IPL 2026: ಟ್ರಕ್ ಚಾಲಕನ ಪುತ್ರ ಬರೋಬ್ಬರಿ ₹5.2 ಕೋಟಿಗೆ RCB ಪಾಲಾಗಿದ್ದು ಹೇಗೆ?: ಮಂಗೇಶ್ ಯಾದವ್ ಸ್ಫೂರ್ತಿದಾಯಕ ಪ್ರಯಾಣ!

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬೋರ್ಗಾಂವ್‌ನ 23 ವರ್ಷದ ಮಂಗೇಶ್ ಯಾದವ್, ಸಾಧಾರಣ ಪರಿಸ್ಥಿತಿಯಲ್ಲಿ ಬೆಳೆದು, ತನ್ನ ಕ್ರಿಕೆಟ್ ಕೌಶಲ್ಯವನ್ನು ಆರಂಭಿಕ ಹಂತದಲ್ಲೇ ಬೆಳೆಸಿಕೊಂಡರು.
Rajat Patidar - Mangesh Yadav
ರಜತ್ ಪಾಟೀದಾರ್ - ಮಂಗೇಶ್ ಯಾದವ್
Updated on

ಮಂಗೇಶ್ ಯಾದವ್ ವೃತ್ತಿಪರ ಕ್ರಿಕೆಟ್‌ಗೆ ಎಂಟ್ರಿ ನೀಡುವ ಮೊದಲು, ಅವರ ತಂದೆ ರಾಮಾವಧ್ ಯಾದವ್ ರಾತ್ರಿಯಿಡೀ ಕೆಲಸ ಮಾಡಿ, ತಮ್ಮ ಮಗನ ಕನಸಿಗೆ ಹಣವನ್ನು ಹೇಗೆ ಹೊಂದಿಸುವುದು ಎಂಬ ಬಗ್ಗೆಯೇ ಹೆಚ್ಚು ಯೋಚಿಸುತ್ತಿದ್ದರು. ಆರಂಭದಲ್ಲಿ ತನ್ನ ತಾಯಿಯೊಂದಿಗೆ ಮನೆ ಅಂಗಳದಲ್ಲಿ ಕ್ರಿಕೆಟ್ ಆಡುತ್ತಿದ್ದ ಹುಡುಗನ ಮೇಲೆಯೇ ಅವರು ತಮ್ಮ ಎಲ್ಲ ಸಂಪನ್ಮೂಲಗಳನ್ನು ಹೂಡಿಕೆ ಮಾಡಿದರು. ಆದರೆ, ಇಂದು ಮಂಗೇಶ್ ಯಾದವ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಬರೋಬ್ಬರಿ ₹5.2 ಕೋಟಿಗೆ ಬಿಕರಿಯಾಗಿದ್ದಾರೆ.

ತಮ್ಮ ಆರ್ಥಿಕ ಸಂಕಷ್ಟಗಳ ಕುರಿತು ಮಾತನಾಡುವ ಮಂಗೇಶ್ ಅವರ ತಂದೆ, 'ನಾನು ಹಣಕ್ಕಾಗಿ ತುಂಬಾ ಕಷ್ಟಪಡಬೇಕಾಯಿತು. ಕೆಲವೊಮ್ಮೆ ನಾನು ರಾತ್ರಿಯಲ್ಲಿ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ. ನಾನು ಮಗನಿಗಾಗಿ ಹೇಗೆ ಹಣ ಸಂಗ್ರಹಿಸಬಹುದು ಎಂಬ ಬಗ್ಗೆಯೇ ಯೋಚಿಸುತ್ತಿದ್ದೆ. ಟ್ರಕ್ ಚಾಲಕನ ಜೀವನವು ಜೀವನವಲ್ಲ. ನಿಮಗೆ ತಿನ್ನಲು ಅಥವಾ ಸ್ನಾನ ಮಾಡಲು ಸಮಯವಿರುವುದಿಲ್ಲ. ಟ್ರಕ್ ತುಂಬಿದಾಗ, ನೀವು ಅದನ್ನು ಅನ್ ಲೋಡ್ ಮಾಡುವ ಬಗ್ಗೆ ಚಿಂತಿಸುತ್ತೀರಿ ಮತ್ತು ಅದು ಖಾಲಿಯಾದಾಗ, ಅದನ್ನು ತುಂಬುವ ಬಗ್ಗೆ ಚಿಂತಿಸಬೇಕಾಗುತ್ತದೆ' ಎಂದರು.

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ ಬೋರ್ಗಾಂವ್‌ನ 23 ವರ್ಷದ ಮಂಗೇಶ್ ಯಾದವ್, ಸಾಧಾರಣ ಪರಿಸ್ಥಿತಿಯಲ್ಲಿ ಬೆಳೆದು, ತನ್ನ ಕ್ರಿಕೆಟ್ ಕೌಶಲ್ಯವನ್ನು ಆರಂಭಿಕ ಹಂತದಲ್ಲೇ ಬೆಳೆಸಿಕೊಂಡರು. ಟೆನಿಸ್-ಬಾಲ್ ಪಂದ್ಯಾವಳಿಗಳಲ್ಲಿ ಆತನ ಪ್ರತಿಭೆಯನ್ನು ಗುರುತಿಸಿದ ಅವನ ಚಿಕ್ಕಪ್ಪ, ಕೋಚ್ ಫೂಲ್ ಚಂದ್ ಶರ್ಮಾ ಅವರೊಂದಿಗೆ ತರಬೇತಿ ಪಡೆಯಲು ದೆಹಲಿಗೆ ಹೋಗಲು ಪ್ರೇರೇಪಿಸಿದರು.

'ನಾನು ಇಂದು ಕ್ರಿಕೆಟ್ ಆಡುತ್ತಿದ್ದರೆ, ಅದಕ್ಕೆ ಫೂಲ್ ಚಂದ್ ಸರ್ ಕಾರಣ. ನಾನು ದೆಹಲಿಗೆ ಹೋದಾಗ, ನನ್ನ ತಂದೆ ನನಗೆ ₹24,000 ಗಳನ್ನು ಬಹಳ ಕಷ್ಟಪಟ್ಟು ನೀಡಿದ್ದರು. ಮೊದಲ ತಿಂಗಳಲ್ಲಿ ಆ ಹಣ ಹೇಗೆ ಖರ್ಚಾಯಿತೋ ನನಗೆ ತಿಳಿದಿಲ್ಲ' ಎಂದು ಮಂಗೇಶ್ ಯಾದವ್ ತಿಳಿಸಿದರು.

Rajat Patidar - Mangesh Yadav
IPL 2026: ಮೊದಲ ಪಂದ್ಯಕ್ಕೆ ಮುನ್ನ RCBಗೆ ಆಘಾತ; ಪ್ರಮುಖ ವೇಗಿ ಯಶ್ ದಯಾಳ್ ಐಪಿಎಲ್‌ನಿಂದ ಔಟ್

ಮಂಗೇಶ್ ತರಬೇತಿಗೆ ಅಗತ್ಯವಾದ ಹಣವನ್ನು ಹೊಂದಿಸಲು ಅವರ ತಂದೆ ಆಗಾಗ್ಗೆ ತಮ್ಮ ಆಪ್ತರನ್ನು ಸಂಪರ್ಕಿಸಬೇಕಾಗಿತ್ತು.

ಫೂಲ್ ಚಂದ್ ಶರ್ಮಾ ಮಾತನಾಡಿ, 'ಮಂಗೇಶ್ ದೆಹಲಿಯಲ್ಲಿ ಯಾರೋ ಒಬ್ಬರೊಂದಿಗೆ ತಂಗಿದ್ದರು. ಅವರು ಒಳ್ಳೆಯ ಬೌಲರ್ ಎಂದು ನಾನು ನೋಡಿದೆ. ಆದರೆ, ಅವರ ಬಳಿ ಊಟಕ್ಕೂ ಸಾಕಷ್ಟು ಇರಲಿಲ್ಲ. ನಾನು ಅವರನ್ನು ಹಾಸ್ಟೆಲ್‌ನಲ್ಲಿ ಬಂದು ಉಳಿಯಲು ಹೇಳಿದೆ. ಅವರ ಪ್ರಯಾಣ ನಿಜವಾಗಿಯೂ ಅಲ್ಲಿಂದ ಪ್ರಾರಂಭವಾಯಿತು. ಯಾರ ಬಳಿಯಾದರೂ ಹಣವಿದೆಯೋ ಇಲ್ಲವೋ ಎಂಬುದು ನನಗೆ ಮುಖ್ಯವಲ್ಲ. ಆಟಗಾರ ಒಳ್ಳೆಯವನಾಗಿದ್ದರೆ, ಅವರು ಬರಬಹುದು, ತಿನ್ನಬಹುದು, ಉಳಿಯಬಹುದು ಮತ್ತು ಅಭ್ಯಾಸ ಮಾಡಬಹುದು' ಎಂದರು.

'ನಾನು ಸೋಮಾರಿಯಾಗಲು ಪ್ರಾರಂಭಿಸಿದ್ದೆ. ಒಂದು ದಿನ, ಸರ್ ನನಗೆ ಕರೆ ಮಾಡಿ ನನ್ನ ಬ್ಯಾಗ್ ಪ್ಯಾಕ್ ಮಾಡಿ ಮನೆಗೆ ಹೋಗುವಂತೆ ಹೇಳಿದರು. ಸ್ವಲ್ಪ ಸಮಯದ ನಂತರ, ನಾನು ಕ್ಷಮೆಯಾಚಿಸಿ, ಇದು ಮತ್ತೆ ಸಂಭವಿಸುವುದಿಲ್ಲ ಎಂದು ಹೇಳಿದೆ. ನಂತರ ನಾನು ಏನು ಕಳೆದುಕೊಳ್ಳುತ್ತಿದ್ದೇನೆ ಮತ್ತು ನನ್ನ ಬಳಿ ಏನಿದೆ ಎಂಬುದನ್ನು ಅರಿತುಕೊಂಡೆ. ನಾನು ನನ್ನ ಕುಟುಂಬವನ್ನು ನೋಡಿದೆ ಮತ್ತು ಯೋಚಿಸಿದೆ, ಅಪ್ಪ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ನನಗೆ ತುಂಬಾ ಸಮರ್ಪಿತರಾಗಿದ್ದಾರೆ' ಎಂದು ಮಂಗೇಶ್ ತಿಳಿಸಿದರು.

ಬಳಿಕ ಈ ಯುವ ವೇಗದ ಬೌಲರ್ ತರಬೇತಿಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಅವರು ಡಿಡಿಸಿಎ ಲೀಗ್, ಸ್ಥಳೀಯ ಪಂದ್ಯಾವಳಿಗಳಲ್ಲಿ ಆಡಿದರು ಮತ್ತು ಯುಪಿ ಅಂಡರ್-19 ಶಿಬಿರಕ್ಕೂ ಹಾಜರಾಗಿದ್ದರು, ಆದರೂ ಇನ್ನೂ ಮುಂದಿನ ಹೆಜ್ಜೆ ಇಡಲು ಸಾಧ್ಯವಾಗಲಿಲ್ಲ.

'ನಾನು ಆಯ್ಕೆ ಶಿಬಿರಕ್ಕೆ ಹೋಗುವ ಸಮಯಗಳು ಇದ್ದವು ಮತ್ತು ನನ್ನ ಹೆಸರನ್ನು ತಪ್ಪಾಗಿ ಕರೆಯಲಾಗಿದೆ ಎಂದು ಹೇಳಲಾಗುತ್ತಿತ್ತು. ನನ್ನ ಮಗನಿಗೆ ಈ ಕನಸನ್ನು ನೀಡುವ ಮೂಲಕ ನಾನು ದೊಡ್ಡ ತಪ್ಪು ಮಾಡಿದಂತೆ ನಾನು ಆಗ ನಾನು ಅಸಹಾಯಕನಾಗಿದ್ದೆ' ಎಂದು ಅವನ ತಂದೆ ಹೇಳಿದರು.

Rajat Patidar - Mangesh Yadav
'ನನಗಿನ್ನೂ ನಂಬಲು ಆಗುತ್ತಿಲ್ಲ': ₹5.2 ಕೋಟಿಗೆ ಮಂಗೇಶ್ ಯಾದವ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲು

ಮಧ್ಯಪ್ರದೇಶ ಟಿ20 ಲೀಗ್‌ನಲ್ಲಿ ಮಂಗೇಶ್ ಆರು ಪಂದ್ಯಗಳಲ್ಲಿ 12.00 ರ ಸರಾಸರಿಯಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದಾಗ ಈ ಮಹತ್ವದ ಕ್ಷಣ ಬಂದಿತು. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಜೊತೆಗೆ ದೇಶೀಯ ಕ್ರಿಕೆಟ್‌ನಲ್ಲಿ ಮಧ್ಯಪ್ರದೇಶ ಪರ ಆಡಿದ ನಂತರ, ಅವರಿಗೆ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ ಬಹುನಿರೀಕ್ಷಿತ ಕರೆ ಬಂದಿತು.

'ಟ್ರಯಲ್ಸ್‌ನಲ್ಲಿ, ದಿನೇಶ್ ಕಾರ್ತಿಕ್ ಸರ್ ನನ್ನ ಬಳಿಗೆ ಬಂದು, 'ನೀವು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೀರಿ' ಎಂದು ಹೇಳಿದರು. ಅವರು ನನ್ನನ್ನು ವಿಭಿನ್ನ ಸಂದರ್ಭಗಳಲ್ಲಿ ಬೌಲಿಂಗ್ ಮಾಡುವಂತೆ ಮಾಡಿದರು. ಹೊಸ ಚೆಂಡು, ಐದನೇ ಓವರ್, ಹತ್ತನೇ ಓವರ್, ಹದಿನಾಲ್ಕನೇ ಓವರ್ ಮತ್ತು ಹದಿನೆಂಟನೇ ಮತ್ತು ಇಪ್ಪತ್ತನೇ ಓವರ್‌ಗಳಲ್ಲಿಯೂ ಸಹ. ಆ ಮಟ್ಟದಲ್ಲಿ ಆಟಗಾರನು ಹೇಗೆ ಯೋಚಿಸುತ್ತಾನೆ ಎಂಬುದನ್ನು ನೋಡುವುದು ನನಗೆ ಆಶ್ಚರ್ಯಕರವಾಗಿತ್ತು ಎಂದು ಮಂಗೇಶ್ ತಿಳಿಸಿದರು.

ಹರಾಜಿನ ನಂತರ, ಮಂಗೇಶ್ ಪ್ರಯಾಣದುದ್ದಕ್ಕೂ ತಮ್ಮನ್ನು ಬೆಂಬಲಿಸಿದ ತರಬೇತುದಾರರಿಗೆ ಕೃತಜ್ಞತೆ ಸಲ್ಲಿಸಿದರು.

'ನಾನು ಕ್ಲಬ್‌ಗೆ ಹಿಂತಿರುಗಿದಾಗ, ನಾನು ಅವರನ್ನು ಭೇಟಿಯಾಗಿ ಅವರ ಪಾದಗಳನ್ನು ಮುಟ್ಟಿ, ನನ್ನ ಮೇಲೆ ನಂಬಿಕೆ ಇರಿಸಿ ಹೂಡಿಕೆ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದ ಹೇಳಲು ಬಯಸಿದ್ದೆ. ನನ್ನ ತಂದೆ ಕ್ರಿಕೆಟ್‌ನಲ್ಲಿ ನನ್ನನ್ನು ಬೆಂಬಲಿಸಿದಾಗ, ನನ್ನ ಕುಟುಂಬ ಮತ್ತು ಸಮಾಜವು ಅವರನ್ನು ಮೂರ್ಖ ಎಂದು ಭಾವಿಸಿತ್ತು, ನಾನು ಹಾಳಾಗುತ್ತೇನೆ ಎಂದು ಭಾವಿಸಿತ್ತು. ನಾನು ಸಂತೋಷವಾಗಿದ್ದೇನೆ. ಅದೇ ನನ್ನನ್ನು ಭಾವುಕನನ್ನಾಗಿ ಮಾಡುತ್ತದೆ. ನನ್ನ ತಂದೆ ಈಗ ಹೆಮ್ಮೆಯಿಂದ ನಡೆಯಬಲ್ಲರು' ಎಂದರು.

'ಒಬ್ಬ ಟ್ರಕ್ ಚಾಲಕನಿಗೆ ಇಷ್ಟೊಂದು ಗೌರವ ಸಿಗುತ್ತದೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ನಾನು ಆತನ ಬಳಿ ಕೇಳುವುದಕ್ಕಿಂತ ಹೆಚ್ಚಿನದನ್ನು ನನ್ನ ಮಗ ಮಂಗೇಶ್ ನನಗಾಗಿ ಮಾಡಿದ್ದಾರೆ' ಎಂದು ತಂದೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com