IPL 2026: RCB vs SRH, ಆಸ್ಟ್ರೇಲಿಯಾದ ಈ ಸ್ಟಾರ್ ವೇಗಿ ಆಡಲ್ಲ! ಫ್ಯಾನ್ಸ್ ಗೆ ನಿರಾಸೆ

ಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್‌ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.
RCB coach Andy Flower
ಆಂಡಿ ಫ್ಲವರ್
Updated on

ಬೆಂಗಳೂರು: ನಗರದ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ವಿರುದ್ಧದ ಆರಂಭಿಕ ಪಂದ್ಯದಲ್ಲಿ ಆಸ್ಟ್ರೇಲಿಯಾದ ವೇಗಿ ಜೋಶ್ ಹೇಜಲ್‌ವುಡ್ ಲಭ್ಯತೆಯ ಬಗ್ಗೆ ರಾಯಲ್ ಆರ್ ಸಿಬಿ ಮುಖ್ಯ ಕೋಚ್ ಆಂಡಿ ಫ್ಲವರ್ ಸ್ಪಷ್ಟೀಕರಿಸಿದ್ದಾರೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಅವರು ಆಡುತ್ತಿಲ್ಲ ಎಂದು ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿ ವೇಳೆ ಮಾತನಾಡಿದ ಫ್ಲವರ್, "ಹೇಜಲ್‌ವುಡ್ ನಿನ್ನೆ ಬಂದರು. ಅವರು ಫಿಟ್ ಆಗಿ ಇರುವಂತೆ ಕಾಣುತ್ತಿದ್ದಾರೆ. ಆದರೆ, ಸಂಪೂರ್ಣ ಫಿಟ್ ನೆಸ್ ಪಡೆಯಲು ಹಾರ್ಡ್ ವರ್ಕ್ ಮಾಡುತ್ತಿದ್ದಾರೆ ಎಂದರು.

ಜೋಶ್ ಹೇಜಲ್ ವುಡ್ ಇಲ್ಲಿರುವುದು ತುಂಬಾ ಸಂತೋಷವಾಗಿದೆ. ಡ್ರೆಸ್ಸಿಂಗ್ ರೂಮ್‌ ಮತ್ತು ಮಾತುಕತೆ ವೇಳೆ ಅವರು ನಮ್ಮೊಂದಿಗೆ ಇರುವುದು ತುಂಬಾ ಸಂತಸ. ಈಗಷ್ಟೇ ಬಂದಿರುವುದರಿಂದ ನಾಳಿನ ಪಂದ್ಯಕ್ಕೆ ಸಿದ್ಧರಿಲ್ಲ. ಅವರ ಫಿಟ್‌ನೆಸ್ ಮೇಲೆ ನಿಗಾವಣೆ ಇಟ್ಟಿದ್ದೇವೆ. ಅವರು ಐಪಿಎಲ್‌ಗೆ ಪ್ರವೇಶಿಸುವುದನ್ನು ಎದುರು ನೋಡುತ್ತೇವೆ ಎಂದು ತಿಳಿಸಿದರು.

RCB coach Andy Flower
IPL 2026: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ವೈಖರಿಗೆ ಬೌಲರ್‌ಗಳೇ ಹೆದರುತ್ತಾರೆ; ಕಾರಣ ತಿಳಿಸಿದ RCB ಆಟಗಾರ ಜಿತೇಶ್ ಶರ್ಮಾ

ಕಳೆದ ವರ್ಷ ಆರ್ ಸಿಬಿ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ 35 ವರ್ಷದ ಹೇಜಲ್ ವುಡ್ ಪಾತ್ರ ಮಹತ್ವದ್ದಾಗಿತ್ತು. 22 ವಿಕೆಟ್ ಪಡೆಯುವ ಮೂಲಕ ಅತ್ಯಂತ ಹೆಚ್ಚಿನ ವಿಕೆಟ್ ಪಡೆದವರ ಸಾಲಿನಲ್ಲಿ ಮೂರನೇ ಸ್ಥಾನದಲ್ಲಿದ್ದರು.

ಇದೇ ವೇಳೆ ಭಾರತದ ವೇಗಿಗಳಾದ ಅಭಿನಂದನ್ ಸಿಂಗ್, ರಾಸಿಕ್ ದಾರ್ ಸಲಂ ಮತ್ತು ಮಂಗೇಶ್ ಯಾದವ್ ಲಭ್ಯತೆ ಕುರಿತು ಪ್ರತಿಕ್ರಿಯಿಸಿದ ಆ್ಯಂಡಿ ಪ್ಲವರ್, ಈ ಬಾರಿ ಯಶ್ ದಯಾಳ್ ನಮ್ಮೊಂದಿಗೆ ಇಲ್ಲ. ಹೀಗಾಗಿ ಮಂಗೇಶ್, ಅಭಿನಂದನ್ ಮತ್ತು ರಾಸಿಕ್ ಅವರು ಆಡಲಿದ್ದಾರೆ. ಯಶ್ ದಯಾಳ್ ಬದಲಿಗೆ ಮಂಗೇಶ್ ಆಯ್ಕೆಯಾಗಿರುವುದು ಸಂತಸದ ವಿಚಾರವಾಗಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com