ಜಿಲ್ಲಾ ಸುದ್ದಿ

ಬೆಳಗಾವಿ ರಾಜಕೀಯ ಮುಖಂಡರು ಅಸಮರ್ಥರು

ಬೆಳಗಾವಿ ರಾಜಕೀಯ ಮುಖಂಡರು ಅಸಮರ್ಥರು
Published On :

ಹುಬ್ಬಳ್ಳಿ: ಬೆಳಗಾವಿಯಲ್ಲಿರುವ ರಾಜಕೀಯ ಮುಖಂಡರು ಅಸಮರ್ಥರು. ಇವರಿಗೆ ಮತ ರಾಜಕಾರಣವೇ ಮುಖ್ಯ. ಕನ್ನಡಿಗರ ಪರ ದನಿ ಎತ್ತಿದರೆ ಎಲ್ಲಿ ಕುರ್ಚಿ ಕಳೆದುಕೊಳ್ಳಬೇಕಾಗುತ್ತದೋ ಎನ್ನುವ ಭೀತಿ ಇವರಿಗೆ ಎಂದು ನಾಡೋಜ ಡಾ! ಪಾಟೀಲ ಪುಟ್ಟಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿಯಲ್ಲಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಳ್ಳೂರ ವಿಷಯವಾಗಿ ಇಷ್ಟೊಂದು ರಾದ್ಧಾಂತ ನಡೆಯುತ್ತಿದ್ದರೂ ಬೆಳಗಾವಿಯ ರಾಜಕೀಯ ಮುಖಂಡರು ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಸರ್ಕಾರವೂ ಈ ವಿಷಯವಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದರು.

ಕೋರ್ಟ್‌ಗೆ ಅಧಿಕಾರವಿಲ್ಲ: ಗಡಿ ವಿಷಯದಲ್ಲಿ ಸುಪ್ರೀಂಕೋರ್ಟ್ ನಿಲುವೂ ತಪ್ಪಿದೆ. ಗಡಿ ವಿಷಯ ಪರಿಹಾರ ಮಾಡುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇಲ್ಲ. ಈ ಸಮಸ್ಯೆ ಪರಿಹರಿಸುವ ಅಧಿಕಾರ ಸಂಸತ್ತಿಗೆ ಮಾತ್ರ ಇರುವುದು. ಇಷ್ಟಿದ್ದಾಗಿಯೂ 10 ವರ್ಷಗಳಿಂದ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆ ನಡೆಸುತ್ತಿರುವುದು ಏಕೆ ಎಂದೇ ತಿಳಿಯದಾಗಿದೆ ಎಂದು ಪಾಪು ಹೇಳಿದರು.

ಮರಾಠಿಗರಿಗೆ ಅನ್ಯಾಯ ಮಾಡಿಲ್ಲ: ಮಹಾರಾಷ್ಟ್ರ ಮೂಲದವರು ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರ ಎಂದೂ ಅನ್ಯಾಯ ಮಾಡಿಲ್ಲ. ಇಂದಿಗೂ ಕರ್ನಾಟಕದಲ್ಲಿ ಮರಾಠಿ ಶಾಲೆಗಳಿವೆ, ಮರಾಠಿ ಜನರಿದ್ದಾರೆ. ಆದರೆ, ಯಾರಿಗೂ ತೊಂದರೆ ಮಾಡಿಲ್ಲ. ಆದರೂ ಮಹಾರಾಷ್ಟ್ರದವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಉದ್ಧಟತನದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದು ಪಾಪು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.