India vs Australia: ಭಾರತ ತಂಡಕ್ಕೆ ಮತ್ತೊಂದು ಆಘಾತ, KL Rahul ಬಳಿಕ ಸ್ಟಾರ್ ಆಟಗಾರನಿಗೆ ಗಾಯ!

ಬಾರ್ಡರ್ ಗವಾಸ್ಕರ್ ಟ್ರೋಫಿಯ ನಿಮಿತ್ತ ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡದ ಮತ್ತೋರ್ವ ಸ್ಟಾರ್ ಬ್ಯಾಟರ್ ಗಾಯಗೊಂಡಿದ್ದು, ಪರ್ತ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಶುಭ್ ಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.
Shubman Gill
ಶುಭ್ ಮನ್ ಗಿಲ್
Updated on: 

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, ರೋಹಿತ್ ಪಡೆಯ ಮತ್ತೋರ್ವ ಸ್ಟಾರ್ ಆಟಗಾರ ಗಾಯಕ್ಕೆ ತುತ್ತಾಗಿದ್ದಾರೆ.

ಹೌದು.. ಬಾರ್ಡರ್ ಗವಾಸ್ಕರ್ ಟ್ರೋಫಿಯ ನಿಮಿತ್ತ ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡದ ಮತ್ತೋರ್ವ ಸ್ಟಾರ್ ಬ್ಯಾಟರ್ ಗಾಯಗೊಂಡಿದ್ದು, ಪರ್ತ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಶುಭ್ ಮನ್ ಗಿಲ್ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಇಂಟ್ರಾ-ಸ್ಕ್ವಾಡ್ ಮ್ಯಾಚ್ ಸಿಮ್ಯುಲೇಶನ್‌ ತರಬೇತಿಯ ಎರಡನೇ ದಿನದಂದು ಫೀಲ್ಡಿಂಗ್ ಮಾಡುವಾಗ ಗಿಲ್ ಹೆಬ್ಬೆರಳಿಗೆ ಗಾಯವಾಗಿದೆ.

ಗಿಲ್ ನೋವಿನಿಂದ ಬಳಲುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೆ ವೈದ್ಯರು ಅವರಿಗೆ ಸ್ಕ್ಯಾನ್ ಮಾಡಿದ್ದು, ಈ ವರದಿ ಬಂದ ಬಳಿಕ ಅವರ ಲಭ್ಯತೆ ಕುರಿತು ಮಾಹಿತಿ ದೊರೆಯಲಿದೆ ಎನ್ನಲಾಗಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಗಿಲ್ ಅವರ ಎಡಗೈ ಹೆಬ್ಬೆರಳು ಮುರಿತವಾಗಿದ್ದು, ಅವರಿಗೆ ಚೇತರಿಸಿಕೊಳ್ಳಲು ಕನಿಷ್ಟ 15 ದಿನ ಕಾಲಾವಕಾಶ ಬೇಕು ಎನ್ನಲಾಗಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೆ ಇನ್ನು ಕೇವಲ ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಹೀಗಾಗಿ ಮೊದಲ ಪಂದ್ಯದಿಂದ ಬಹುತೇಕ ಗಿಲ್ ಹೊರಗುಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Shubman Gill
ಕೆಎಲ್ ರಾಹುಲ್ ಮೊಣಕೈಗೆ ಪೆಟ್ಟು, ಆಸ್ಟ್ರೇಲಿಯ ವಿರುದ್ಧದ ಮೊದಲ ಟೆಸ್ಟ್‌ಗೆ ಲಭ್ಯವಾಗುವುದು ಅನುಮಾನ

ಈಗಾಗಲೇ ತಂಡದ ನಾಯಕ ರೋಹಿತ್ ಶರ್ಮಾ ವೈಯುಕ್ತಿಕ ಕಾರಣದಿಂದ ಮೊದಲ ಟೆಸ್ಟ್ ಗೆ ಲಭ್ಯರಾಗುವುದು ಕಷ್ಟಸಾಧ್ಯ ಎನ್ನಲಾಗುತ್ತಿದ್ದು, ಅವರ ಬದಲಿಗೆ ಗಿಲ್ ಜೊತೆ ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ತೆರೆಯುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಗಿಲ್ ಕೂಡ ಗಾಯಗೊಂಡಿದ್ದು ಇದು ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಅದಾಗ್ಯೂ ಗಿಲ್ 2ನೇ ಟೆಸ್ಟ್ ವೇಳೆಗೆ ಚೇತರಿಸಿಕೊಳ್ಳುತ್ತಾರೆ ಎಂದು ಬಿಸಿಸಿಐ ವಿಶ್ವಾಸ ವ್ಯಕ್ತಪಡಿಸಿದೆ. ಅಡಿಲೇಡ್‌ನಲ್ಲಿ ಎರಡನೇ ಟೆಸ್ಟ್ ಡಿಸೆಂಬರ್ 6 ರಿಂದ ಪ್ರಾರಂಭವಾಗುವುದರಿಂದ, ಆ ಪಂದ್ಯಕ್ಕೆ ಅವರು ಸಮಯಕ್ಕೆ ಸರಿಯಾಗಿ ಫಿಟ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಾಗಲೇ ಭಾರತ ತಂಡದ ಕೆಎಲ್ ರಾಹುಲ್ ಗಾಯಗೊಂಡಿದ್ದು, ಪ್ರಸಿದ್ಧ್ ಕೃಷ್ಣ ಶಾರ್ಟ್ ಬಾಲ್‌ ಬಡಿದು ರಾಹುಲ್ ಮೊಣಕೈಗೆ ಗಾಯವಾಗಿತ್ತು. ಇದೀಗ ಅದರ ಬೆನ್ನ ಹಿಂದೆಯೇ ಗಿಲ್ ಕೂಡ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿಯುವ ಆತಂಕ ಎದುರಾಗಿದೆ. ಒಂದು ವೇಳೆ ಗಿಲ್ ಗೈರಾದರೆ, ಅಭಿಮನ್ಯು ಈಶ್ವರನ್ ತನ್ನ ಚೊಚ್ಚಲ ಟೆಸ್ಟ್‌ಗೆ ಪದಾರ್ಪಣೆ ಮಾಡಬೇಕಾಗುತ್ತದೆ. ಏಕೆಂದರೆ ಭಾರತಕ್ಕೆ ಹೆಚ್ಚಿನ ಆಯ್ಕೆಗಳಿಲ್ಲ ಎಂದು ಕ್ರಿಕೆಟ್ ತಜ್ಞರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com