ವೈಭವ್ ಸೂರ್ಯವಂಶಿಯಲ್ಲಿ ಬ್ರಿಯಾನ್ ಲಾರಾ ನೋಡಬಲ್ಲೆ, ಆದ್ರೆ...: ಆಸೀಸ್ ಮಾಜಿ ನಾಯಕ ಹೇಳಿದ್ದೇನು?

"ವೈಭವ್ ಒಬ್ಬ ಅದ್ಭುತ ಆಟಗಾರ, ಅದ್ಭುತ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. 14 ಅಥವಾ 15ನೇ ವಯಸ್ಸಿನಲ್ಲಿ ಇಷ್ಟು ಬಲವಾಗಿ ಚೆಂಡನ್ನು ಹೊಡೆಯುವ ಯಾವುದೇ ಬ್ಯಾಟ್ಸ್‌ಮನ್ ಅನ್ನು ನೋಡಿಲ್ಲ"
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಹದಿಹರೆಯದ ಬ್ಯಾಟ್ಸ್‌ಮನ್ ವೈಭವ್ ಸೂರ್ಯವಂಶಿ ಅವರ ನಿರ್ಭೀತ ಸ್ಟ್ರೋಕ್‌ಪ್ಲೇಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ಶ್ಲಾಘಿಸಿದ್ದಾರೆ.

1987 ರಲ್ಲಿ ಆಸ್ಟ್ರೇಲಿಯಾಗೆ ಮೊದಲ ವಿಶ್ವಕಪ್ ಪ್ರಶಸ್ತಿ ತಂದುಕೊಟ್ಟ ಬಾರ್ಡರ್, ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಚೆಂಡನ್ನು ಇಷ್ಟೊಂದು ಬಲಶಾಲಿಯಾಗಿ ಹೊಡೆಯುವ ಆಟಗಾರನನ್ನು ನೋಡಿದ್ದು ಅಪರೂಪ. 15 ವರ್ಷದ ಒಬ್ಬ ಬಾಲಕ ಮೈದಾನದಾದ್ಯಂತ ಸ್ಕೋರ್ ಮಾಡುವ ಸಾಮರ್ಥ್ಯವಿರುವ "ಒಬ್ಬ ಮಹಾನ್ ಪ್ರತಿಭೆ" ಎಂದು ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ್ದಾರೆ.

"ವೈಭವ್ ಒಬ್ಬ ಅದ್ಭುತ ಆಟಗಾರ, ಅದ್ಭುತ ಪ್ರತಿಭೆ ಎಂದು ನಾನು ಭಾವಿಸುತ್ತೇನೆ. 14 ಅಥವಾ 15ನೇ ವಯಸ್ಸಿನಲ್ಲಿ ಇಷ್ಟು ಬಲವಾಗಿ ಚೆಂಡನ್ನು ಹೊಡೆಯುವ ಯಾವುದೇ ಬ್ಯಾಟ್ಸ್‌ಮನ್ ಅನ್ನು ನೋಡಿಲ್ಲ" ಎಂದು ಬಾರ್ಡರ್ ಮಿಡ್-ಡೇ ಜೊತೆಗಿನ ಸಂವಾದದಲ್ಲಿ ಹೇಳಿದ್ದಾರೆ.

Vaibhav Sooryavanshi
Video: ಸೋಲಿನ ನಂತರ ಕಣ್ಣೀರಿಟ್ಟ ವೈಭವ್ ಸೂರ್ಯವಂಶಿ; ಓಡಿ ಬಂದ KKR ಆಟಗಾರ!

ವೈಭವ್ ಸೂರ್ಯವಂಶಿಯನ್ನು ವೆಸ್ಟ್ ಇಂಡೀಸ್ ದಂತಕಥೆ ಹಾಗೂ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಬ್ರಿಯಾನ್ ಲಾರಾ ಅವರಿಗೆ ಹೋಲಿಸಿದ ಬಾರ್ಡರ್, ಯುವ ಆಟಗಾರ ತಾಳ್ಮೆಯನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಈ ಯುವಕ ಇನ್ನೂ ತನ್ನ ವೃತ್ತಿಜೀವನದ ಆರಂಭದಲ್ಲಿದ್ದಾರೆ ಮತ್ತು ಉನ್ನತ ಮಟ್ಟದಲ್ಲಿ, ವಿಶೇಷವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿಯಾಗಲು ಬಲವಾದ ಡಿಫೆನ್ಸ್ ಬೆಳೆಸಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com