RCB On Sale: ಬಿಡ್ 2 ಬಿಲಿಯನ್ ಡಾಲರ್ ದಾಟುವ ಸಾಧ್ಯತೆ, ಅಂತಿಮ ರೇಸ್ ನಲ್ಲಿ ಎರಡು ಕಂಪನಿಗಳ ನಡುವೆ ಪೈಪೋಟಿ!

ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದು, ಈಗ ಇಬ್ಬರು ಮಾತ್ರ ಅಂತಿಮ ಬಿಡ್ ನಲ್ಲಿ ರೇಸ್​ನಲ್ಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
RCB Team Casual Images
ಆರ್ ಸಿಬಿ ತಂಡದ ಸಾಂದರ್ಭಿಕ ಚಿತ್ರ
Updated on

ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಫ್ರಾಂಚೈಸಿ ಮಾರಾಟ ಪ್ರಕ್ರಿಯೆಯು ಇದೀಗ ಅಂತಿಮ ಹಂತಕ್ಕೆ ತಲುಪಿದೆ.

ಆದರೆ ಈ ಹಿಂದೆ ಇದ್ದ ಪ್ರಮುಖ ಕಂಪೆನಿಗಳು ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಯಿಂದ ಹಿಂದೆ ಸರಿದಿದ್ದು, ಈಗ ಇಬ್ಬರು ಮಾತ್ರ ಅಂತಿಮ ಬಿಡ್ ನಲ್ಲಿ ರೇಸ್​ನಲ್ಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಸ್ವೀಡನ್ ಮೂಲದ ಇಕ್ವಿಟಿ ಸಂಸ್ಥೆ ‘EQT’ ಗಮನಾರ್ಹ ಪ್ರಮಾಣದ ಬಿಡ್ ಸಲ್ಲಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಣಿಪಾಲ್ ಗ್ರೂಪ್‌ನ ಡಾ. ರಂಜನ್ ಪೈ ನೇತೃತ್ವದ ಅಮೆರಿಕದ ಕೆಕೆಆರ್ ಮತ್ತು ಸಿಂಗಾಪುರದ ಟೆಮಾಸೆಕ್ (Temasek) ಕಂಪನಿ ಕೂಡ ಅಂತಿಮ ರೇಸ್​ನಲ್ಲಿದೆ.

RCB Team Casual Images
IPL ಚಾಂಪಿಯನ್ RCB ಸೇಲ್: ಯಾರ ಪಾಲು..? ಎಷ್ಟು ಮೊತ್ತಕ್ಕೆ ಮಾರಾಟ?

ಆರಂಭದಲ್ಲಿ ಆರ್ ಸಿಬಿ ಖರೀದಿಸಲು ಮ್ಯಾಂಚೆಸ್ಟರ್ ಯುನೈಟೆಡ್‌ನ ಸಹ-ಮಾಲೀಕರಾದ ಗ್ಲೇಜರ್ಸ್ ಮತ್ತು ಅಡಾರ್ ಪೂನಾವಾಲಾ ಕೂಡಾ ಆಸಕ್ತಿ ತೋರಿದ್ದರು. ಆದರೆ ಇದೀಗ ಅವರು ರೇಸ್ ನಿಂದ ಹಿಂದೆ ಸರಿದಿದ್ದು, ತಂಡದ ಮೌಲ್ಯ ಬಿಡ್ 2 ಬಿಲಿಯನ್ ಡಾಲರ್ ಗೂ ಹೆಚ್ಚಿನದಾಗಿದ್ದೆ ಎನ್ನಲಾಗುತ್ತಿದೆ.

ಗ್ಲೇಜರ್ಸ್ 1.8 ಬಿಲಿಯನ್ ಡಾಲರ್ ಬಿಡ್ಡಿಂಗ್ ಸಲ್ಲಿಕೆಗೆ ಆಫರ್ ಮಾಡಿದ್ದು, EQT 2 ಬಿಲಿಯನ್ ಡಾಲರ್ ಬಿಡ್ ಸಲ್ಲಿಸಿದೆ. ಇತರ ಯಾವುದೇ ಕಂಪನಿಗಳು ಬಿಡ್ ಸಲ್ಲಿಸಿಲ್ಲ ಎಂದು ಮಾಧ್ಯಮಗಳ ವರದಿಯಲ್ಲಿ ಹೇಳಲಾಗಿದೆ. ಮಾರಾಟ ಒಪ್ಪಂದ ಅಂತಿಮಗೊಳಿಸಲು ಡಿಯಾಜಿಯೊ ಸಮೂಹ ಮಾರ್ಚ್ 31 ಗಡುವನ್ನು ನಿಗದಿಪಡಿಸಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com