2ನೇ ಏಕದಿನ ಪಂದ್ಯ: ಕಾಂಗರೂಗಳ ವಿರುದ್ದ ಭರ್ಜರಿ ಬ್ಯಾಟಿಂಗ್, ಟೀಂ ಇಂಡಿಯಾ ಬೃಹತ್ ದಾಖಲೆ

ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 399ರನ್ ಕಲೆಹಾಕಿದ ಭಾರತ ತಂಡ 'ಬೃಹತ್' ದಾಖಲೆ ನಿರ್ಮಿಸಿದೆ.
ಭಾರತದ ಸೂಪರ್ ಬ್ಯಾಟಿಂಗ್
ಭಾರತದ ಸೂಪರ್ ಬ್ಯಾಟಿಂಗ್

ಇಂದೋರ್: ಆಸ್ಟ್ರೇಲಿಯಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ 399ರನ್ ಕಲೆಹಾಕಿದ ಭಾರತ ತಂಡ 'ಬೃಹತ್' ದಾಖಲೆ ನಿರ್ಮಿಸಿದೆ.

ಇಂದು ಇಂದೋರ್ ನ ಹೋಳ್ಕರ್ ಸ್ಟೇಡಿಯಂ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 399ರನ್ ಕಲೆ ಹಾಕಿ ಆಸ್ಟ್ರೇಲಿಯಾಗೆ ಗೆಲ್ಲಲು 400 ರನ್ ಗಳ ಬೃಹತ್ ಗುರಿ ನೀಡಿದೆ. ಭಾರತದ ಪರ ಶುಭ್ ಮನ್ ಗಿಲ್ (104 ರನ್), ಶ್ರೇಯಸ್ ಅಯ್ಯರ್ (105 ರನ್) ಮತ್ತು ಸೂರ್ಯ ಕುಮಾರ್ ಯಾದವ್ (72 ರನ್) ನಾಯಕ ಕೆಎಲ್ ರಾಹುಲ್ (52 ರನ್) ಮತ್ತು ಇಶಾನ್ ಕಿಶನ್ (31 ರನ್) ಅಮೋಘ ಬ್ಯಾಟಿಂಗ್ ಮಾಡಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು.

ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದು ಆಸ್ಟ್ರೇಲಿಯಾ ವಿರುದ್ಧ ದಾಖಲಾದ 4ನೇ ಗರಿಷ್ಠ ಮೊತ್ತವಾಗಿದೆ. ಈ ಹಿಂದೆ 2018ರಲ್ಲಿ ನಾಟಿಂಗ್ ಹ್ಯಾಮ್ ನಲ್ಲಿ ಇಂಗ್ಲೆಂಡ್ ತಂಡ 6 ವಿಕೆಟ್ ನಷ್ಟಕ್ಕೆ 481 ರನ್ ಗಳಿಸಿತ್ತು. ಇದು ಆಸ್ಟ್ರೇಲಿಯಾ ವಿರುದ್ದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಇದಕ್ಕೂ ಮೊದಲು 2006ರಲ್ಲಿ ಜೋಹನ್ಸ್ ಬರ್ಗ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ 9 ವಿಕೆಟ್ ನಷ್ಟಕ್ಕೆ 438 ರನ್ ಗಳಿಸಿತ್ತು. ಅದೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾಗೆ 434 ರನ್ ಗಳಿಸಿ 435 ರನ್ ಗುರಿ ನೀಡಿತ್ತು. ಈ ಮೊತ್ತವನ್ನು ದಕ್ಷಿಣ ಆಫ್ರಿಕಾ ತಂಡ ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ 438 ರನ್ ಗಳಿಸಿ ವಿರೋಚಿತ ಜಯ ಗಳಿಸಿತ್ತು.

ಇದೇ ವರ್ಷ ಸೆಂಚುರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾ ವಿರುದ್ಧ 416ರನ್ ಗಳಿಸಿತ್ತು.  2013ರಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 383ರನ್ ಕಲೆ ಹಾಕಿತ್ತು. ಆ ಪಂದ್ಯದಲ್ಲಿ ರೋಹಿತ್ ಶರ್ಮಾ 209ರನ್ ಕಲೆಹಾಕಿ ದ್ವಿಶತಕ ಸಿಡಿಸಿದ್ದರು.

ಇಂದೋರ್ ಮೈದಾನದಲ್ಲಿ ಭಾರತದ ಬ್ಯಾಟಿಂಗ್ ದಾಖಲೆ
ಇನ್ನು ಇಂದೋರ್ ನ ಹೋಳ್ಕರ್ ಮೈದಾನದಲ್ಲೂ ಭಾರತ ತನ್ನ ಬ್ಯಾಟಿಂಗ್ ದಾಖಲೆ ಮುಂದುವರೆಸಿದ್ದು, ಇಂದು ಆಸಿಸ್ ವಿರುದ್ದ ಭಾರತ ದಾಖಲಿಸಿದ 399ರನ್ ಇಂದೋರ್ ನಲ್ಲಿ ಭಾರತ ದಾಖಲಿಸಿದ ಗರಿಷ್ಟ ರನ್ ಆಗಿದ್ದು ಮಾತ್ರವಲ್ಲದೇ ಆಸ್ಟ್ರೇಲಿಯಾ ವಿರುದ್ದದ ಭಾರತ ಗರಿಷ್ಠ ಮೊತ್ತ ಕೂಡ ಆಗಿದೆ. ಇದಕ್ಕೂ ಮೊದಲು ಇದೇ ವರ್ಷ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 9 ವಿಕೆಟ್ ನಷ್ಟಕ್ಕೆ 385ರನ್ ಕಲೆಹಾಕಿತ್ತು. ಇದು ಇಂದೋರ್ ನಲ್ಲಿ ಭಾರತ ಕಲೆಹಾಕಿದ್ದ ಈ ವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಈ ದಾಖಲೆಯನ್ನು ಭಾರತ ಹಿಂದಿಕ್ಕಿದೆ. 2012ರಲ್ಲಿ ಇದೇ ಇಂದೋರ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 418ರನ್ ಕಲೆಹಾಕಿತ್ತು. ಇದು ಭಾರತದ ಪರ ದಾಖಲಾದ ಗರಿಷ್ಟ ಸ್ಕೋರ್ ಆಗಿದೆ. ಈ ಪಂದ್ಯದಲ್ಲಿ ಭಾರತದ ವಿರೇಂದ್ರ ಸೆಹ್ವಾಗ್ (219 ರನ್) ದ್ವಿಶತಕ ಸಿಡಿಸಿದ್ದರು.

India’s scores batting first in Indore (ODIs)
292/9 vs ENG, 2008
418/5 vs WI, 2012
247/9 vs SA, 2015
385/9 vs NZ, 2023
399/5 vs AUS, 2023
India won each of their last six ODIs at this venue.

ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಮೊತ್ತ
ಇನ್ನು ಇಂದು ಭಾರತ ತಂಡ ಸಾಧಿಸಿರುವ 399ರನ್ ಆಸ್ಚ್ರೇಲಿಯಾ ವಿರುದ್ದ ಟೀಂ ಇಂಡಿಯಾದ ಗರಿಷ್ಠ ಸ್ಕೋರ್ ಆಗಿದೆ. 2013 ರಲ್ಲಿ ಬೆಂಗಳೂರಿನಲ್ಲಿ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ 383ರನ್ ಕಲೆ ಹಾಕಿತ್ತು. ಅಂತೆಯೇ ಇದು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಲ್ಲಿ 350 ಕ್ಕಿಂತ ಹೆಚ್ಚಿನ ಸ್ಕೋರ್‌ಗಳಲ್ಲಿ ಭಾರತದ ಏಳನೇ ಗರಿಷ್ಠ ಸ್ಕೋರ್ ಆಗಿದ್ದು, ಒಟ್ಟಾರೆಯಾಗಿ ಏಕದಿನ ಕ್ರಿಕೆಟ್ ನಲ್ಲಿ ಏಳನೇ ಗರಿಷ್ಠ ಸ್ಕೋರ್ ಆಗಿದೆ.

Highest ODI totals against Australia
481/6 - England, Nottingham., 2018
438/9 - South Africa, Johannesburg, 2006
416/5 - South Africa, Centurion, 2023
399/5 - India, Indore, 2023
383/6 - India, Bengaluru, 2013

ಕುತೂಹಲಕಾರಿಯಾಗಿ, 2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ಭಾರತದ ಅತ್ಯಧಿಕ ಸ್ಕೋರ್ (ಐದು ವಿಕೆಟ್ ಗೆ 418ರನ್) ಬಂದಿತ್ತು. ಆ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ದ್ವಿಶತಕ (219) ಗಳಿಸಿದ್ದು, ಭಾರತ ಆ ಪಂದ್ಯವನ್ನು 153 ರನ್‌ಗಳ ಅಂತರದಲ್ಲಿ ಗೆಲುವು ಸಾದಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com