವರ್ ಮುಕ್ತಾಯಕ್ಕೆ ಭಾರತ 197/9

ಏಷ್ಯಾ ಕಪ್ 2023ರ ಸೂಪರ್ 4 ಹಂತದ ಲಂಕಾ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಲಂಬೋ: ಏಷ್ಯಾ ಕಪ್ 2023ರ ಸೂಪರ್ 4 ಹಂತದ ಲಂಕಾ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.

ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತಕ್ಕೆ ಉತ್ತಮ ಆರಂಭ ಸಿಕ್ಕರೂ ಕೂಡ ಲಂಕಾ ಬೌಲರ್ ಗಳ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು. 

ಇನ್ನು 47 ಓವರ್ ಗಳ ಮುಕ್ತಾಯಕ್ಕೆ ಭಾರತ 9 ವಿಕೆಟ್ ನಷ್ಟಕ್ಕೆ 197  ರನ್ ಪೇರಿಸಿದೆ. ಈ ವೇಳೆ ಮಳೆ ಶುರುವಾಗಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.

ಭಾರತ ಪರ ರೋಹಿತ್ ಶರ್ಮಾ ಅಜೇಯ 53 ರನ್ ಗಳಿಸಿದ್ದರೆ ಶುಭ್ಮನ್ ಗಿಲ್ 19, ವಿರಾಟ್ ಕೊಹ್ಲಿ 3, ಇಶಾನ್ ಕಿಶನ್ 33, ಹಾರ್ದಿಕ್ ಪಾಂಡ್ಯ 39 ಹಾಗೂ ಅಕ್ಷರ್ ಪಟೇಲ್ 15 ರನ್ ಸಿಡಿಸಿದ್ದಾರೆ. 

ಲಂಕಾ ಪರ ದುನಿತ್ ವೆಲ್ಲಲಾಗೆ 5 ವಿಕೆಟ್ ಪಡೆದರೆ, ಚರಿತ್ ಅಸಲಂಕಾ 4 ವಿಕೆಟ್ ಪಡೆದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com