ಮುಂದಿನ ವರ್ಷವೂ 'ನಮ್ದೇ ಕಪ್': ಹ್ಯಾಟ್ರಿಕ್ ಗೆಲುವಿನ ವಿಶ್ವಾಸದಲ್ಲಿ RCB ಮಾಲೀಕ ಕುಮಾರ್ ಮಂಗಳಂ ಬಿರ್ಲಾ!

ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 155ಕ್ಕೆ ಸಿಮೀತಗೊಳಿಸಿದ ರಜತ್ ಪಾಟಿದಾರ್ ನೇತೃತ್ವದ ತಂಡ ಐದು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.
RCB  Players
ಆರ್ ಸಿಬಿ ಆಟಗಾರರ ಸಂಭ್ರಮ
Updated on: 

ಅಹಮದಾಬಾದ್‌: ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2026 ರ ಫೈನಲ್‌ನಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ತಂಡವನ್ನು ಐದು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಆರ್‌ಸಿಬಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿದ್ದನ್ನು ಮಾಲೀಕ ಕುಮಾರ್ ಮಂಗಳಂ ಬಿರ್ಲಾ ಶ್ಲಾಘಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ (MI) ನಂತರ ತಮ್ಮ ಐಪಿಎಲ್ ಟ್ರೋಫಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೂರನೇ ತಂಡ ಆರ್‌ಸಿಬಿ ಆಯಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 8 ವಿಕೆಟ್ ನಷ್ಟಕ್ಕೆ 155ಕ್ಕೆ ಸಿಮೀತಗೊಳಿಸಿದ ರಜತ್ ಪಾಟಿದಾರ್ ನೇತೃತ್ವದ ತಂಡ ಐದು ವಿಕೆಟ್‌ಗಳಿಂದ ಸುಲಭ ಜಯ ಸಾಧಿಸಿತು.

ಆರ್ ಸಿಬಿ ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಫ್ರಾಂಚೈಸಿ ಮಾಲೀಕ ಕುಮಾರ್ ಮಂಗಳಂ ಬಿರ್ಲಾ, ಇದೊಂದು ಅತ್ಯುತ್ತಮ ತಂಡವಾಗಿದೆ. ಒಟ್ಟಾಗಿ ಆಟವಾಡಿದ್ದಾರೆ. ಅಂತಹ ಬಾಂಧವ್ಯದ ತಂಡವನ್ನು ನೋಡುವುದು ಬಹಳ ಅಪರೂಪ. ಮುಂದಿನ ವರ್ಷ ಹ್ಯಾಟ್ರಿಕ್ ಸಿಗುತ್ತದೆ ಎಂದು ಭಾವಿಸುತ್ತೇನೆ" ಎಂದು ಅವರು ಹೇಳಿದರು.

RCB  Players
IPL 2026: ಟ್ರೋಫಿ ಗೆದ್ದ ಬಳಿಕ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮಸ್ತ್ ಡ್ಯಾನ್ಸ್! Video ವೈರಲ್

ಮತ್ತೊಂದೆಡೆ, ಗುಜರಾತ್ ಟೈಟಾನ್ಸ್‌ನ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಕರ್ನಲ್ ಅರವಿಂದರ್ ಸಿಂಗ್ ಮಾತನಾಡಿ,"ಇದು ಸಾಕಷ್ಟು ಆಸಕ್ತಿದಾಯಕ ಪಂದ್ಯವಾಗಿತ್ತು. ಕಡಿಮೆ ರನ್ ಗಳಿಸಿದರೂ, ನಮ್ಮ ತಂಡವು ಅತ್ಯುತ್ತಮ ಪ್ರದರ್ಶನ ನೀಡಿದೆ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com