T20 World Cup 2026: ಭಾನುವಾರ ಸಮಾರೋಪ ಸಮಾರಂಭ, ಗ್ಲೋಬಲ್ ಐಕಾನ್ 'ರಿಕಿ ಮಾರ್ಟಿನ್' ಪ್ರದರ್ಶನ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವರ ಹಂಚಿಕೊಂಡಿದೆ.
Ricky Martin
ರಿಕಿ ಮಾರ್ಟಿನ್
Updated on

ಗುಜರಾತ್: ಭಾನುವಾರ ನಡೆಯಲಿರುವ ಐಸಿಸಿ T20 ವಿಶ್ವಕಪ್‌ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ಜಾಗತಿಕ ಪಾಪ್ ಐಕಾನ್ ರಿಕಿ ಮಾರ್ಟಿನ್ ಪ್ರದರ್ಶನ ಇರಲಿದೆ. ಗಾಯಕ, ನಟನಾಗಿರುವ ರಿಕಿ ಮಾರ್ಟಿನ್ "ಲ್ಯಾಟಿನ್ ಪಾಪ್ ರಾಜ" ಎಂದು ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ.

ಈ ಕುರಿತು ಶುಕ್ರವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಗಳ ಮೂಲಕ ವಿವರ ಹಂಚಿಕೊಂಡಿದೆ.

T20WorldCup ಪಾರ್ಟಿ ಈಗಷ್ಟೇ ದೊಡ್ಡದಾಗಿದೆ! ICC ಪುರುಷರ T20 ವಿಶ್ವಕಪ್ 2026 ರಲ್ಲಿ ಫೈನಲ್‌ಗೂ ಮುನ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಗ್ಲೋಬಲ್ ಐಕಾನ್ ಮತ್ತು ಸೂಪರ್‌ಸ್ಟಾರ್ ರಿಕಿ ಮಾರ್ಟಿನ್ ಅವರ ಪ್ರದರ್ಶನ ಇರುವುದನ್ನು ಘೋಷಿಸಲು ನಮಗೆ ಥ್ರಿಲ್ ಆಗುತ್ತಿದೆ. ಇದನ್ನು ನೀವು ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಲಾಗಿದೆ.

Ricky Martin
T20 World Cup 2026: ಸಂಜು ಸ್ಯಾಮ್ಸನ್ ಈಗ ಪ್ರಬುದ್ಧರಾಗಿದ್ದಾರೆ, ಅಭಿಷೇಕ್ ಶರ್ಮಾರನ್ನು ತಂಡದಿಂದ ಕೈಬಿಡಬೇಡಿ; ರವಿ ಶಾಸ್ತ್ರಿ

ಕ್ರೀಡಾಂಗಣದ ಗೇಟ್ ಗಳು ಮಧ್ಯಾಹ್ನ 3-30ಕ್ಕೆ ಓಪನ್ ಆಗಲಿದ್ದು, ಸಂಜೆ 5-30ಕ್ಕೆ ಪ್ರದರ್ಶನ ಆರಂಭವಾಗಲಿದೆ ಎಂದು ಪೋಸ್ಟ್ ನಲ್ಲಿ ಹೇಳಲಾಗಿದೆ.

ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಭಾರತವು ನ್ಯೂಜಿಲೆಂಡ್ ಸೋಲಿಸುವ ಮೂಲಕ ಮತ್ತೊಂದು ಪ್ರಮುಖ ಐಸಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯುವ ಗುರಿ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com