IPL 2026: ರಾಜಸ್ಥಾನದ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ಗೆ 57 ರನ್ ಗಳ ಜಯ; ಒಂದೇ ಓವರ್ ನಲ್ಲಿ 3 ವಿಕೆಟ್; ಚರಿತ್ರೆ ಸೃಷ್ಟಿಸಿದ ಪ್ರಫುಲ್ ಹಿಂಗೆ

ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್‌ಗಳಿಸಿತ್ತು.
Sunrisers Hyderabad
ಸನ್ ರೈಸರ್ಸ್ ಹೈದರಾಬಾದ್ online desk
Updated on

ಹೈದರಾಬಾದ್: ಹೈದರಾಬಾದ್ ತಂಡ ತವರಿನಲ್ಲಿ ರಾಜಸ್ಥಾನದ ವಿರುದ್ಧ ಭರ್ಜರಿ 57 ರನ್ ಗಳ ಜಯ ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 216 ರನ್‌ಗಳಿಸಿತ್ತು. 217 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿರುವ ರಾಜಸ್ಥಾನ್ ರಾಯಲ್ಸ್ ಹೀನಾಯ ಬ್ಯಾಟಿಂಗ್ ಪ್ರದರ್ಶನ ತೋರಿದೆ. ಐಪಿಎಲ್ ಇತಿಹಾಸದಲ್ಲೇ ಮೊದಲ ಓವರ್‌ನಲ್ಲಿ 3 ವಿಕೆಟ್ ಕಳೆದುಕೊಂಡ ದಾಖಲೆ ಐಪಿಎಲ್‌ನ (IPL 2026) 21ನೇ ಪಂದ್ಯದಲ್ಲಿ ನಿರ್ಮಾಣವಾಗಿದೆ.

ದಾಖಲೆ ಸೃಷ್ಟಿಸಿದ ಪ್ರಫುಲ್ ಹಿಂಗೆ

ಸನ್​ರೈಸರ್ಸ್ ಹೈದರಾಬಾದ್ ಪರ ಪದಾರ್ಪಣೆ ಮಾಡಿದ ಪ್ರಫುಲ್ ಹಿಂಗೆ ಬೌಲಿಂಗ್​​ನಲ್ಲಿ ಮೊದಲ ಓವರ್​ನಲ್ಲಿ ಮೂವರು ಬ್ಯಾಟರ್​ಗಳು ಡಕ್ ಔಟ್ ಆಗಿದ್ದು ಐಪಿಎಲ್ ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ.

ಟೂರ್ನಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ದಿಗ್ಗಜ ಬೌಲರ್‌ಗಳನ್ನೇ ನಡುಗಿಸಿದ್ದ ವೈಭವ್ ಸೂರ್ಯವಂಶಿ ತಾವೆದುರಿಸಿದ ಮೊದಲ ಎಸೆತದಲ್ಲೇ ಸಲೀಲ್ ಅರೋರಾಗೆ ಕ್ಯಾಚ್ ನೀಡಿ ನಿರ್ಗಮಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಧ್ರುವ್ ಜುರೆಲ್ ಖಾತೆ ತೆರೆಯದೇ ಪ್ರಫುಲ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಕೊನೆಯ ಎಸೆತದಲ್ಲಿ ಲುವಾನ್ ಡಿ ಪ್ರೆಟೋರಿಯಸ್ ಕೂಡ ರನ್ ಗಳಿಸದೇ ನಿತೀಶ್ ಕುಮಾರ್ ರೆಡ್ಡಿಗೆ ಕ್ಯಾಚ್ ನೀಡಿ ಪೆವಿಲಿಯನ್ ಗೆ ನಡೆದರು. 19 ವರ್ಷಗಳಲ್ಲಿ ಯಾವುದೇ ಬೌಲರ್ ಮೊದಲ ಓವರ್‌ನಲ್ಲಿ 3 ವಿಕೆಟ್ ಪಡೆದಿರಲಿಲ್ಲ. ಆದರೆ 24 ವರ್ಷದ ಪ್ರಫುಲ್ ಹಿಂಗೆ ಕೇವಲ 1 ರನ್ ನೀಡಿ 3 ವಿಕೆಟ್ ಪಡೆದು ಚರಿತ್ರೆ ಸೃಷ್ಟಿಸಿದ್ದಾರೆ.

ಹೀನಾಯ ಬ್ಯಾಟಿಂಗ್

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಮೊದಲ ತಂಡವಾಗಿ ರಾಜಸ್ಥಾನ್ ರಾಯಲ್ಸ್ ಹೊರಹೊಮ್ಮಿದೆ. ಹೈದರಾಬಾದ್ ತಂಡದ ಬೌಲರ್ ಗಳನ್ನು ಎದುರಿಸಲು ಸಾಧ್ಯವಾಗದೇ ಆರ್ ಆರ್ ತಂಡ 19 ಓವರ್ ಗಳಲ್ಲಿ 159 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com