ಕ್ರಿಕೆಟ್

BGT 2025: ಇದೇನ್ Gully cricket ಏನೋ?; ಜೈಸ್ವಾಲ್ ಗೆ ಗದರಿದ Rohit Sharma, Video ವೈರಲ್

BGT 2025: ಇದೇನ್ Gully cricket ಏನೋ?; ಜೈಸ್ವಾಲ್ ಗೆ ಗದರಿದ Rohit Sharma, Video ವೈರಲ್
ರೋಹಿತ್ ಶರ್ಮಾ ಮತ್ತು ಯಶಸ್ವಿ ಜೈಸ್ವಾಲ್ (ಸಂಗ್ರಹ ಚಿತ್ರ)
Published On :

ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಂಡದ ಇತರೆ ಸದಸ್ಯ ಯಶಸ್ವಿ ಜೈಸ್ವಾಲ್ ವಿರುದ್ಧ ಆಕ್ರೋಶಗೊಂಡ ಘಟನೆ ನಡೆದಿದೆ.

ಸರಣಿಯ 4ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದ್ದು, ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 311 ರನ್ ಗಳಿಸಿದೆ. ಆರಂಭದಿಂದಲೂ ಭಾರತ ತಂಡದ ವೇಗಿಗಳ ಮೇಲೆ ಸವಾರಿ ಮಾಡಿದ ಆಸಿಸ್ ದಾಂಡಿಗರು ರನ್ ಗಳ ಸುರಿಮಳೆ ಗೈದಿದ್ದರು.

ಒಂದು ಹಂತದಲ್ಲಿ ಭಾರತ ತಂಡದ ರೋಹಿತ್ ಶರ್ಮಾ ಕೂಡ ಇದರಿಂದ ಕೊಂಚ ವಿಚಲಿತರಾದಂತೆ ಕಂಡುಬಂದರು. ಇದೇ ವೇಳೆ ವಿಕೆಟ್​ಗಾಗಿ ಕಾದು ಕಾದು ಹೈರಾಣಾಗಿದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ತಂಡದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಮಾಡಿದ ತಪ್ಪಿಗೆ ಮೈದಾನದಲ್ಲೇ ಕೋಪಗೊಂಡಿದ್ದಾರೆ.

ಇದೇನ್ 'Gully cricket' ಏನೋ?

ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಬುಶೇನ್ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್, ಜೈಸ್ವಾಲ್​ರನ್ನು ಸಿಲ್ಲಿ ಪಾಯಿಂಟ್ ಹಾಗೂ ಸಿಲ್ಲಿ ಮಿಡ್ ಆಫ್ ನಡುವೆ ಫಿಲ್ಡಿಂಗ್​ಗೆ ನಿಯೋಜಿಸಿದ್ದರು. ಆದರೆ ಈ ವೇಳೆ ಕೊಂಚ ಎಚ್ಚರ ತಪ್ಪಿದ್ದ ಜೈಸ್ವಾಲ್, ಚೆಂಡು ಅವರ ಬಳಿ ಬರುವ ಮೊದಲೇ ಮೇಲಕ್ಕೆ ಜಿಗಿದರು. ಇದನ್ನು ನೋಡಿದ ರೋಹಿತ್ ಶರ್ಮಾ ಜೈಸ್ವಾಲ್‌ಗೆ, ‘ಹೇ ಜಸ್ಸು, ನೀನು ಬೀದಿ ಕ್ರಿಕೆಟ್ ಆಡುತ್ತಿದ್ದೀಯಾ? ಬ್ಯಾಟ್ಸ್‌ಮನ್ ಆಡುವವರೆಗೆ ಮೇಲೆ ಎದ್ದೇಳಬೇಡ ಎಂದಿದ್ದಾರೆ.

ಸ್ಟಂಪ್ ಮೈಕ್ ಆಡಿಯೋ ವೈರಲ್

ಲೈವ್ ಪಂದ್ಯದ ವೇಳೆ ಕೋಪಗೊಂಡಿರುವ ನಾಯಕ ರೋಹಿತ್, ಜೈಸ್ವಾಲ್ ವಿರುದ್ಧ ಗರಂ ಆಗಿ ಆಡಿರುವ ಮಾತುಗಳು ಸ್ಟಂಪ್ ಮೈಕ್​ನಲ್ಲಿ ರೆಕಾರ್ಡ್​ ಆಗಿದ್ದು, ಈ ವೀಡಿಯೊದಲ್ಲಿ ರೋಹಿತ್, ಜೈಸ್ವಾಲ್ ಅವರನ್ನು ಗಲ್ಲಿ ಕ್ರಿಕೆಟ್ ಆಡುತ್ತಿದ್ದೀಯಾ ಎಂದು ಗದರಿರುವುದು ಇದೀಗ ಸಖತ್ ವೈರಲ್ ಆಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.