2ನೇ ಏಕದಿನ ಪಂದ್ಯ: ನ್ಯೂಜಿಲೆಂಡ್ ದಾಖಲೆ ಸರಿಗಟ್ಟಿದ ಭಾರತ, ಸೂರ್ಯ ಕುಮಾರ್ ಸತತ 4 ಸಿಕ್ಸರ್ ಗಳೇ ಹೈಲೈಟ್!

ಪ್ರಬಲ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಜಯಭೇರಿ ಭಾರಿಸಿದ ಭಾರತ ತಂಡ ಇದೇ ಪಂದ್ಯದ ಮೂಲಕ ನ್ಯೂಜಿಲೆಂಡ್ ತಂಡ ನಿರ್ಮಿಸಿದ್ದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದೆ.
ಸೂರ್ಯಕುಮಾರ್ ಯಾದವ್ ಸಿಕ್ಸರ್ ಗಳು
ಸೂರ್ಯಕುಮಾರ್ ಯಾದವ್ ಸಿಕ್ಸರ್ ಗಳು

ಇಂದೋರ್: ಪ್ರಬಲ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಜಯಭೇರಿ ಭಾರಿಸಿದ ಭಾರತ ತಂಡ ಇದೇ ಪಂದ್ಯದ ಮೂಲಕ ನ್ಯೂಜಿಲೆಂಡ್ ತಂಡ ನಿರ್ಮಿಸಿದ್ದ ಅಪರೂಪದ ದಾಖಲೆಯೊಂದನ್ನು ಸರಿಗಟ್ಟಿದೆ.

ಹೌದು.. ನಿನ್ನೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆಸ್ಚ್ರೇಲಿಯಾದ ದೈತ್ಯ ಬೌಲರ್ ಗಳನ್ನು ಇನ್ನಿಲ್ಲದಂತೆ ಕಾಡಿದ ಭಾರತ ತಂಡದ ಬ್ಯಾಟರ್ ಗಳು ನಿಗಧಿತ 50 ಓವರ್ ಗಳಲ್ಲಿ 2 ಶತಕ ಮತ್ತು 2 ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾಗೆ 400ರನ್ ಗಳ  ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ ಆಸ್ಟ್ರೇಲಿಯಾ ತಂಡ 28.2 ಓವರ್ ನಲ್ಲಿ  217 ರನ್ ಗಳಿಗೇ ಆಲೌಟ್ ಆಗಿ ಡಕ್ವರ್ತ್ ಲೂಯಿಸ್ ನಿಯಮದನ್ವಯ 99 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು.

ಇದೇ ಪಂದ್ಯದಲ್ಲಿ ಇದೀಗ ಭಾರತ ತಂಡ ಅಪರೂಪದ ದಾಖಲೆ ನಿರ್ಮಿಸಿದ್ದು, ಏಕದಿನ ಕ್ರಿಕೆಟ್ ನ ಇನ್ನಿಂಗ್ಸ್ ಒಂದರಲ್ಲಿ 2ನೇ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ತನ್ನದೇ ದಾಖಲೆಯನ್ನು ಸರಿಗಟ್ಟಿದೆ. ಹೌದು.. ನಿನ್ನೆ ಆಸ್ಟ್ರೇಲಿಯಾ ವಿರುದ್ಧ ಒಟ್ಟು 18 ಸಿಕ್ಸರ್ ಗಳು ಹರಿದುಬಂದಿದ್ದು, ಟೀಂ ಇಂಡಿಯಾ ಪರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ 2ನೇ ಗರಿಷ್ಠ ಸಿಕ್ಸರ್ ಗಳ ಪಂದ್ಯವಾಗಿದೆ. ಭಾರತದ ಪರ ಶುಭ್ ಮನ್ ಗಿಲ್ 4 ಸಿಕ್ಸರ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 3, ಕೆಎಲ್ ರಾಹುಲ್ 3, ಇಶಾನ್ ಕಿಶನ್ 2 ಮತ್ತು ಮಿಸ್ಟರ್ 360 ಖ್ಯಾತಿಯ ಸೂರ್ಯ ಕುಮಾರ್ ಯಾದವ್ ಬರೊಬ್ಬರಿ 6 ಸಿಕ್ಸರ್ ಸಿಡಿಸಿದರು.

ಅದರಲ್ಲೂ ಆಸ್ಚ್ರೇಲಿಯಾದ ದೈತ್ಯ ಬೌಲರ್ ಕೆಮರಾನ್ ಗ್ರೀನ್ ರ ಬೌಲಿಂಗ್ ನಲ್ಲಿ ಒಂದೇ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ ಸತತ 4 ಸಿಕ್ಸರ್ ಸಿಡಿಸಿದ್ದು ಪಂದ್ಯದ ಪ್ರಮುಖ ಹೈಲೈಟ್ ಆಗಿದೆ. ಒಂದು ಹಂತದಲ್ಲಿ ಸೂರ್ಯ ಕುಮಾರ್ ಯಾದವ್ ಆರು ಎಸೆತಕ್ಕೆ ಆರು ಸಿಕ್ಸರ್ ಸಿಡಿಸುವ ವಿಶ್ವಾಸ ಮೂಡಿಸಿದ್ದರು. ಆದರೆ 5 ಮತ್ತು 6ನೇ ಎಸೆತಗಳನ್ನು ಜಾಕರೂಗವಾಗಿ ಗ್ರೀನ್ ನಿಭಾಯಿಸಿದರು.

ಇನ್ನು ಭಾರತ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಗಳನ್ನು ಸಿಡಿಸಿರುವುದು 2009ರಲ್ಲಿ ಕ್ರೈಸ್ಟ್ ಚರ್ಚ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ. ಅಂದು ಭಾರತದ ಪರ 18 ಸಿಕ್ಸರ್ ಗಳು ದಾಖಲಾಗಿದ್ದವು. ಇದಾದ ಬಳಿಕ ಅಷ್ಟೇ ಪ್ರಮಾಣದ ಸಿಕ್ಸರ್ ಗಳು ದಾಖಲಾಗಿರುವುದು ನಿನ್ನೆ ಇಂದೋರ್ ನ ಹೋಳ್ಕರ್ ಕ್ರೀಡಾಂಗಣದಲ್ಲಿ. ಇನ್ನು ಈ ಪಟ್ಟಿಯಲ್ಲಿ ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಗಳು ದಾಖಲಾದ ಪಂದ್ಯಗಳಲ್ಲಿ 2013ರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 19 ಸಿಕ್ಸರ್ ಗಳು ದಾಖಲಾಗಿದ್ದವು. ಬಳಿಕ ಇತ್ತೀಚೆಗೆ ಇದೇ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆಯಲ್ಲೂ 19 ಸಿಕ್ಸರ್ ಗಳು ದಾಖಲಾಗಿದ್ದವು. ಈ ಎರಡು ಪಂದ್ಯಗಳು ಭಾರತದ ಪರ ಅತೀ ಹೆಚ್ಚು ಸಿಕ್ಸರ್ ಗಳು ಬಂದ ಪಂದ್ಯಗಳಾಗಿವೆ.

Most sixes in an ODI innings for India
19 vs AUS, Bengaluru, 2013
19 vs NZ, Indore, 2023
18 vs Bermuda, Port of Spain, 2007
18 vs NZ, Christchurch, 2009
18 vs AUS, Indore, 2023 

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com