The Hundred auction: 'ಪಾಕ್ ಆಟಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಿ': ECBಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪತ್ರ

ಪುರುಷರು ಮತ್ತು ಮಹಿಳೆಯರು ಸೇರಿದಂತೆ ಪಾಕಿಸ್ತಾನದ 63 ಕ್ರಿಕೆಟಿಗರು 'ದಿ ಹಂಡ್ರೆಡ್ 2026' ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
pakistan players
ಪಾಕಿಸ್ತಾನದ ಆಟಗಾರರು
Updated on

ಐಪಿಎಲ್‌ ಜೊತೆಗೆ ಸಂಬಂಧ ಹೊಂದಿರುವ ಫ್ರಾಂಚೈಸಿಗಳು ತಮ್ಮ ದೇಶದ ಆಟಗಾರರನ್ನು ಹೊರಗಿಡುವ ಸಾಧ್ಯತೆಯ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ (ಇಸಿಬಿ) ಪತ್ರ ಬರೆಯಲು ಸಜ್ಜಾಗಿದೆ. ಐಪಿಎಲ್‌ಗೆ ಸಂಬಂಧಿಸಿದ ಪಂದ್ಯಾವಳಿಯಲ್ಲಿನ ಫ್ರಾಂಚೈಸಿಗಳು ಎಸ್‌ಎ 20 ಮತ್ತು ಐಎಲ್‌ಟಿ 20 ನಲ್ಲಿ ಕಂಡುಬಂದಿರುವ ಪ್ರವೃತ್ತಿಯನ್ನು ಮುಂದುವರೆಸುವ ವರದಿ ಬೆನ್ನಲ್ಲೇ, ಪಿಸಿಬಿ ಈ ವಿಷಯದ ಬಗ್ಗೆ ಇಸಿಬಿಗೆ ಔಪಚಾರಿಕ ವಿನಂತಿ ಮಾಡುವ ನಿರೀಕ್ಷೆಯಿದೆ.

ಪಾಕಿಸ್ತಾನವು ದಿ ಹಂಡ್ರೆಡ್‌ನ ಭಾಗವಾಗಲು ಬಯಸುತ್ತದೆ

ಟೆಲಿಕಾಂ ಏಷ್ಯಾದ ವರದಿ ಪ್ರಕಾರ, ಹಂಡ್ರೆಡ್ ಹರಾಜಿನಲ್ಲಿ ಪಾಕಿಸ್ತಾನ ಆಟಗಾರರನ್ನು ಅನ್ಯಾಯವಾಗಿ ನಡೆಸಿಕೊಂಡ ಬಗ್ಗೆ ಕಳವಳ ವ್ಯಕ್ತಪಡಿಸಿ ಪಿಸಿಬಿ ಇಸಿಬಿಗೆ ಪತ್ರ ಬರೆಯುವ ನಿರೀಕ್ಷೆಯಿದೆ.

'ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಸಲ್ಮಾನ್ ನಸೀರ್ ಮೂಲಕ, ಪಾಕಿಸ್ತಾನಿ ಆಟಗಾರರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಇಸಿಬಿಗೆ ಪತ್ರ ಬರೆಯಲಿದೆ. ಪಂದ್ಯಾವಳಿಯಲ್ಲಿನ ಯಾವುದೇ ಪಕ್ಷಪಾತವು ಏಷ್ಯಾದ ಆಟಗಾರರನ್ನು ಒಳಗೊಳ್ಳುವ ಮತ್ತು ಸಮಾನ ಅವಕಾಶ ನೀಡುವ ಇಸಿಬಿಯ ಬದ್ಧತೆಗೆ ವಿರುದ್ಧವಾಗಿರುತ್ತದೆ' ಎಂದು ವರದಿ ತಿಳಿಸಿದೆ.

ಪುರುಷರು ಮತ್ತು ಮಹಿಳೆಯರು ಸೇರಿದಂತೆ ಪಾಕಿಸ್ತಾನದ 63 ಕ್ರಿಕೆಟಿಗರು 'ದಿ ಹಂಡ್ರೆಡ್ 2026' ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಟಿ20 ವಿಶ್ವಕಪ್ 2026 ತಂಡದ ಭಾಗವಾಗಿರುವ ಹೆಚ್ಚಿನ ಸದಸ್ಯರು ಯಾವುದೇ ಫ್ರಾಂಚೈಸಿಗಳಲ್ಲಿ ಸ್ಥಾನ ಪಡೆಯುವ ಪ್ರಯತ್ನದಲ್ಲಿ ತಮ್ಮ ಹೆಸರನ್ನು ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)-ಸಂಬಂಧಿತ ನಾಲ್ಕು ಫ್ರಾಂಚೈಸಿಗಳಾದ ಎಂಐ ಲಂಡನ್ (ರಿಲಯನ್ಸ್ ಇಂಡಸ್ಟ್ರೀಸ್), ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ (ಆರ್‌ಪಿಎಸ್‌ಜಿ ಗ್ರೂಪ್), ಸದರ್ನ್ ಬ್ರೇವ್ (ಜಿಎಂಆರ್ ಗ್ರೂಪ್) ಮತ್ತು ಸನ್‌ರೈಸರ್ಸ್ ಲೀಡ್ಸ್ (ಸನ್ ಟಿವಿ) ಯಾವುದೇ ಪಾಕಿಸ್ತಾನಿ ಕ್ರಿಕೆಟಿಗರನ್ನು ಬಿಡ್ ಮಾಡುವುದಿಲ್ಲ ಎಂದು ಬಿಬಿಸಿ ವರದಿ ಸೂಚಿಸಿದೆ.

pakistan players
ಪಾಕ್ ಆಟಗಾರರಿಗೆ ಮತ್ತೊಂದು ಸಂಕಷ್ಟ; 'ದಿ ಹಂಡ್ರೆಡ್' ಹರಾಜಿನಲ್ಲಿ ಖರೀದಿಸಲು ಕೆಲ ಫ್ರಾಂಚೈಸಿಗಳ ಹಿಂದೇಟು!

ದಿ ಹಂಡ್ರೆಡ್ ಹರಾಜಿಗೂ ಮುನ್ನ, ಪಾಕಿಸ್ತಾನದ ಆಟಗಾರರಿಗೆ ಲೀಗ್‌ನಲ್ಲಿ ಆಡಲು ಅವಕಾಶ ನೀಡಲಾಗುತ್ತದೆಯೇ ಎಂದು ಇಸಿಬಿ ಕಾರ್ಯನಿರ್ವಾಹಕ ರಿಚರ್ಡ್ ಗೌಲ್ಡ್ ಅವರನ್ನು ಕೇಳಲಾಯಿತು. ಯಾವುದೇ ದೇಶದ ಆಟಗಾರರ ವಿರುದ್ಧ ತಾರತಮ್ಯ ಮಾಡಲಾಗುವುದಿಲ್ಲ ಎಂದು ಗೌಲ್ಡ್ ದೃಢವಾಗಿ ಹೇಳಿದ್ದರು. ಆದರೆ, ಆ ಖಚಿತತೆ ಹಾಗೆ ಕಾಣುತ್ತಿಲ್ಲ.

'ಎಲ್ಲ ತಂಡಗಳು ಎಲ್ಲ ರಾಷ್ಟ್ರಗಳ ಆಟಗಾರರನ್ನು ಆಯ್ಕೆ ಮಾಡಬೇಕೆಂದು ನಾನು ನಿರೀಕ್ಷಿಸುತ್ತೇನೆ. ಈ ಹಂತದಲ್ಲಿ ನಮಗೆ ಯಾವುದೇ ಚರ್ಚೆಗಳು ಅಗತ್ಯವಿಲ್ಲ. ಇಂಗ್ಲೆಂಡ್‌ ಕ್ರಿಕೆಟ್‌ನಲ್ಲಿ ನಮಗೆ ಸ್ಪಷ್ಟವಾದ ತಾರತಮ್ಯ ವಿರೋಧಿ ನೀತಿಗಳಿವೆ. ಅವುಗಳನ್ನು ಪಾಲಿಸದಿದ್ದರೆ, ನಮ್ಮ ಕ್ರಿಕೆಟ್ ನಿಯಂತ್ರಕ ಕ್ರಮ ಕೈಗೊಳ್ಳುತ್ತದೆ' ಎಂದು ಗೌಲ್ಡ್ ಕಳೆದ ವರ್ಷ ಹೇಳಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com