

ಬಾಲ್ಯದಿಂದಲೇ ಕ್ರಿಕೆಟ್ ಅಭಿಮಾನಿಯಾಗಿರುವ ದಂತಕಥೆ ಸ್ಪ್ರಿಂಟರ್ ಉಸೇನ್ ಬೋಲ್ಟ್ (39ವ) ವೆಸ್ಟ್ ಇಂಡೀಸ್ ತಂಡವನ್ನು ನೋಡುತ್ತಾ ಬೆಳೆದವರು. ಆದರೆ ಇದೀಗ ಅವರು ಹೊಸ ತಂಡಕ್ಕೆ ಬೆಂಬಲ ನೀಡಲು ನೀಡುತ್ತಿದ್ದಾರೆ. ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಬೆಂಬಲಿಸುತ್ತಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಪಂದ್ಯಕ್ಕೆ ಆರ್ ಸಿಬಿಗೆ ಶುಭಾಶಯ ತಿಳಿಸಿದ್ದಾರೆ. ಎಂಟು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಬೋಲ್ಟ್, RCB ಜರ್ಸಿ ಧರಿಸಿರುವ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, “ನಮಸ್ಕಾರ. ಪುಮಾ ನನಗೆ ಈ ಉಡುಪನ್ನು ಕಳುಹಿಸಿದೆ. ಆದ್ದರಿಂದ ನಾನು ಅದನ್ನು ಪ್ರತಿನಿಧಿಸಬೇಕಾಯಿತು,” ಎಂದು ಕ್ಯಾಪ್ಷನ್ ನೀಡಿದ್ದಾರೆ. ಅವರ ಈ ಪೋಸ್ಟ್‌ಗೆ ಸುಮಾರು ಆರು ಲಕ್ಷ ‘ಲೈಕ್‌ಗಳು’ ಬಂದಿವೆ.
ಇದು ಸ್ಪ್ರಿಂಟ್ ಕಿಂಗ್ ಉಸೇನ್ ಬೋಲ್ಟ್ ಅವರು ಆರ್ ಸಿಬಿಗೆ ಬೆಂಬಲ ನೀಡುತ್ತಿರುವುದು ಮೊದಲ ಬಾರಿ ಅಲ್ಲ. 2021ರಲ್ಲಿಯೂ ಉಸೇನ್ ಬೋಲ್ಟ್ ಆರ್ ಸಿಬಿ ಜರ್ಸಿ ಧರಿಸಿ ಫೋಟೋಗೆ ಪೋಸ್ ನೀಡಿದ್ದರು.
ಈ ನಡುವೆ, ಐಪಿಎಲ್ 2026 ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ Royal Challengers Bengaluru ತಂಡವು ಇಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಖಾಮುಖಿಯಾಗಲಿದೆ.
Advertisement