ಪಂಜಾಬ್ ಕಿಂಗ್ಸ್ ತಂಡದ ಆಲ್‌ರೌಂಡರ್ ತಾಯಿ ನಿಧನ; ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ PBKSಗೆ ಸಂಕಷ್ಟ!

26 ವರ್ಷದ ಒಮರ್‌ಜೈ, ಸದ್ಯ ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಭಾಗವಾಗಿದ್ದಾರೆ. ಆದರೂ, ಅವರು ಈ ಆವೃತ್ತಿಯಲ್ಲಿ ಇದುವರೆಗೆ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ.
Azmatullah Omarzai
ಅಜ್ಮತುಲ್ಲಾ ಒಮರ್‌ಜೈ
Updated on

ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಆಲ್‌ರೌಂಡರ್ ಅಜ್ಮತುಲ್ಲಾ ಒಮರ್‌ಜೈ ಅವರ ತಾಯಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಅವರ ಅಫ್ಘಾನಿಸ್ತಾನ ತಂಡದ ಸಹ ಆಟಗಾರರಾದ ಮೊಹಮ್ಮದ್ ನಬಿ ಮತ್ತು ಕರೀಮ್ ಜನತ್ ದೃಢಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಸಂತಾಪ ಮತ್ತು ಬೆಂಬಲದ ಸಂದೇಶಗಳನ್ನು ಹಂಚಿಕೊಂಡಿದ್ದಾರೆ.

26 ವರ್ಷದ ಒಮರ್‌ಜೈ, ಸದ್ಯ ಐಪಿಎಲ್ 2026ರಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡದ ಭಾಗವಾಗಿದ್ದಾರೆ. ಆದರೂ, ಅವರು ಈ ಆವೃತ್ತಿಯಲ್ಲಿ ಇದುವರೆಗೆ ಯಾವುದೇ ಪಂದ್ಯದಲ್ಲಿ ಕಾಣಿಸಿಕೊಂಡಿಲ್ಲ. ರಾಜಸ್ಥಾನ ರಾಯಲ್ಸ್ ವಿರುದ್ಧದ ಮುಂಬರುವ ಪಂದ್ಯಕ್ಕೆ ಅವರ ಲಭ್ಯತೆಯ ಕುರಿತು ಫ್ರಾಂಚೈಸಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

'ರಾಷ್ಟ್ರೀಯ ಆಟಗಾರ ಅಜ್ಮತುಲ್ಲಾ ಒಮರ್‌ಜೈ ಅವರ ತಾಯಿಯ ನಿಧನದಿಂದ ನಮಗೆ ದುಃಖವಾಗಿದೆ. ಸರ್ವಶಕ್ತನಾದ ಅಲ್ಲಾಹನು ಮೃತರಿಗೆ ಸ್ವರ್ಗ ಪ್ರಾಪ್ತಿ ಮಾಡಲಿ ಮತ್ತು ಕುಟುಂಬಕ್ಕೆ ತಾಳ್ಮೆಯನ್ನು ನೀಡಲಿ. ಈ ದುಃಖದ ಕ್ಷಣಗಳಲ್ಲಿ ನಾವು ಅವರೊಂದಿಗೆ ಹಂಚಿಕೊಳ್ಳುತ್ತೇವೆ' ಎಂದು ಕರೀಮ್ ಜನತ್ ಸಂತಾಪ ಸೂಚಿಸಿದ್ದಾರೆ.

'ನವಾಬ್ ಖಾನ್ ಉಮರ್ಜೈ ಅವರ ತಾಯಿ ಮತ್ತು ನಮ್ಮ ರಾಷ್ಟ್ರೀಯ ತಂಡದ ಆಟಗಾರ ಅಜ್ಮತುಲ್ಲಾ ಒಮರ್ಜೈ ನಿಧನದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಸರ್ವಶಕ್ತನಾದ ಅಲ್ಲಾಹನು ಅವರ ಆತ್ಮಕ್ಕೆ ಜನ್ನಾದಲ್ಲಿ ಅತ್ಯುನ್ನತ ಸ್ಥಾನವನ್ನು ನೀಡಲಿ ಮತ್ತು ಇಡೀ ಕುಟುಂಬಕ್ಕೆ ತಾಳ್ಮೆ ಮತ್ತು ಶಕ್ತಿಯನ್ನು ಕರುಣಿಸಲಿ' ಎಂದು ಮೊಹಮ್ಮದ್ ನಬಿ ಕೂಡ ಹೇಳಿದ್ದಾರೆ.

Azmatullah Omarzai
Asia Cup 2025 ವೇಳೆಯೇ ಶ್ರೀಲಂಕಾ ಸ್ಟಾರ್ ಆಟಗಾರನ ತಂದೆ ಸಾವು; ಸೂರ್ಯಕುಮಾರ್ ಯಾದವ್ ಮಾಡಿದ್ದೇನು? ವಿಡಿಯೋ ನೋಡಿ...

ಪಂಜಾಬ್ ಕಿಂಗ್ಸ್ ತಂಡವು ಏಪ್ರಿಲ್ 28ರ ಮಂಗಳವಾರ ಮುಲ್ಲನ್‌ಪುರದಲ್ಲಿ ರಾಜಸ್ಥಾನ್ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಈಗಿರುವ ಪರಿಸ್ಥಿತಿಯಲ್ಲಿ, ಒಮರ್‌ಜೈ ಅವರು ಆಯ್ಕೆಗೆ ಲಭ್ಯರಿರುತ್ತಾರೆಯೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲ.

ಪಂಜಾಬ್ ಕಿಂಗ್ಸ್ ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದೆ. ಆಡಿರುವ ಏಳು ಪಂದ್ಯಗಳ ಪೈಕಿ ಆರರಲ್ಲಿ ಗೆಲುವು ಸಾಧಿಸಿದ್ದರೆ, ಮತ್ತೊಂದರಲ್ಲಿ ಫಲಿತಾಂಶ ಲಭ್ಯವಾಗಿಲ್ಲ. ಐಪಿಎಲ್ ಅಂಕಪಟ್ಟಿಯಲ್ಲಿ ಸದ್ಯ ಪಿಬಿಕೆಎಸ್ ಅಗ್ರಸ್ಥಾನದಲ್ಲಿದೆ. ಐಪಿಎಲ್ 2026ರಲ್ಲಿ ಈವರೆಗೆ ಸೋಲು ಕಾಣದ ಏಕೈಕ ತಂಡ ಪಂಜಾಬ್ ಕಿಂಗ್ಸ್ ಆಗಿದೆ.

ಒಮರ್‌ಜೈ 2024ರಲ್ಲಿ ಗುಜರಾತ್ ಟೈಟಾನ್ಸ್ (GT) ಜೊತೆ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಮೊದಲ ಸೀಸನ್‌ನಲ್ಲಿ ಏಳು ಪಂದ್ಯಗಳನ್ನು ಆಡಿದರು. ನಂತರ ಅವರನ್ನು ಪಂಜಾಬ್ ಕಿಂಗ್ಸ್ ₹2.40 ಕೋಟಿಗೆ ಖರೀದಿಸಿತು ಮತ್ತು 2025ರ ಐಪಿಎಲ್‌ನಲ್ಲಿ ಒಂಬತ್ತು ಪಂದ್ಯಗಳಲ್ಲಿ ಆಡಿದರು. ಎಂಟು ವಿಕೆಟ್‌ಗಳನ್ನು ಪಡೆದರು. ಈ ಸೀಸನ್‌ನಲ್ಲಿ ಇನ್ನೂ ಆಡದಿದ್ದರೂ, ಅವರು ಬ್ಯಾಕಪ್ ಆಲ್‌ರೌಂಡರ್ ಆಗಿ ಪಿಬಿಕೆಎಸ್ ತಂಡದ ಭಾಗವಾಗಿದ್ದಾರೆ. ಇದೀಗ ಮಾರ್ಕಸ್ ಸ್ಟೊಯಿನಿಸ್ ಬದಲಿಗೆ ಅವರು ಯಾವುದೇ ಸಮಯದಲ್ಲಿ ತಂಡದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com