ಮೋದಿ ಬೆಳೆಯುವಾಗ ಎಚ್ಚರ ತಪ್ಪಿದ್ದೆವು: ಲಲಿತಾ ನಾಯಕ್

ಬೆಂಗಳೂರು: ದೇಶದಲ್ಲಿ ನರೇಂದ್ರ ಮೋದಿ ಬಲಾಢ್ಯರಾಗಿ ಬೆಳೆಯುವಾಗ ಎಡಪಂಥೀಯ ಧೋರಣೆಯುಳ್ಳ ನಾವು ಎಚ್ಚರ ತಪ್ಪಿದ್ದನ್ನು ಒಪ್ಪಿಕೊಳ್ಳಲೇಬೇಕು. ಇಂಥ ಮೋದಿತ್ವದ ಬಗ್ಗೆ ನಾವು ಈಗಲಾದರೂ ಚಿಂತನೆ ನಡೆಸಿ ಜಾಗೃತರಾಗಬೇಕು ಎಂದು ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಹೇಳಿದರು.
ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಶನಿವಾರ ಬೆನ್ಸನ್ ಟೌನ್ನ ಇಂಡಿಯಾನ್ ಸೋಷಿಯಲ್ ಇನ್ಸ್ಟಿಟ್ಯೂಟ್ನಲ್ಲಿ ಆಯೋಜಿಸಿದ್ದ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳ ಅಖಿಲ ಭಾರತ ಮಟ್ಟದ ಚಿಂತನಾ ಸಭೆಯ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಎಡಪಂಥೀಯ ವಿಚಾರಗಳು ನೆಲಕಚ್ಚಿದ್ದು, ಬಲಪಂಥೀಯ ಧೋರಣೆಗಳು ದೇಶದಲ್ಲಿ ವಿಜೃಂಭಿಸುತ್ತಿವೆ. ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯುಬೇಕಾದರೆ ನಾವು ಸಂಘಟಿತರಾಗಿ ಹೋರಾಡಲೇಬೇಕು ಎಂದು ಹೇಳಿದರು. ಗಂಗಾ ಶುದ್ದೀಕರಣವನ್ನು ಕೈಗೆತ್ತಿಕೊಂಡು ನ್ಯಾಯಾಂಗ ವ್ಯವಸ್ತೆಯ ಮೇಲೆ ಹಿಡಿತ ಸಾಧಿಸುವ ಮೂಲಕ ದೇಶದಲ್ಲಿ ಹಿಂದೂ ರಾಜ್ಯ ಸ್ಥಾಪನೆಯ ಹುನ್ನಾರವನ್ನು ಮೋದಿ ನಡೆಸಿದ್ದಾರೆ. ನಾವು ಹತಾಶರಾಗಬೇಕಿಲ್ಲ. ಈ ಚಿಂತನಾ ಸಭೆ ಇದರಿಂದ ಹೊರಬರುವ ನಿಟ್ಟಿನಲ್ಲಿ ರೂಪರೇಷೆ ರೂಪಿಸಲಿ ಎಂದರು.
ಮೋದಿ ಸರ್ಕಾರ ಆಶಾದಾಯಕವಾಗಿಲ್ಲ, ಆರೋಗ್ಯಕರವಾಗಿಯೂ ಇಲ್ಲ. ಹಿಂದು-ಮುಸ್ಲಿಂ ಕೋಮುವಾದ ವಿಷಯವನ್ನು ಸಂಘ ಪರಿವಾರದ ಬಿಜೆಪಿ ರಾಜಕೀಯ ದಾಳವಾಗಿ ಬಳಿಸಿಕೊಂಡು ಅಧಿಕಾರಕ್ಕೆ ಬಂತು ಎಂದು ಮುಂಬೈನ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟ್ಲವಾಡ್ ಟೀಕಿಸಿದರು. ಪ್ರಜಾಪ್ರಭುತ್ವ ವ್ಯವಸ್ಥೆ ಪ್ರೀತಿಸುವ ಯಾರೇ ಆದರೂ ಮೋದಿಗೆ ಬೆಂಬಲ ನೀಡಬಾರದು. ಕಾರ್ಪೊರೇಟ್ ವಲಯದ ಕುಮ್ಮಕ್ಕಿನಿಂದ ಬೆಳೆದಿರುವ ಮೋದಿಯ ಬದಲಾವಣೆ ವಿಚಾರಗಳು ಕನಸಿನಲ್ಲಿ ಮಾತ್ರ ಎಂಬಂತಿವೆ. ಅವರೊಬ್ಬ ಕನಸುಗಳ ಮಾರಾಟಗಾರ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


