ಸದ್ದಿಲ್ಲದೆ ಶುಲ್ಕ ಹೆಚ್ಚಿಸಿದ ಬೆಂಗಳೂರು ವಿವಿ

ಬೆಂಗಳೂರು: ಎರಡು ವರ್ಷಗಳಿಂದ ಶುಲ್ಕ ಹೆಚ್ಚಳ ಮಾಡಿಲ್ಲ ಎಂದು ಸರ್ಕಾ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೆ, ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿ(ಯುವಿಸಿಇ)ನಲ್ಲಿ ಸದ್ದಿಲ್ಲದೆ ಶುಲ್ಕ ದುಪ್ಪಟ್ಟು ಮಾಡಲಾಗಿದೆ.
ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳ ಶುಲ್ಕ ರುಪಾಯಿ 18,090 ಎಂದು ನಿಗದಿಪಡಿಸಲಾಗಿದೆ.
ಆದರೆ ಯುವಿಸಿಯಲ್ಲಿ ಏಕಾಏಕಿ ಶುಲ್ಕವನ್ನು ರುಪಾಯಿ 34,090ಕ್ಕೆ ಏರಿಸಲಾಗಿದೆ. ವಿವಿಯ ಆರ್ಥಿಕ ಕೊರತೆಯನ್ನು ಬಡ ವಿದ್ಯಾರ್ಥಿಗಳು ತುಂಬಿಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಚಿತ್ರವೆಂದರೆ ಪ್ರಸಕ್ತ ಸಾಲಿನಿಂದ ಅನ್ಯಯವಾಗುವಂತೆ ವಿವಿಯ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆದು 3 ವರ್ಷದ ಹಿಂದೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಂದಲೂ ಶುಲ್ಕ ವಸೂಲಿಗೆ ವಿವಿ ಮುಂದಾಗಿದೆ.
ಉನ್ನತ ಶಿಕ್ಷಣ ಇಲಾಖೆ ನಿರ್ದೇಶನದ ಪ್ರಕಾರ ಸರ್ಕಾರದ ಅನುಮತಿಯಿಲ್ಲದೆ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಆದರೆ ಜೂ.26 ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಶುಲ್ಕ ಹೆಚ್ಚಳ ಅನುಮೋದಿಸಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಕಾಲೇಜು ಅಭಿವೃದ್ಧಿ ಶುಲ್ಕದ ಹೆಸರಲ್ಲಿ ರುಪಾಯಿ 16 ಸಾವಿರ ಹೆಚ್ಚಿಸಲಾಗಿದೆ. ಆದರೆ ಇದಕ್ಕೆ ಯಾವುದೇ ಕಾರಣವನ್ನು ವಿವಿ ನೀಡಿಲ್ಲ.
ಇದರ ಜತೆಗೆ ಕಾಲೇಡಿನ ಆಡಳಿತ ಮಂಡಳಿ ಕೂಡ ಶುಲ್ಕ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ವಿವಿ ಪರಿಗಣಿಸಿಲ್ಲ. ಹಳೆಯ ವಿದ್ಯಾರ್ಥಿಗಳಿಗೂ ಹೊಸ ಶುಲ್ಕ: ಸಿಂಡಿಕೇಟ್ ಸಭೆ ನಿರ್ಧಾರ ಆಧರಿಸಿ ಜು.28 ರಂದು ವಿವಿಯಿಂದ ಈ ಆದೇಶ ಹೊರಬಿದ್ದಿದೆ. ಆದರೆ 2011-12ನೇ ಸಾಲಿನಿಂದ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೂ ಶುಲ್ಕ ಪರಿಷ್ಕರಣೆ ಅನ್ವಯ ಮಾಡಲಾಗಿದೆ.
ಕಳೆದ 3 ವರ್ಷಗಳಿಂದ 18,090 ರುಪಾಯಿ ಶುಲ್ಕ ತುಂಬಿರುವ ವಿದ್ಯಾರ್ಥಿಗಳಿಗೆ ವಿವಿಯ ನಿರ್ಧಾರದಿಂದ ಸಿಡಿಲು ಬಡಿದಂತಾಗಿದೆ. ಶುಲ್ಕ ಹೆಚ್ಚಳಕ್ಕೂ ಮುಂಚೆ ಪ್ರಸ್ತಾವನೆಯನ್ನು ವಿದ್ಯಾರ್ಥಿಗಳ ಗಮನಕ್ಕೆ ತರಬೇಕು ಎಂದು ಇದೇ ಸರ್ಕಾರ ನಿಯಮ ಹೇಳತ್ತದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಈ ರೀತಿ ವರ್ತಿಸಿದರೆ ನೋಟಿಸ್ಗಳ ಸುರಿಮಳೆ ಹರಿಸಲಾಗುತ್ತಿತ್ತು. ಸಂಜೆ ಕಾಲೇಜು ಶುಲ್ಕದ ಜತೆಗೆ ಸಾಮಾನ್ಯ ಕೋರ್ಸ್ ಶುಲ್ಕವನ್ನು 24.430 ರುಪಾಯಿಗಳಿಗೆ ಏರಿಸಲಾಗಿದೆ. ಈ ವಿದ್ಯಾರ್ಥಿಗಳೂ ಹೊಸ ಶುಲ್ಕ ಭರಿಸಬೇಕಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


