ನೊಂದ ಅಭ್ಯರ್ಥಿಗಳ ನೆನೆದು ಕಣ್ಣೀರಿಟ್ಟ ಕುಮಾರಸ್ವಾಮಿ!

ಬೆಂಗಳೂರು: 2011ರ ಕೆಪಿಎಸ್ಸಿ ನೇಮಕಾತಿ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ನೊಂದ ಅಭ್ಯರ್ಥಿಗಳು ಫ್ರೀಡಂಪಾರ್ಕ್ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಸಾಥ್ ನೀಡಿರುವ ಕುಮಾರಸ್ವಾಮಿ ಅವರು, ನೊಂದ ಅಭ್ಯರ್ಥಿಗಳನ್ನು ನನೆದು ಕಣ್ಣೀರಿಟ್ಟಿದ್ದಾರೆ.
ಸರ್ಕಾರ ನೇಮಕಾತಿ ರದ್ದು ಮಾಡಿದ್ದರಿಂದ ಬಡ ಅಭ್ಯರ್ಥಿಗಳ ಭವಿಷ್ಯಕ್ಕೆ ಕಲ್ಲು ಬಿದ್ದಿದೆ. ಕಷ್ಟಪಟ್ಟು ತಮ್ಮ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಕಟ್ಟುಕೊಳ್ಳುವ ಅವರ ಆಸೆಗೆ ತಣ್ಣೀರು ಎರೆಚಲಾಗಿದೆ ಎಂದು ಅಭ್ಯರ್ಥಿಗಳನ್ನು ನೆನೆದು ಎಚ್ಡಿಕೆ ಕಣ್ಣೀರಿಟ್ಟರು. ಕೆಪಿಎಸ್ಸಿ ನೇಮಕಾತಿಯನ್ನು ರದ್ದು ಮಾಡುವುದರ ಬದಲು ಕೆಪಿಎಸ್ಸಿಯನ್ನೇ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಡಾ. ಮೈತ್ರಿ ಹೆಣ್ಣುಮಗಳೇನು. ಇಷ್ಟೊಂದು ಜನ ಅಭ್ಯರ್ಥಿಗಳು ಕಣ್ಣೀರು ಸುರಿಸುತ್ತಿದ್ದರೆ ಡಾ.ಮೈತ್ರಿಗೆ ಹೆಣ್ಣುಮಕ್ಕಳಿಗಿರುವ ಮಮತೆ, ಕರುಣೆ ಇಲ್ಲವೇ" ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಕೆಪಿಎಸ್ಸಿ ಹಗರಣದ ನಿಜವಾದ ಆರೋಪಿ ಡಾ. ಮೈತ್ರಿ. ಮೈತ್ರಿ ಮತ್ತು ಅವರ ತಂದೆ ಹಲವಾರು ಬಾರಿ ಕೆಪಿಎಸ್ಸಿ ಸದಸ್ಯೆಗೆ ಫೋನ್ ಮಾಡಿದ್ದರು ಎಂದು ಅವರು ಹೇಳಿದರು.
ಡೀಲ್ ಪ್ರಕರಣ; ಕೇಂದ್ರದ ತನಿಖೆಯನ್ನು ಸ್ವಾಗತಿಸುತ್ತೇನೆ: ಎಚ್ಡಿಕೆ
ಎಂಎಲ್ಸಿ ಆಯ್ಕೆಗಾಗಿ ಎಚ್ಡಿಕೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನಿಖೆ ನಡೆಸಿದರೆ ನಾನು ಮನಸ್ಫೂರ್ತಿಯಾಗಿ ಸ್ವಾಗತಿಸುತ್ತೇನೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ರಾಷ್ಟ್ರಪತಿ ಕಾರ್ಯಾಲಯ ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನಿಖೆ ನಡೆಸಲಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಪ್ರಕರಣದ ಸಂಬಂಧ ಕೇಂದ್ರ ಸರ್ಕಾರ ತನಿಖೆ ನಡೆಸಿದರೆ ಅದನ್ನು ಸ್ವಾಗತಿಸುತ್ತೇನೆ ಎಂದರು. ಕೇಂದ್ರ ಸರ್ಕಾರ ತನಿಖೆ ನಡೆಸಿದರೆ ಕೇವಲ ನನ್ನ ಸಿಡಿ ಪ್ರಕರಣವನ್ನು ಮಾತ್ರ ತನಿಖೆ ಮಾಡುತ್ತಾರಾ ಅಥವಾ ಬೇರೆ ಪಕ್ಷಗಳ ಬಗ್ಗೆಯೂ ತನಿಖೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


