MCAಗೆ FDA ಶಾಕ್: ಕ್ರಿಕೆಟ್ ಮಂಡಳಿಯ 5 ಆಹಾರ ಮಳಿಗೆಗಳ ಲೈಸೆನ್ಸ್ ಅಮಾನತು

ಅಭಿಯಾನದ ವೇಳೆ 45 ಹೋಟೆಲ್‌, ರೆಸ್ಟೋರೆಂಟ್‌, ಆಹಾರ ಮಳಿಗೆ ಹಾಗೂ ಧಾಬಾಗಳನ್ನು ಪರಿಶೀಲಿಸಲಾಗಿದ್ದು, 33 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ ನೀಡಲಾಗಿದೆ.
Mumbai cricket Association
ಮುಂಬೈ ಕ್ರಿಕೆಟ್ ಮಂಡಳಿ
Updated on

ಮುಂಬೈ: ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA), ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ (MCA) ಆವರಣದಲ್ಲಿರುವ ಐದು ಆಹಾರ ಮಳಿಗೆಗಳ ಆಹಾರ ಪರವಾನಗಿಗಳನ್ನು ಅಮಾನತುಗೊಳಿಸಿದೆ.

ಮಹಾರಾಷ್ಟ್ರ ರಾಜ್ಯಾದ್ಯಂತ ನಡೆಯುತ್ತಿರುವ ಆಹಾರ ಸುರಕ್ಷತಾ ತಪಾಸಣಾ ಅಭಿಯಾನದ ಭಾಗವಾಗಿ ಒಟ್ಟು 11 ಆಹಾರ ಸಂಸ್ಥೆಗಳ ಲೈಸೆನ್ಸ್‌ಗಳನ್ನು ಅಮಾನತುಗೊಳಿಸಲಾಗಿದೆ ಎಂದು FDA ಸೋಮವಾರ ತಿಳಿಸಿದೆ.

ಅಭಿಯಾನದ ವೇಳೆ 45 ಹೋಟೆಲ್‌, ರೆಸ್ಟೋರೆಂಟ್‌, ಆಹಾರ ಮಳಿಗೆ ಹಾಗೂ ಧಾಬಾಗಳನ್ನು ಪರಿಶೀಲಿಸಲಾಗಿದ್ದು, 33 ಸಂಸ್ಥೆಗಳಿಗೆ ಸುಧಾರಣಾ ನೋಟಿಸ್ ನೀಡಲಾಗಿದೆ. ಅಲ್ಲದೆ, 25 ಕಡೆ ದಾಳಿ ನಡೆಸಲಾಗಿದೆ ಎಂದು FDA ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

MCA ಆವರಣದಲ್ಲಿರುವ ಪರ್ಮಿಟ್ ರೂಮ್, ಪೆವಿಲಿಯನ್, ಮೆಡಿಟರೇನಿಯನ್, ಓರಿಯೆಂಟಲ್ ಸ್ವಿಂಗ್ ಹಾಗೂ ಕ್ಲಬ್‌ವೇ ಮತ್ತು ಪೇಸ್ಟ್ರಿ ಕೌಂಟರ್ ಸೇರಿದಂತೆ ಒಟ್ಟು 5 ಐದು ಮಳಿಗೆಗಳ ವಿರುದ್ಧ ಈ ಕಠಿಣ ಕ್ರಮ ಜರುಗಿಸಲಾಗಿದೆ.

ಆಗಸ್ಟ್ 20ರಂದು ನಡೆಸಿದ ತಪಾಸಣೆಯಲ್ಲಿ ಈ ಮಳಿಗೆಗಳಲ್ಲಿ ಸ್ವಚ್ಛತೆ, ಆಹಾರ ನಿರ್ವಹಣೆ, ಸಂಗ್ರಹಣೆ, ಶೈತ್ಯೀಕರಣ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಹಲವು ಲೋಪಗಳು ಪತ್ತೆಯಾಗಿದ್ದವು.

Mumbai cricket Association
ಮೂರು ದಿನಗಳಲ್ಲಿ ಬೆಂಗಳೂರಿನ 60 ಸ್ಟಾರ್ ಹೊಟೇಲ್ ಮೇಲೆ ದಾಳಿ: 1 ವರ್ಷ ಮೀರಿದ ಮಾಂಸಾಹಾರ ಉತ್ಪನ್ನ ಪತ್ತೆ!

ಕೊಳಗಾಗಿದ್ದ ಅಡುಗೆ ಮನೆ

ಪರ್ಮಿಟ್ ರೂಮ್‌ನಲ್ಲಿ ಅಡುಗೆಮನೆಯ ರೆಫ್ರಿಜರೇಟರ್‌ನಲ್ಲಿ ಹೆಚ್ಚಿನ ಪ್ರಮಾಣದ ಮಂಜು ಜಮೆಯಾಗಿರುವುದು, ಅಡುಗೆಮನೆ ಪ್ರವೇಶದ್ವಾರದ ಬಳಿ ನೆಲವು ಕೊಳಕಾಗಿದ್ದು ಜಾರುವಂತಿರುವುದು, ಆಹಾರದ ತಾಪಮಾನ ನಿಯಂತ್ರಣದಲ್ಲಿ ಕೊರತೆ, ಹಾಳಾಗಿದ್ದ ಕಚ್ಚಾ ವಸ್ತುಗಳು ಹಾಗೂ ಆಹಾರ ಸಂಗ್ರಹಣೆ ಮತ್ತು ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆಗಳು ಕಂಡುಬಂದಿವೆ.

ಇದಲ್ಲದೆ, ಆಹಾರದ ಸಂಪರ್ಕಕ್ಕೆ ಬರುವ ಪ್ಯಾಕೇಜಿಂಗ್ ವಸ್ತುಗಳಿಗೆ ಫುಡ್-ಗ್ರೇಡ್ ಅನುಸರಣಾ ಪ್ರಮಾಣಪತ್ರ ಇರಲಿಲ್ಲ. ಅಡುಗೆಯಲ್ಲಿ ಬಳಸುವ ಎಣ್ಣೆಯ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆಯೂ ಇರಲಿಲ್ಲ ಎಂದು FDA ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com