DC ಕ್ಯಾಂಪ್ ನಲ್ಲಿ ಭಯಾನಕ ದೃಶ್ಯ: ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್; ಗಂಭೀರ ಗಾಯ, ಆಸ್ಪತ್ರೆ ಶಿಫ್ಟ್! Video

ಆಟಗಾರನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
A Young Delhi Capitals Batter Struck On Face, Taken Away In Ambulance | VIDEO
ಯುವ ಆಟಗಾರನ ಮುಖಕ್ಕೆ ಬಡಿದ ಬಾಲ್
Updated on: 

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ತರಬೇತಿ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್(DC) ತಂಡದ ಯುವ ಆಟಗಾರರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ತರಬೇತಿ ಅವಧಿಯಲ್ಲಿ, ಯುವ ಆಟಗಾರನ ಮುಖಕ್ಕೆ ಚೆಂಡು ಬಲವಾಗಿ ಬಡಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ತೀವ್ರ ರಕ್ತಸ್ರಾವವಾಗಲು ಪ್ರಾರಂಭಿಸಿದ ನಂತರ ಅವರಿಗೆ ಸ್ಟ್ರೆಚರ್‌ನಲ್ಲಿಯೇ ಪ್ರಾಥಮಿಕ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಟಗಾರನನ್ನು ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

A Young Delhi Capitals Batter Struck On Face, Taken Away In Ambulance | VIDEO
IPL 2026: 'ನಾನು ಮೈದಾನಕ್ಕೆ ಬಂದಾಗಲೆಲ್ಲ, ನನ್ನ ವೈಯಕ್ತಿಕ 'ego'ವನ್ನು ಹೋಟೆಲ್ ಕೋಣೆಯಲ್ಲೇ ಬಿಟ್ಟು ಬರುತ್ತೇನೆ'

ಗಾಯಗೊಂಡ ಆಟಗಾರ ಯಾರೂ ಎಂದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಸಾಹಿಲ್ ಪರಾಖ್ ಎನ್ನಲಾಗುತ್ತಿದೆ. 18 ವರ್ಷದ ಎಡಗೈ ಬೌಲರ್ ಸಾಹಿಲ್ ಅವರನ್ನು ಐಪಿಎಲ್ 2026 ರ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ ಖರೀದಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com