ಜಿಲ್ಲಾ ಸುದ್ದಿ

2011-12ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ 'ದರ್ಶನ್'

2011-12ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಪ್ರಕಟ: ಅತ್ಯುತ್ತಮ ನಟ 'ದರ್ಶನ್'
Published On :

ಬೆಂಗಳೂರು: 2011-12ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಗೊಂಡಿದ್ದು, ಸಂಗೊಳ್ಳಿ ರಾಯಣ್ಣ ಚಿತ್ರದ ನಟನೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಹಾಗೂ ತಲ್ಲಣ ಚಿತ್ರದ ನಟನೆಗಾಗಿ ನಟಿ ನಿರ್ಮಲಾ ಚೆನ್ನಪ್ಪ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಸುದರ್ಶನ್ ನಿರ್ದೇಶನದ 'ತಲ್ಲಣ' ಚಿತ್ರ ಕನ್ನಡದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ.  ಪಿ. ಶೇಷಾದ್ರಿ ನಿರ್ದೇಶನದ 'ಭಾರತ್ ಸ್ಟೋರ್ಸ್' ಹಾಗೂ ಸುಮನ ಕಿತ್ತೂರ್ ನಿರ್ದೇಶನದ 'ಎದೆಗಾರಿಕೆ' ಚಿತ್ರಗಳು ಕ್ರಮವಾಗಿ ಎರಡು ಹಾಗೂ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿವೆ.

2011-12ನೇ ಸಾಲಿನ ಪ್ರಶಸ್ತಿ ಪಟ್ಟಿ ಇಂತಿದೆ:
ಡಾ. ರಾಜ್‌ಕುಮಾರ್ ಪ್ರಶಸ್ತಿ- ಎನ್, ಭಕ್ತವತ್ಸಲ
ಡಾ. ವಿಷ್ಣುವರ್ಧನ್ ಪ್ರಶಸ್ತಿ- ಹಿರಿಯ ನಟ ರಾಜೇಶ್
ಪುಟ್ಟಣ್ಣ ಕಣಗಾಲ್ ಪ್ರಶಸ್ತಿ- ದತ್ತರಾಜ್
ಅತ್ಯುತ್ತಮ ನಟ- ದರ್ಶನ್(ಸಂಗೊಳ್ಳಿ ರಾಯಣ್ಣ)
ಅತ್ಯುತ್ತಮ ನಟಿ- ನಿರ್ಮಲಾ ಚೆನ್ನಪ್ಪ(ತಲ್ಲಣ)
ಅತ್ಯುತ್ತಮ ಪೋಷಕ ನಟ- ಕರಿಸುಬ್ಬು(ಕಳವು)
ಅತ್ಯುತ್ತಮ ಪೋಷಕ ನಟಿ- ಅರುಣ್ ಬಾಲರಾಜ್(ಒಲವಿನ ಓಲೆ)
ಅತ್ಯುತ್ತಮ ಪ್ರಥಮ ಚಿತ್ರ ನಿರ್ದೇಶಕ- ಸಂತು(ಅಲೆಮಾರಿ)
ಅತ್ಯುತ್ತಮ ಮನರಂಜನಾ ಚಿತ್ರ- ಸಂಗೊಳ್ಳಿ ರಾಯಣ್ಣ
ಅತ್ಯುತ್ತಮ ಸಂಗೀತ ನಿರ್ದೇಶಕ- ಅರ್ಜುನ್ ಜನ್ಯ(ಅಲೆಮಾರಿ)
ಅತ್ಯುತ್ತಮ ಪ್ರಾದೇಶಿಕ ಚಿತ್ರ- ಕೆಂಚಾವರಂ(ಬಂಜಾರ ಭಾಷೆ)
ಅತ್ಯುತ್ತಮ ಬಾಲ ನಟ- ಮಾಸ್ಟರ್ ವಿ. ಅನಿಲ್ ಕುಮಾರ್(ಕಾರಣಿಕ ಶಿಶು)
ಅತ್ಯುತ್ತಮ ಬಾಲ ನಟಿ- ಬೇಬಿ ಲೇಪನ (ಶೇಷು)
ಅತ್ಯುತ್ತಮ ಕಥೆ ಬರಹಗಾರ- ಸಾಹಿತಿ ಬರಗೂರು ರಾಮಚಂದ್ರಪ್ಪ(ಅಂಗುಲಿ ಮಾಲ)
ಅತ್ಯುತ್ತಮ ಚಿತ್ರಕಥೆ ಬರಹಗಾರ- ಕೆ.ವೈ. ನಾರಾಯಣಸ್ವಾಮಿ
ವಿಶೇಷ ಸಾಮಾಜಿಕ ಚಿತ್ರ- ಲಿಟ್ಲ್ ಮಾಸ್ಟರ್
ಅತ್ಯುತ್ತಮ ಹಿನ್ನೆಲೆ ಗಾಯಕ- ವಾಸು ದೀಕ್ಷಿತ್
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನುರಾಧ ಭಟ್
ಅತ್ಯುತ್ತಮ ಸಂಭಾಷಣೆ- ಎಂ.ಎಸ್ ರಮೇಶ್(ಭೀಮಾತೀರದಲ್ಲಿ)
ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ: ಕಾರಣಿಕ ಶಿಶು
ಅತ್ಯುತ್ತಮ ಮಕ್ಕಳ ಚಿತ್ರ- ಲಿಟ್ಲ್ ಮಾಸ್ಟರ್
ಅತ್ಯುತ್ತಮ ಛಾಯಾಗ್ರಾಹಕ- ರಾಕೇಶ್
ಅತ್ಯುತ್ತಮ ಸಂಕಲನಕಾರ- ಪಿ.ಅರ್. ಸೌಂದರರಾಜ್
ಅತ್ಯುತ್ತಮ ಕಲಾ ನಿರ್ದೇಶಕ- ಭೇಮೇಶಪ್ಪ
ಅತ್ಯುತ್ತಮ ಗೀತ ರಚನೆಕಾರ- ಬಿ.ಹೆಚ್. ಮಲ್ಲಿಕಾರ್ಜುನ್
ತೀರ್ಪುಗಾರರ ವಿಶೇಷ ಪ್ರಶಸ್ತಿ- ರವಿವರ್ಮ



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.