Champions Trophy 2025 Final: ರನ್ ಅಲ್ಲ.. ವಿಕೆಟ್ ಅಲ್ಲ.. ಸ್ಪಿನ್ ಬೌಲಿಂಗ್ ನಿಂದಲೇ ದಾಖಲೆ ಬರೆದ ಭಾರತ

ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ರನ್ ಗಳಿಗೆ ಕಡಿವಾಣ ಹಾಕಿದ್ದಲ್ಲದೇ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಕೂಡ 1 ವಿಕೆಟ್ ಪಡೆದರು.
Indias Spin bowling creates huge record
ಭಾರತಕ್ಕೆ ಸ್ಪಿನ್ ಬೌಲಿಂಗ್ ಬಲ
Updated on: 

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ತನ್ನ ಸ್ಪಿನ್ ಬೌಲಿಂಗ್ ನಿಂದಲೇ ಐತಿಹಾಸಿಕ ದಾಖಲೆ ನಿರ್ಮಿಸಿದೆ.

ಹೌದು.. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ತಂಡ ಅಪರೂಪದ ದಾಖಲೆಗೆ ಪಾತ್ರವಾಗಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗಧಿತ 50 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿ ಭಾರತಕ್ಕೆ ಗೆಲ್ಲಲು 252 ರನ್ ಗಳ ಸವಾಲಿನ ಗುರಿ ನೀಡಿತು. ನ್ಯೂಜಿಲೆಂಡ್ ಪರ ಡರಿಲ್ ಮೆಚೆಲ್ (63 ರನ್) ಮತ್ತು ಬ್ರೇಸ್ ವೆಲ್ ( ಅಜೇಯ 53 ರನ್) ಅರ್ಧಶತಕ ಗಳಿಸಿ ನ್ಯೂಜಿಲೆಂಡ್ ಇನ್ನಿಂಗ್ಸ್ ಗೆ ಜೀವ ತುಂಬಿದರು.

ನ್ಯೂಜಿಲೆಂಡ್ ಭರ್ಜರಿ ಆರಂಭ

ಮೊದಲು ಬ್ಯಾಟಿಂಗ್ ಆರಂಭಿಸಿರುವ ಕಿವೀಸ್ ಪಡೆ ಭರ್ಜರಿ ಆರಂಭ ಪಡೆಯಿತು. ಕಿವೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ರಚಿನ್ ರವೀಂದ್ರ (37 ರನ್) ಮತ್ತು ವಿಲ್ ಯಂಗ್ (15 ರನ್) ಜೋಡಿ ಮೊದಲ ವಿಕೆಟ್ ಗೆ 57 ರನ್ ಗಳ ಭರ್ಜರಿ ಜೊತೆಯಾಟವಾಡಿತು.

ಸ್ಪಿನ್ ಬೌಲಿಂಗ್ ಗೆ ಪತರುಗುಟ್ಟಿದ ಕಿವೀಸ್

ಇನ್ನು ಮೊದಲ 10 ಓವರ್ ನಲ್ಲಿ ಭಾರತ ಪೇಸರ್ ಗಳನ್ನು ಕಾಡಿದ ಕಿವೀಸ್ ದಾಂಡಿಗರಿಗೆ ಭಾರತ ಸ್ಪಿನ್ನರ್ ಗಳು ಪ್ರತ್ಯುತ್ತರ ನೀಡಿದರು. ವರುಣ್ ಚಕ್ರವರ್ತಿ, ಕುಲದೀಪ್ ಯಾದವ್ ರನ್ ಗಳಿಗೆ ಕಡಿವಾಣ ಹಾಕಿದ್ದಲ್ಲದೇ ತಲಾ 2 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಕೂಡ 1 ವಿಕೆಟ್ ಪಡೆದರು. ಈ ಪಟ್ಟಿಯಲ್ಲಿ ಅಕ್ಸರ್ ಪಟೇಲ್ ಗೆ ವಿಕೆಟ್ ಬೀಳಲಿಲ್ಲವಾದರೂ ಅವರೂ ಕೂಡ ರನ್ ಗೆ ಕಡಿವಾಣ ಹಾಕಿದರು.

Indias Spin bowling creates huge record
Champions Trophy 2025 Final: ಇನ್ನೂ ಬ್ಯಾಟಿಂಗ್ ಗೇ ಬಂದಿಲ್ಲ, ಆಗಲೇ Virat Kohli ಅಪರೂಪದ ದಾಖಲೆ; ಸಚಿನ್ ತೆಂಡೂಲ್ಕರ್ ಇರುವ Elite India List ಸೇರ್ಪಡೆ

ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಗರಿಷ್ಟ ಓವರ್: ಸ್ಪಿನ್ನರ್ ಗಳ ದಾಖಲೆ

ಇನ್ನು ಈ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ಗಳು ಒಟ್ಟು 38 ಓವರ್ ಎಸೆದಿದ್ದು, ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲೇ ಸ್ಪಿನ್ನರ್ ಗಳು ಗರಿಷ್ಠ ಓವರ್ ಮಾಡಿದ 2ನೇ ಪಂದ್ಯ ಇದಾಗಿದೆ. ಈ ಹಿಂದೆ 2002 ಚಾಂಪಿಯನ್ಸ್ ಟ್ರೋಫಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಪರ ಸ್ಪಿನ್ನರ್ ಗಳು ಬರೊಬ್ಬರಿ 39.4 ಓವರ್ ಎಸೆದಿದ್ದರು. ಇದು ಚಾಂಪಿಯನ್ಸ್ ಟ್ರೋಫಿಯ ಏಕದಿನ ಪಂದ್ಯವೊಂದರಲ್ಲಿ ಸ್ಪಿನ್ನರ್ ಗಳು ಎಸೆದ ಗರಿಷ್ಠ ಓವರ್ ಗಳಾಗಿವೆ. ಮೂರನೇ ಸ್ಥಾನದಲ್ಲಿ ಇದೇ ದುಬೈನಲ್ಲಿ ಕಳೆದ ತಿಂಗಳಾಂತ್ಯದಲ್ಲಿ ನಡೆದ ಇದೇ ಭಾರತ ಮತ್ತು ನ್ಯೂಜಿಲೆಂಡ್ ಪಂದ್ಯವಿದ್ದು ಅಂದೂ ಕೂಡ ಭಾರತದ ಸ್ಪಿನ್ನರ್ ಗಳು 37.3 ಓವರ್ ಎಸೆದಿದ್ದರು.

Most overs of spin bowled in a Champions Trophy innings

  • 39.4 - SL vs AUS, Colombo RPS, 2002 SF

  • 38 - IND vs NZ, Dubai, 2025 Final

  • 37.3 - IND vs NZ, Dubai, 2025

  • 36.5 - SL vs NZ, Dhaka, 1998 QF

ಅಂತೆಯೇ ಭಾರತದ ಸ್ಪಿನ್ನರ್‌ಗಳು ಸ್ಟಂಪ್‌ಗಳನ್ನು ಹೊಡೆಯುವ ನಿರೀಕ್ಷೆಯ 37.3% ಚೆಂಡುಗಳನ್ನು ಬೌಲ್ ಮಾಡಿದ್ದು, ಇದು ಈ ಟೂರ್ನಮೆಂಟ್‌ನ ಐದು ಇನ್ನಿಂಗ್ಸ್‌ಗಳಲ್ಲಿ ಭಾರತೀಯ ಸ್ಪಿನ್ನರ್ ಗಳು ಗಳಿಸಿದ ಅತ್ಯಧಿಕ ಎಂದು ಪರಿಗಣಿಸಲಾಗಿದೆ. ಮಾತ್ರವಲ್ಲದೇ ಇದೇ ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಓವರ್‌ ಕಂಡ 2ನೇ ನಿದರ್ಶನವಾಗಿದೆ. ಈ ಹಿಂದೆ 1996 ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಲಾಹೋರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾ 37 ಸ್ಪಿನ್ ಓವರ್‌ಗಳನ್ನು ಎಸೆದಿತ್ತು.

India's spinners bowled 37.3% of the balls projected to hit the stumps - the highest by them in five innings this tournament - and they picked 5/50 off those deliveries.

The first two instances account for most overs of spin in an ICC ODI knockout game, followed by 37 overs by Sri Lanka in the 1996 WC final against Australia in Lahore.

Indias Spin bowling creates huge record
Champions Trophy 2025 Final: ಸೋಲು, ಸೋಲು, ಸೋಲು.. ನನಗಿದು ಬೇಕಾ? Rohit Sharma ಮತ್ತೊಂದು ಕಳಪೆ ದಾಖಲೆ

ಏಕದಿನ ಪಂದ್ಯವೊಂದರಲ್ಲಿ ಭಾರತದ ಗರಿಷ್ಠ ಸ್ಪಿನ್ ಬೌಲಿಂಗ್

ಇನ್ನು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಭಾರತ ತಂಡದ ಗರಿಷ್ಠ ಸ್ಪಿನ್ ಓವರ್ ಗಳನ್ನು ಕಂಡ 3ನೇ ಪಂದ್ಯ ಇದಾಗಿದೆ. ಈ ಹಿಂದೆ 2011ರಲ್ಲಿ ಇಂದೋರ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ಗಳು ಬರೊಬ್ಬರಿ 41.2 ಓವರ್ ಎಸೆದಿದ್ದರು. 2ನೇ ಸ್ಥಾನದಲ್ಲಿ 1998ರಲ್ಲಿ ಗ್ವಾಲಿಯರ್ ನಲ್ಲಿ ಕೀನ್ಯಾ ವಿರುದ್ಧದ ಪಂದ್ಯ ಇದ್ದು ಈ ಪಂದ್ಯದಲ್ಲಿ ಭಾರತ 39 ಸ್ಪಿನ್ ಓವರ್ ಗಳನ್ನು ಎಸೆದಿತ್ತು. 3ನೇ ಸ್ಥಾನದಲ್ಲಿ ಇಂದಿನ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯ ಇದ್ದು, 4ನೇ ಸ್ಥಾನದಲ್ಲಿ ಇದೇ ಚಾಂಪಿಯನ್ಸ್ ಟ್ರೋಫಿಯ ಇದೇ ನ್ಯೂಜಿಲೆಂಡ್ ವಿರುದ್ಧ ಲೀಗ್ ಪಂದ್ಯದಲ್ಲಿ ಭಾರತ 37.3 ಸ್ಪಿನ್ ಬೌಲಿಂಗ್ ಎಸೆದಿತ್ತು.

Most overs of spin bowled by India in an ODI

  • 41.2 vs WI, Indore, 2011

  • 39 vs KEN, Gwalior, 1998

  • 38 vs NZ, Dubai, CT 2025 Final

  • 37.3 vs NZ, Dubai, CT 2025

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com